ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಲ್‌ ಕ್ರಿಕೆಟ್: ಜಯದ ಅರಮನೆ ಕಟ್ಟಿದ ಮೈಸೂರು ವಾರಿಯರ್ಸ್‌

ರಾಜು, ಅಮಿತ್‌ ವರ್ಮಾ ಅರ್ಧಶತಕದ ಸೊಗಸು
Last Updated 20 ಆಗಸ್ಟ್ 2018, 19:53 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅನುಭವಿ ಬ್ಯಾಟ್ಸ್‌ಮನ್‌ಗಳಾದ ಅಮಿತ್‌ ವರ್ಮಾ (59, 46 ಎಸೆತ, 7 ಬೌಂಡರಿ, 2 ಸಿಕ್ಸರ್‌) ಮತ್ತು ರಾಜು ಭಟ್ಕಳ (48, 38 ಎಸೆತ, 4 ಬೌಂಡರಿ, 2 ಸಿಕ್ಸರ್‌) ಹಾಕಿಕೊಟ್ಟ ಗಟ್ಟಿ ಬುನಾದಿ ಮೇಲೆ ಉಳಿದ ಬ್ಯಾಟ್ಸ್‌ಮನ್‌ಗಳು ರನ್‌ ಸೌಧ ಕಟ್ಟಿದರು. ಇದರಿಂದ ಮೈಸೂರು ವಾರಿಯರ್ಸ್ ತಂಡ ಸುಲಭವಾಗಿ ಗೆಲುವು ಪಡೆಯಿತು.

ಇಲ್ಲಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಕೆಪಿಎಲ್‌ ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ಸ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 145 ರನ್‌ ಗಳಿಸಿತ್ತು. ಈ ಗುರಿಯನ್ನು ವಾರಿಯರ್ಸ್‌ ಪಡೆ 18.5 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಜೊತೆಯಾಟದ ಬಲ: ಟಸ್ಕರ್ಸ್‌ ತಂಡ ಆರಂಭದಲ್ಲಿ ಬೇಗನೆ ವಿಕೆಟ್‌ ಕಳೆದುಕೊಂಡಿತ್ತು. ಎರಡನೇ ವಿಕೆಟ್‌ಗೆ ಜೊತೆಯಾದ ರೋಹಮ್‌ ಮತ್ತು ದೇವದತ್‌ 92 ರನ್‌ಗಳ ಜೊತೆಯಾಟವಾಡಿ ಟಸ್ಕರ್ಸ್‌ ತಂಡಕ್ಕೆ ಆಸರೆಯಾದರು. ಆರಂಭಿಕ ಬ್ಯಾಟ್ಸ್‌ಮನ್‌ ರೋಹನ್‌ 59 ಮತ್ತು ದೇವದತ್‌ 60 ರನ್ ಗಳಿಸಿದರು.

ಆರಂಭದ ಏಳುಬೀಳಿನ ನಂತರ ಟಸ್ಕರ್ಸ್ ತಂಡ ಕೊನೆಯಲ್ಲಿ ದಿಢೀರನೇ ಕುಸಿಯಿತು.

ಸಂಕ್ಷಿಪ್ತ ಸ್ಕೋರು: ಬಳ್ಳಾರಿ ಟಸ್ಕರ್ಸ್‌, 20 ಓವರ್‌ಗಳಲ್ಲಿ 8 ವಿಕೆಟ್‌ಗೆ 145 (ರೋಹನ್‌ ಕದಮ್‌ 59, ದೇವದತ್‌ ಪಡಿಕ್ಕಲ್‌ 60; ವೈಶಾಕ್‌ ವಿಜಯ ಕುಮಾರ್‌ 20ಕ್ಕೆ 4, ಜೆ. ಸುಚಿತ್‌ 2).

ಮೈಸೂರು ವಾರಿಯರ್ಸ್‌, 18.5 ಓವರ್‌ಗಳಲ್ಲಿ 3 ವಿಕೆಟ್‌ಗೆ 147 (ರಾಜು ಭಟ್ಕಳ 48, ಅಮಿತ್‌ ವರ್ಮಾ 59, ಶೊಯಬ್‌ ಮ್ಯಾನೇಜರ್‌ ಅಜೇಯ 12; ಅಬ್ರಾರ್‌ ಖಾಜಿ 20ಕ್ಕೆ2) ಫಲಿತಾಂಶ: ಮೈಸೂರು ವಾರಿಯರ್ಸ್‌ ತಂಡಕ್ಕೆ 7 ವಿಕೆಟ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT