ಕ್ವಾಲಾಲಂಪುರ: ಮಹಿಳೆಯರ ಐಸಿಸಿ 19 ವರ್ಷದೊಳಗಿನವರ ಟಿ20 ವಿಶ್ವಕಪ್ ಟೂರ್ನಿಗೆ ಪದಾರ್ಪಣೆ ಮಾಡಿದ ನೈಜೀರಿಯಾ ತಂಡ ತಂಡ ಸೋಮವಾರ ‘ಸಿ’ ಗುಂಪಿನ ಪಂದ್ಯದಲ್ಲಿ ಎರಡು ರನ್ಗಳಿಂದ ನ್ಯೂಜಿಲೆಂಡ್ ಮೇಲೆ ಅವಿಸ್ಮರಣೀಯ ಗೆಲುವು ಪಡೆಯಿತು.

13 ಓವರುಗಳಿಗೆ ಸೀಮಿತಗೊಂಡ ಪಂದ್ಯದಲ್ಲಿ ಮೊದಲು ಆಡಿದ ನೈಜೀರಿಯಾ 6 ವಿಕೆಟ್ಗೆ 65 ರನ್ ಗಳಿಸಿತು. ಒಂದು ಹಂತದಲ್ಲಿ 5 ವಿಕೆಟ್ಗೆ 57 ರನ್ ಗಳಿಸಿದ್ದ ನ್ಯೂಜಿಲೆಂಡ್ ಕೊನೆಯ ಓವರ್ನಲ್ಲಿ ಗೆಲ್ಲಲು 9 ರನ್ ಗಳಿಸಬೇಕಿತ್ತು. ಆದರೆ ನೈಜೀರಿಯಾದ ವೇಗಿ ಲಿಲಿಯನ್ ಉದೇ ಬಿಗುವಾಗಿ ಬೌಲ್ ಮಾಡಿ ಆರು ರನ್ಗಳನ್ನಷ್ಟೇ ಕೊಟ್ಟರು.

ಐಸಿಸಿ ವಿಶ್ವಕಪ್ಗೆ ಅರ್ಹತೆ ಪಡೆದ ಪಶ್ಚಿಮ ಆಫ್ರಿಕಾದ ಮೊದಲ ದೇಶ ಎನಿಸಿದ್ದ ನೈಜೀರಿಯಾ, ಐಸಿಸಿಯ ಪೂರ್ಣ ಪ್ರಮಾಣದ ದೇಶವನ್ನು ಸೋಲಿಸಿ ದೊಡ್ಡ ಅಚ್ಚರಿಯ ಫಲಿತಾಂಶ ನೀಡಿತು. ಸಮೋವಾ ವಿರುದ್ಧ ನೈಜೀರಿಯಾದ ಮೊದಲ ಪಂದ್ಯ ಮಳೆಯಿಂದ ನಡೆದಿರಲಿಲ್ಲ.

ಅಮೆರಿಕ ತೆಂಡ ‘ಬಿ’ ಗುಂಪಿನ ಪಂದ್ಯದಲ್ಲಿ ಐರ್ಲೆಂಡ್ ಮೇಲೆ 9 ವಿಕೆಟ್ಗಳ ಜಯ ಪಡೆದು ಗಮನ ಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.