ಶಾರ್ಜಾ: ಅಫ್ಗಾನಿಸ್ತಾನ ಬೌಲರ್‌ಗಳ ಪರಿಣಾಮಕಾರಿ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ತಂಡವು ಬುಧವಾರ ಮೊದಲ ಏಕದಿನ ಪಂದ್ಯದಲ್ಲಿ ಆರು ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿತು.
ಮೂರು ಪಂದ್ಯಗಳ ಸರಣಿಯಲ್ಲಿ ಅಫ್ಗನ್ ತಂಡವು 1–0 ಮುನ್ನಡೆ ಪಡೆಯಿತು. ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ದಕ್ಷಿಣ ಆಫ್ರಿಕಾದ ಬ್ಯಾಟರ್ ಗಳನ್ನು ಫಜಲ್‌ಹಕ್ ಫಾರೂಕಿ (35ಕ್ಕೆ 4), ಎ.ಎಂ. ಗಜನ್‌ಫರ್ (20ಕ್ಕೆ 3) ಮತ್ತು ರಶೀದ್ ಖಾನ್ (30ಕ್ಕೆ 2) ಕಾಡಿದರು. ವಿಯಾನ್ ಮುಲ್ಡರ್ (52; 84) ಏಕಾಂಗಿ ಹೋರಾಟ ನಡೆಸಿ ತಂಡವನ್ನು ನೂರರ ಗಡಿ ದಾಟಿಸಿದರು. ತಂಡವು 33.3 ಓವರ್‌ಗಳಲ್ಲಿ 106 ರನ್‌ಗೆ ಕುಸಿಯಿತು. ಅಫ್ಗನ್ ತಂಡವು 26 ಓವರ್‌ಗಳಲ್ಲಿ 4 ವಿಕೆಟ್‌ಗೆ 107 ರನ್ ಗಳಿಸಿ ಗೆಲುವು ಸಾಧಿಸಿತು.