ಶನಿವಾರ, ಏಪ್ರಿಲ್ 17, 2021
28 °C

ಬಿಸಿಸಿಐ ಬಳಿ ಲಸಿಕೆ ಕೇಳಿದ ಡೆಲ್ಲಿ ಕ್ಯಾಪಿಟಲ್ಸ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಫ್ರಾಂಚೈಸ್ ಕೋವಿಡ್‌–19ರ ಲಸಿಕೆಗಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಮನವಿ ಸಲ್ಲಿಸಿದೆ.  

ಈ ಬಾರಿಯ ಐಪಿಎಲ್ ಟೂರ್ನಿ ಏಪ್ರಿಲ್ ಒಂಬತ್ತರಂದು ಆರಂಭಗೊಳ್ಳಲಿದ್ದು ಮುಂದಿನ ವಾರ ಆಟಗಾರರು ಜೀವ ಸುರಕ್ಷಾ ವಲಯ ಪ್ರವೇಶಿಸಲಿದ್ದಾರೆ. ಇದಕ್ಕೂ ಮೊದಲು ಭಾರತದ ಆಟಗಾರರಿಗೆ ಲಸಿಕೆ ಹಾಕಲು ವ್ಯವಸ್ಥೆ ಮಾಡಬೇಕು ಎಂದು ಕ್ಯಾಪಿಟಲ್ಸ್ ಮನವಿ ಸಲ್ಲಿಸಿದೆ.

‘ಮುಂದಿನ ಮಂಗಳವಾರ ಕ್ಯಾಪಿಟಲ್ಸ್ ತಂಡದ ಆಟಗಾರರು ಬಯೊಬಬಲ್ ಪ್ರವೇಶಿಸುವರು. ಒಂದು ವಾರ ಕಠಿಣ ಕ್ವಾರಂಟೈನ್‌ಗೆ ಒಳಗಾದ ನಂತರ ಮುಂಬೈನಲ್ಲಿ ಅಭ್ಯಾಸ ಆರಂಭವಾಗಲಿದೆ. ಐಪಿಎಲ್‌ಗೆ ಸಂಬಂಧಿಸಿದ ಎಸ್‌ಒಪಿಯನ್ನು ಬಿಸಿಸಿಐ ಇನ್ನೂ ಪ್ರಕಟಿಸಿಲ್ಲ’ ಎಂದು ಕ್ಯಾಪಿಟಲ್ಸ್ ತಂಡ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು