ಮಂಗಳವಾರ, ಮಾರ್ಚ್ 2, 2021
23 °C
ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಮುಖಭಂಗ

ಎಂದೂ ಮರೆಯದ ಜಯ | ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಮುಖಭಂಗ, ಭಾರತಕ್ಕೆ ಟ್ರೋಫಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬ್ರಿಸ್ಬೇನ್ : ಅಜಿಂಕ್ಯ ರಹಾನೆ ನಾಯಕತ್ವದ ಯುವಪಡೆಯು  ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಟೆಸ್ಟ್‌ ಸರಣಿಯಲ್ಲಿ ಸೋಲಿಸಿ, ಬಾರ್ಡರ್‌–ಗಾವಸ್ಕರ್ ಟ್ರೋಫಿ ಜಯಿಸಿತು.

ಗಾಬಾ ಕ್ರೀಡಾಂಗಣದಲ್ಲಿ ಮಂಗಳವಾರ ಮುಕ್ತಾಯವಾದ ಸರಣಿಯ ಕೊನೆಯ ಟೆಸ್ಟ್‌ನಲ್ಲಿ328 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡವು 3 ವಿಕೆಟ್‌ಗಳಿಂದ ಜಯಭೇರಿ ಬಾರಿಸಿತು. ನಾಲ್ಕು ಪಂದ್ಯಗಳ ಸರಣಿಯನ್ನು 2–1ರಿಂದ ಗೆದ್ದಿತು.

ಸತತ ಎರಡನೇ ಸಲ ಆಸ್ಟ್ರೇಲಿಯಾವನ್ನು ಅದರ ನೆಲದಲ್ಲಿಯೇ ಮಣಿಸಿತು. 2018–19ರಲ್ಲಿ ಭಾರತ ಇಲ್ಲಿ ಪ್ರಥಮ ಬಾರಿ ಸರಣಿ ಗೆದ್ದು ದಾಖಲೆ ಮಾಡಿತ್ತು. ಆತಿಥೇಯ ತಂಡವು ಕಳೆದ 32 ವರ್ಷಗಳಿಂದ ಗಾಬಾ ಕ್ರೀಡಾಂಗಣದಲ್ಲಿ ಒಂದೂ ಪಂದ್ಯ ಸೋತಿರಲಿಲ್ಲ. ಈಗ ಭಾರತದ ಎದುರು ಮುಖಭಂಗ ಅನುಭವಿಸಿತು. ಇಲ್ಲಿ ಭಾರತವು ಗೆದ್ದ ಮೊದಲ ಪಂದ್ಯ ಇದಾಗಿದೆ.

ಪಂದ್ಯದ ಐದನೇ ದಿನ ಬೆಳಿಗ್ಗೆ ಅನುಭವಿ ರೋಹಿತ್ ಶರ್ಮಾ (7) ಔಟಾದಾಗ  ಯುವಬ್ಯಾಟ್ಸ್‌ಮನ್ ಶುಭಮನ್ ಗಿಲ್ (91; 146ಎಸೆತ) ದಿಟ್ಟತನದಿಂದ ಆಡಿದರು. ತಮ್ಮ ವೃತ್ತಿಜೀವನದ ಮೂರನೇ ಟೆಸ್ಟ್‌ನಲ್ಲಿ  ಆಡಿದ ಗಿಲ್, ಕೇವಲ ಒಂಬತ್ತು ರನ್‌ಗಳ ಅಂತರದಿಂದ ಶತಕ ತಪ್ಪಿಸಿಕೊಂಡರು.  ಆದರೆ ಜಯದ ಕನಸಿಗೆ ಗಟ್ಟಿ ಅಡಿಪಾಯ ಹಾಕಿದರು. ಅದರ ಮೇಲೆ ಚೇತೆಶ್ವರ್ ಪೂಜಾರ (56; 211ಎಸೆತ) ’ಗೋಡೆ‘ ಕಟ್ಟಿದರೆ, ರಿಷಭ್ ಪಂತ್ (ಅಜೇಯ 89)ಗೆಲುವಿನ ಗೋಪುರ ನಿರ್ಮಿಸಿದರು. ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ನವಪ್ರತಿಭೆಗಳು ಮಿಂಚಿದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು