ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021 - MI vs DC| ಚಾಂಪಿಯನ್‌ ಮುಂಬೈಗೆ ಡೆಲ್ಲಿಯ ಕಠಿಣ ಸವಾಲು

ರೋಹಿತ್ ಶರ್ಮಾ–ರಿಷಭ್ ಪಂತ್ ಪಡೆಗಳ ಹಣಾಹಣಿ
Last Updated 1 ಅಕ್ಟೋಬರ್ 2021, 17:21 IST
ಅಕ್ಷರ ಗಾತ್ರ

ಶಾರ್ಜಾ: ಪ್ಲೇ ಆಫ್ ಪ್ರವೇಶದ್ವಾರದ ಹೊಸ್ತಿಲಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಎದುರು ಶನಿವಾರ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕಣಕ್ಕಿಳಿಯಲಿದೆ.

ಪಾಯಿಂಟ್ಸ್ ಪಟ್ಟಿಯ ಎರಡನೇ ಸ್ಥಾನದಲ್ಲಿರುವ ಡೆಲ್ಲಿ ತಂಡವು ಇನ್ನೂ ಮೂರು ಪಂದ್ಯಗಳನ್ನು ಆಡಬೇಕು. ಅದರಲ್ಲಿ ಒಂದು ಗೆದ್ದರೂ ಸಾಕು. ಪ್ಲೇ ಆಫ್ ಖಚಿತ. ಪಟ್ಟಿಯಲ್ಲಿ ಅಗ್ರಸ್ಥಾನಕ್ಕಾಗಿ ಪೈಪೋಟಿ ನಡೆಸಬೇಕಷ್ಟೇ. ಆದರೆ, ರೋಹಿತ್ ಶರ್ಮಾ ನಾಯಕತ್ವದ ಮುಂಬೈ ತಂಡದ ಪರಿಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ. ಕೇವಲ ಹತ್ತು ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿರುವ ಮುಂಬೈ ತಂಡವು ಉಳಿದ ಎಲ್ಲ ಪಂದ್ಯಗಳನ್ನೂ ಗೆಲ್ಲಬೇಕು. ಒಂದರಲ್ಲಿ ಸೋತರೂ ಹಾದಿ ಕಡುಕಠಿಣವಾಗಲಿದೆ.

ಮುಂಬೈ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳು ಎರಡನೇ ಹಂತದಲ್ಲಿ ನಿರೀಕ್ಷೆಗೆ ತಕ್ಕಂತೆ ಆಡದ ಕಾರಣ ಈ ಪರಿಸ್ಥಿತಿ ಬಂದೊದಗಿದೆ. ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಕೀರನ್ ಪೊಲಾರ್ಡ್ ಮತ್ತು ಕೃಣಾಲ್ ಪಾಂಡ್ಯ ಅವರ ಬ್ಯಾಟಿಂಗ್ ವೈಫಲ್ಯವು ತಂಡದ ಬಲ ಕುಗ್ಗಿಸಿದೆ. ಬೌಲಿಂಗ್ ವಿಭಾಗವು ಎಷ್ಟೇ ಚೆನ್ನಾಗಿ ಆಡಿದರೂ ದೊಡ್ಡ ಮೊತ್ತದ ಬೆಂಬಲ ಇಲ್ಲದೇ ನಿರಾಶರಾಗುವಂತಾಗಿದೆ. ಅದರಲ್ಲೂ ಎರಡನೇ ಹಂತದ ಟೂರ್ನಿಯಲ್ಲಿ ಮುಂಬೈ ಸತತ ಮೂರು ಪಂದ್ಯಗಳನ್ನು ಸೋತಿದೆ. ಒಂದರಲ್ಲಿ ಗೆದ್ದಿದ್ದು ತುಸು ಆತ್ಮವಿಶ್ವಾಸದಲ್ಲಿದೆ.

ಆದರೆ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ತಂಡವನ್ನು ಮಣಿಸುವುದು ಸುಲಭದ ಮಾತಲ್ಲ. ಮೊದಲ ಸುತ್ತಿನ ಪಂದ್ಯದಲ್ಲಿಯೂ ಡೆಲ್ಲಿ ಮೇಲುಗೈ ಸಾಧಿಸಿತ್ತು. ಶಿಖರ್, ರಿಷಭ್, ಸ್ಮಿತ್ ಬ್ಯಾಟಿಂಗ್ ಲಯದಲ್ಲಿದ್ದಾರೆ. ಶ್ರೇಯಸ್ ಅಯ್ಯರ್ ಫಾರ್ಮ್‌ಗೆ ಮರಳಿದರೆ ತಂಡದ ಬಲ ದುಪ್ಪಟ್ಟಾಗಲಿದೆ. ಆವೇಶ್ ಖಾನ್, ಕಗಿಸೊ ರಬಾಡ ಮತ್ತು ಆರ್. ಅಶ್ವಿನ್ ಅವರ ಬೌಲಿಂಗ್‌ ದಾಳಿಯನ್ನು ಎದುರಿಸಲು ಮುಂಬೈ ಬ್ಯಾಟಿಂಗ್ ಪಡೆಯು ಸಮರ್ಥವಾಗಿ ಯೋಜನೆ ಹೆಣೆಯಬೇಕಿದೆ. ತಮ್ಮ ಸ್ಲೋ ಎಸೆತಗಳ ಮೂಲಕ ಕಾಡುತ್ತಿರುವ ಖಾನ್ ಮತ್ತು ಎನ್ರಿಚ್ ನಾರ್ಕಿಯಾ ಅವರನ್ನು ಎದುರಿಸುವುದು ಪ್ರಮುಖ ಸವಾಲಾಗಲಿದೆ.

ತಂಡಗಳು: ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್, ಇಶಾನ್ ಕಿಶನ್, ಸೂರ್ಯಕುಮಾರ ಯಾದವ್, ಆದಿತ್ಯ ತಾರೆ, ಅನ್ಮೋಲ್‌ಪ್ರೀತ್ ಸಿಂಗ್, ಕ್ರಿಸ್ ಲಿನ್, ಸೌರಭ್ ತಿವಾರಿ, ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ಜೇಮ್ಸ್ ನಿಶಾಂ, ಕೀರನ್ ಪೊಲಾರ್ಡ್, ಜಸ್‌ಪ್ರೀತ್ ಬೂಮ್ರಾ, ರಾಹುಲ್ ಚಾಹರ್, ಟ್ರೆಂಟ್ ಬೌಲ್ಟ್.

ಡೆಲ್ಲಿ ಕ್ಯಾಪಿಟಲ್ಸ್: ರಿಷಭ್ ಪಂತ್ (ನಾಯಕ), ಪೃಥ್ವಿ ಶಾ, ಶಿಖರ್ ಧವನ್, ಶಿಮ್ರೊನ್ ಹೆಟ್ಮೆಯರ್, ಶ್ರೇಯಸ್ ಅಯ್ಯರ್, ಸ್ಟೀವ್ ಸ್ಮಿತ್, ಎನ್ರಿಚ್ ನಾರ್ಕಿಯಾ, ಆವೇಶ್ ಖಾನ್, ಇಶಾಂತ್ ಶರ್ಮಾ, ಉಮೇಶ್ ಯಾದವ್, ಅಕ್ಷರ್ ಪಟೇಲ್, ಆರ್. ಅಶ್ವಿನ್, ಕಗಿಸೊ ರಬಾಡ.

ಪಂದ್ಯ ಆರಂಭ: ಮಧ್ಯಾಹ್ನ 3.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಬಲಾಬಲ

ಪಂದ್ಯಗಳು: 29

ಮುಂಬೈ ಜಯ: 16

ಡೆಲ್ಲಿ ಜಯ: 10

ಫಲಿತಾಂಶವಿಲ್ಲ; 3

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT