ಲಖನೌ: ಭಾರತ ಎ ತಂಡದ ಬ್ಯಾಟರ್ ದೇವದತ್ತ ಪಡಿಕ್ಕಲ್ ಅವರು ಆಸ್ಟ್ರೇಲಿಯಾ ‘ಎ’ ತಂಡದ ವಿರುದ್ಧ ಮೊದಲ ‘ಟೆಸ್ಟ್’ ಪಂದ್ಯದಲ್ಲಿ ಶುಕ್ರವಾರ ಸೊಗಸಾದ ಶತಕ ಗಳಿಸಿದರು. ಆದರೆ ನಾಲ್ಕು ದಿನಗಳ ಪಂದ್ಯ ನಿರೀಕ್ಷೆಯಂತೆ ನೀರಸ ಡ್ರಾ ಆಯಿತು.

ಇದು ಪಡಿಕ್ಕಲ್ಗೆ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಏಳನೇ ಶತಕ. ಗುರುವಾರ ಅಜೇಯ 86 ರನ್ ಗಳಿಸಿ ಔಟಾಗದೇ ಉಳಿದಿದ್ದ ಪಡಿಕ್ಕಲ್ ಅಂತಿಮ ದಿನ ಮೊತ್ತವನ್ನು ಬರೋಬರಿ 150 ರನ್ಗಳಿಗೆ ಬೆಳೆಸಿ ನಿರ್ಗಮಿಸಿದರು. 281 ಎಸೆತಗಳನ್ನು ಎದುರಿಸಿ ಒಂದು ಸಿಕ್ಸರ್, 14 ಬೌಂಡರಿಗಳನ್ನು ಹೊಡೆದರು.

ಆಸ್ಟ್ರೇಲಿಯಾ ಎ ತಂಡ 6 ವಿಕೆಟ್ಗೆ 532 ರನ್ ಗಳಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ಡ್ ಮಾಡಿಕೊಂಡಿತ್ತು. ಉತ್ತರವಾಗಿ ಭಾರತ ಎ 7 ವಿಕೆಟ್ಗೆ 531 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ಡ್ ಮಾಡಿಕೊಂಡಿತು. ಪ್ರವಾಸಿ ತಂಡ ಎರಡನೇ ಇನಿಂಗ್ಸ್ನಲ್ಲಿ ವಿಕೆಟ್ ನಷ್ಟವಿಲ್ಲದೇ 56 ರನ್ ಗಳಿಸಿ ಪಂದ್ಯ ಪೂರೈಸಿತು.

ಪಡಿಕ್ಕಲ್ ಜೊತೆ ಆಟ ಮುಂದುವರಿಸಿದ್ದ ಧ್ರುವ್ ಜುರೇಲ್ (ಗುರವಾರ ಅಜೇಯ 113) ಜೊತೆ ಐದನೇ ವಿಕೆಟ್ಗೆ 228 ರನ್ ಸೇರಿಸಿದ್ದರಿಂದ ಭಾರತ ಎ ಹೋರಾಟ ನೀಡಲು ಸಾಧ್ಯ ಆಯಿತು. ಜುರೇಲ್ 140 ರನ್ ಗಳಿಸಿ ನಿರ್ಗಮಿಸಿದಾಗ ಭಾರತದ ಮೊತ್ತ 5 ವಿಕೆಟ್ಗೆ 450.

ಸ್ಕೋರುಗಳು: ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ ಎ: 6ಕ್ಕೆ532 ಡಿ; ಭಾರತ ಎ: 141.1 ಓವರುಗಳಲ್ಲಿ 7ಕ್ಕೆ 531 (ದೇವದತ್ತ ಪಡಿಕ್ಕಲ್ 150, ಧ್ರುವ್ ಜುರೇಲ್ 140; ಕ್ಯಾರಿ ರೊಕಿಸಿಯೊಲಿ 150ಕ್ಕೆ3); ಎರಡನೇ ಇನಿಂಗ್ಸ್: ಆಸ್ಟ್ರೇಲಿಯಾ ಎ: 16 ಓವರುಗಳಲ್ಲಿ ವಿಕೆಟ್ ನಷ್ಟವಿಲ್ಲದೇ 56

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.