ಕೊಹ್ಲಿ ಮತ್ತು ಪಂತ್ ಅವರು ರಣಜಿ ಋತುವಿನ ಸಂದರ್ಭದಲ್ಲಿಯೇ ಟೆಸ್ಟ್ ಸರಣಿಗಳಲ್ಲಿ ಆಡಲಿದ್ಧಾರೆ. ಆದ್ದರಿಂದ ಅವರು ರಣಜಿ ಪಂದ್ಯಗಳಿಗೆ ಲಭ್ಯರಾಗುವುದು ಬಹುತೇಕ ಅಸಾಧ್ಯ. ಕೊಹ್ಲಿ ಅವರು 2012ರಲ್ಲಿ ಗಾಜಿಯಾಬಾದ್‌ನಲ್ಲಿ ಉತ್ತರಪ್ರದೇಶ ವಿರುದ್ಧದ ರಣಜಿ ಪಂದ್ಯದಲ್ಲಿ ಆಡಿದ್ದು ಕೊನೆಯದು. ಪಂತ್ ಕೂಡ ಕೋವಿಡ್ ಮುನ್ನ ರಣಜಿ ಟೂರ್ನಿಯಲ್ಲಿ ಆಡಿದ್ದರು.