ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂತರ ಆಟದಿಂದ ಒತ್ತಡ: ಮಾನಸಿಕ ಆರೋಗ್ಯಕ್ಕಾಗಿ ವಿಶ್ರಾಂತಿ ಬಯಸಿದ ಕ್ರಿಕೆಟರ್

Last Updated 22 ನವೆಂಬರ್ 2019, 13:44 IST
ಅಕ್ಷರ ಗಾತ್ರ

ಮೆಲ್ಬೋರ್ನ್‌:ಕ್ರೀಡಾಪಟುಗಳ ಮಾನಸಿಕ ಆರೋಗ್ಯ ವಿಚಾರವು ಚರ್ಚೆಯಲ್ಲಿರುವಾಗಲೇ ಆಸ್ಟ್ರೇಲಿಯಾ ಮತ್ತೊಬ್ಬ ಆಟಗಾರ್ತಿ ಸೋಫಿ ಮೊಲಿನೆಕ್ಸ್‌ ಕ್ರಿಕೆಟ್‌ನಿಂದ ಕೆಲಕಾಲ ಬಿಡುವು ಪಡೆಯಲು ನಿರ್ಧರಿಸಿದ್ದಾರೆ.

ಸದ್ಯ ಮಹಿಳಾ ಬಿಗ್‌ ಬಾಷ್‌ ಲೀಗ್‌ನಲ್ಲಿ(ಡಬ್ಲುಬಿಬಿಎಲ್‌) ಮೆಲ್ಬರ್ನ್‌ ರೆನೆಗಾಡ್ಸ್‌ ತಂಡದ ಪರ ಆಡುತ್ತಿರುವ ಸೋಫಿ, ಮಾನಸಿಕ ಆರೋಗ್ಯದ ಕಡೆಗೆ ಗಮನ ಹರಿಸುವ ಸಲುವಾಗಿ ಕ್ರಿಕೆಟ್‌ನಿಂದ ಕೆಲಕಾಲ ದೂರವಿರುವುದಾಗಿ ತಮ್ಮ ತಂಡವನ್ನು ಕೋರಿದ್ದಾರೆ.

ಡಬ್ಲುಬಿಬಿಎಲ್‌ ಅಧಿಕೃತ ವೆಬ್‌ಸೈಟ್‌ ಪ್ರಕಾರ, ಸೋಫಿ ಮನವಿಯನ್ನುರೆನೆಗಾಡ್ಸ್‌ ಒಪ್ಪಿಕೊಂಡಿದೆ. ಅವರಿಗೆ ತಂಡದ ಸಂಪೂರ್ಣ ಬೆಂಬಲವಿದೆ ಎಂದು ಮುಖ್ಯ ಕೋಚ್‌ ಟಿಮ್‌ ಕೊಯ್ಲ್‌ ಹೇಳಿರುವುದಾಗಿ ತಿಳಿದುಬಂದಿದೆ.

21 ವರ್ಷದಸೋಫಿ ಆಸ್ಟ್ರೇಲಿಯಾ ಪರ ಒಂದು ಟೆಸ್ಟ್‌, ಮೂರು ಏಕದಿನ ಹಾಗೂ 17 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಇಂಗ್ಲೆಂಡ್‌ ತಂಡದ ಆಲ್ರೌಂಡರ್‌ ಮೊಯಿನ್‌ ಅಲಿ, ಆಟಗಾರರು ನಿರಂತರವಾಗಿ ಕ್ರಿಕೆಟ್‌ ಆಡುತ್ತಿರುವುದರಿಂದ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದರು.

‘ಕ್ರಿಕೆಟ್‌ನಿಂದಾಚೆಗೂ ನಮಗೆ ಜೀವನವಿದೆ. ನನಗೆ ಕುಟುಂಬವಿದೆ. ಸದ್ಯ ಹೆಚ್ಚೆಚ್ಚು ಕ್ರಿಕೆಟ್‌ ಆಡುತ್ತಿದ್ದೇವೆ. ಕ್ರಿಕೆಟ್‌ ಕಠಿಣವಾದ ಕ್ರೀಡೆ. ಹಾಗಾಗಿ ವಿರಾಮ ಪಡೆದು ಮತ್ತಷ್ಟು ಸಮರ್ಥರಾಗಿ ಮರಳಲು ಕೆಲಕಾಲ ಇದರಿಂದ ಹೊರಬರುವುದು ತಂಬಾ ಮುಖ್ಯವೆಂದು ನನಗನಿಸುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದರು.

ಆಸ್ಟ್ರೇಲಿಯಾ ಪುರುಷರ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರೂ ಇತ್ತೀಚೆಗೆ ಇದೇ ಕಾರಣದಿಂದ ವಿಶ್ರಾಂತಿ ಪಡೆದಿದ್ದರು. ಅಸ್ಟ್ರೇಲಿಯಾದವರೇ ಆದ ನಿಕ್‌ ಮ್ಯಾಡಿಸನ್‌ ಹಾಗೂ ವಿಲ್‌ ಪುಕೊವ್‌ಸ್ಕಿ ಕೂಡ ಆಟದಿಂದ ದೂರ ಉಳಿದಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಆಸ್ಟ್ರೇಲಿಯಾದ ಆಟಗಾರರು ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT