ಸೋಮವಾರ, ಜೂನ್ 1, 2020
27 °C

ಅಥ್ಳೀಟ್‌ಗಳಿಗೆ ರಾಹುಲ್ ದ್ರಾವಿಡ್ ಸಲಹೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೊರೊನಾ ವೈರಸ್ ಸೋಂಕು ತಡೆಗೆ ಲಾಕ್‌ಡೌನ್ ವಿಧಿಸಲಾಗಿದೆ. ಎಲ್ಲವೂ ಮುಕ್ತವಾದ ನಂತರ ಕ್ರೀಡಾ ಚಟುವಟಿಕೆಗಳು ಆರಂಭವಾಗುತ್ತವೆ. ಆಗ ಅಥ್ಲೀಟ್‌ಗಳನ್ನು ಸಂಶಯ, ಹಿಂಜರಿಕೆ ಮತ್ತು ಭಯ ಕಾಡಬಹುದು.  ಆದರೆ ಇದು ದೊಡ್ಡ ಸಮಸ್ಯೆಯಲ್ಲ ಎಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಅವರು ಒಲಿಂಪಿಯನ್ ಶೂಟಿಂಗ್ ಪಟು ಅಭಿನವ್ ಬಿಂದ್ರಾ ಮತ್ತು ಬ್ಯಾಡ್ಮಿಂಟನ್ ದಿಗ್ಗಜ ಪ್ರಕಾಶ ಪಡುಕೋಣೆ ಅವರೊಂದಿಗೆ ನಡೆದ ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿದರು.

’ಕ್ರೀಡಾಪಟುಗಳು ಈ ಸಮಸ್ಯೆಯನ್ನು ಹಿಂದಿಕ್ಕಿ ಲಯಕ್ಕೆ ಬರಲು ಸಮಯಾವಕಾಶ ನೀಡಬೇಕು. ಎಲ್ಲರೂ ಆತ್ಮವಿಶ್ವಾಸದಿಂದಿರಬೇಕು. ದೃತಿಗೆಡದೇ ಕಾರ್ಯನಿರ್ವಹಿಸಿದರೆ ಈ ಸಮಸ್ಯೆ ದೊಡ್ಡದಾಗುವುದಿಲ್ಲ‘ ಎಂದು ದ್ರಾವಿಡ್ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು