ಧೋನಿ ಹೋಗಿದ್ದು ಕ್ರಿಕೆಟ್ ಆಡುವುದಕ್ಕೆ, ಮಹಾಭಾರತಕ್ಕೆ ಅಲ್ಲ: ಪಾಕ್ ಸಚಿವ ಟ್ವೀಟ್

ಮಂಗಳವಾರ, ಜೂನ್ 18, 2019
23 °C

ಧೋನಿ ಹೋಗಿದ್ದು ಕ್ರಿಕೆಟ್ ಆಡುವುದಕ್ಕೆ, ಮಹಾಭಾರತಕ್ಕೆ ಅಲ್ಲ: ಪಾಕ್ ಸಚಿವ ಟ್ವೀಟ್

Published:
Updated:

ನವದೆಹಲಿ: ವಿಶ್ವಕಪ್‌ನಲ್ಲಿ ಬುಧವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ತಾವು ಧರಿಸಿದ್ದ ಕೈಗವಸುಗಳ ಮೇಲೆ ಮಹೇಂದ್ರ ಸಿಂಗ್ ಧೋನಿ ಅವರು ಸೇನೆಯ ‘ಕಠಾರಿ ಮುದ್ರೆ’ಯನ್ನು ಹಾಕಿಸಿಕೊಂಡು ಗಮನ ಸೆಳೆದಿದ್ದರು. ಹಸಿರು ಬಣ್ಣದ ಕೈಗವಸಿನ ಮೇಲೆ ಹಾಕಿಸಿರುವ ಮುದ್ರೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದಿತ್ತು.

ಆದರೆ ಧೋನಿ ತಮ್ಮ ಕೈಗವಸುಗಳ ಮೇಲೆ ಹಾಕಿಸಿಕೊಂಡಿದ್ದ 'ಕಠಾರಿ ಮುದ್ರೆ-ಬಲಿದಾನದ ಪಟ್ಟಿ’ ಯನ್ನು ತೆಗೆಸುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯು ಭಾರತೀಯ ಕ್ರಿಕೆಟ್‌ ನಿಯಂತ್ರಣಾ ಮಂಡಳಿಗೆ ಮನವಿ ಮಾಡಿದೆ. 

ಇದನ್ನೂ ಓದಿ: ಧೋನಿ ಗ್ಲೌಸ್‌ನಲ್ಲಿ ಸೇನೆಗೆ ಗೌರವ

ಇದೆಲ್ಲದರ ನಡುವೆಯೇ ಧೋನಿ ಕೈಗವಸುಗಳ ಬಗ್ಗೆ ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ಸಚಿವ ಫವಾದ್ ಹುಸೇನ್ ಚೌಧರಿ ಕುಹಕವಾಡಿದ್ದಾರೆ.

ಧೋನಿ ಇಂಗ್ಲೆಂಡ್‌ನಲ್ಲಿರುವುದು ಕ್ರಿಕೆಟ್ ಆಡುವುದಕ್ಕಾಗಿ ಮಹಾಭಾರತಕ್ಕಾಗಿ ಅಲ್ಲ. ಭಾರತೀಯ ಮಾಧ್ಯಮಗಳು ಈ ಬಗ್ಗೆ ಚರ್ಚೆ ನಡೆಸುತ್ತಿರುವುದು ಮೂರ್ಖತನ. ಭಾರತದ ಕೆಲವು ಮಾಧ್ಯಮಗಳು ಯುದ್ಧಕ್ಕೆ ಹಾತೊರೆಯುವಂತಿದೆ. ಅಂತವರನ್ನು ಸಿರಿಯಾ, ಅಫ್ಗಾನಿಸ್ತಾನ ಅಥವಾ ರವಾಂಡಕ್ಕೆ ಕೂಲಿಯಾಳುಗಳಾಗಿ ಕಳಿಸಿಕೊಡಬೇಕು ಎಂದು ಫವಾದ್ ಟ್ವೀಟಿಸಿದ್ದಾರೆ.
 

ಇದನ್ನೂ ಓದಿ:  ಸೇನೆ ಗೌರವಾರ್ಥ ಗ್ಲೌಸ್‌ ಮೇಲೆ ಧೋನಿ ಹಾಕಿಸಿದ್ದ ಮುದ್ರೆ ತೆಗೆಸಲು ಐಸಿಸಿ ಮನವಿ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 1

  Sad
 • 1

  Frustrated
 • 21

  Angry

Comments:

0 comments

Write the first review for this !