ಕೋಲ್ಕತ್ತ: ಭಾರತದ ಇಬ್ಬರು ಪರಿಣತ ವಿಕೆಟ್ ಕೀಪರ್ಗಳು ಒಂದೇ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿರುವ ನಿದರ್ಶನಗಳು ಎಷ್ಟಿವೆ? ಅಲ್ಲೊಂದು ಇಲ್ಲೊಂದು ಎಂದು ಹೇಳಬಹುದು.

ಎಂ.ಎಸ್.ಧೋನಿ ತಮ್ಮ ಟೆಸ್ಟ್ ಉತ್ತುಂಗದ ದಿನಗಳನ್ನು ಕಾಣುತ್ತಿದ್ದ ಅವಧಿಯಲ್ಲಿ ದಿನೇಶ್ ಕಾರ್ತಿಕ್ ಅವರು ಆರಂಭ ಆಟಗಾರನಾಗಿದ್ದರು. 2018ರ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಕಾರ್ತಿಕ್ ಮತ್ತು ಪಾರ್ಥಿವ್ ಅವರು ಜೊತೆಗೇ ಆಡಿದ್ದೂ ಇದೆ. 2010ಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಾಗ್ಪುರದಲ್ಲಿ ಪದಾರ್ಪಣೆಗೆ ಕಾಯುತ್ತಿದ್ದ ರೋಹಿತ್ ಶರ್ಮಾ ಗಾಯಾಳಾದಾಗ ನಾಯಕ ಧೋನಿ ಸಾರಥ್ಯದ ತಂಡದಲ್ಲಿ ದಿನೇಶ್ ಕಾರ್ತಿಕ್ ಆಡಿದ್ದರು.

ಆದರೆ ಈ ಎಲ್ಲ ಸಂದರ್ಭಗಳಲ್ಲಿ ಇದು ತಂತ್ರದ ಭಾಗವಾಗಿರಲಿಲ್ಲ. ಆದರೆ ಸಂದರ್ಭಕ್ಕೆ ಅನಿವಾರ್ಯವಾಗಿ ಎರಡನೇ ವಿಕೆಟ್ ಕೀಪರ್ ಸ್ಥಾನ ಪಡೆದಿದ್ದರು. ಧ್ರುವ್ ಜುರೇಲ್ ಅವರು ಈ ‘ಸಂಪ್ರದಾಯ’ಕ್ಕೆ ಕೊನೆಹಾಡಲು ಸಜ್ಜಾಗಿದ್ದಾರೆ. ಭಾರತ ತಂಡದ ಸಹಾಯಕ ಕೋಚ್ ರಯಾನ್ ಟೆನ್ ಡೋಶೆ ಅವರ ಮಾತುಗಳನ್ನು ನಂಬಬಹುದಾದರೆ, ಅವರು ಮೊದಲ ಆಯ್ಕೆಯ ಕೀಪರ್ ರಿಷಭ್ ಪಂತ್ ಜೊತೆ ತಂಡದಲ್ಲಿರಲಿದ್ದಾರೆ. ‘ಮೊದಲ ಪಂದ್ಯದಲ್ಲಿ ಉತ್ತರ ಪ್ರದೇಶದ ಬ್ಯಾಟರ್–ಕೀಪರ್ ಆಡದೇ ಹೋದರೆ ಅದು ‘ಅಚ್ಚರಿಯಾಗುತ್ತದೆ’ ಎಂದು ನೆದರ್ಲೆಂಡ್ಸ್ನ ಮಾಜಿ ಆಟಗಾರ ಹೇಳಿದ್ದಾರೆ.

ಪಂತ್ ಅನುಪಸ್ಥಿತಿಯಲ್ಲಿ ಅವರು ಪರಿಣತ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ ದಕ್ಷಿಣ ಆಫ್ರಿಕಾ ಎ ವಿರುದ್ಧ ಬೆಂಗಳೂರಿನಲ್ಲಿ ನಡೆದ ‘ಟೆಸ್ಟ್’ನಲ್ಲಿ ಅವರು ಎರಡು ಶತಕಗಳನ್ನು ಹೊಡೆದಿದ್ದು, ತಂಡದ ಚಿಂತಕರ ಚಾವಡಿಯು ಅವರನ್ನು ಪರಿಣತ ಬ್ಯಾಟರ್ ಆಗಿ ಆಡಿಸಲು ಪ್ರೇರೇಪಿಸಿದೆ. ಮೊದಲ ಟೆಸ್ಟ್ ಈಡನ್ ಗಾರ್ಡನ್ನಲ್ಲಿ ಶುಕ್ರವಾರ ಆರಂಭವಾಗಲಿದೆ.

ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಈ ಸಂಬಂಧ ಎದುರಾದ ಪ್ರಶ್ನೆಗೆ ಉತ್ತರಿಸಿದ ಡೋಶೆ ಅವರು, ‘ಅವರನ್ನು ಈ ಟೆಸ್ಟ್ನಿಂದ ಬಿಡಬಹುದೆಂದು ನಗನೇಗೂ ಅನಿಸುತ್ತಿಲ್ಲ’ ಎಂದಿದ್ದಾರೆ.

ಸದ್ಯದಲ್ಲೇ 25ನೇ ವರ್ಷಕ್ಕೆ ಕಾಲಿಡಲಿರುವ ಜುರೇಲ್, ದೀರ್ಘಾವಧಿ ಮಾದರಿಯಲ್ಲಿ ಅಲ್ಪಾ ಕಾಲದಲ್ಲೇ ಸಾಧಿಸಿದ ಏಳಿಗೆ ಅಮೋಘವಾದುದು. ವೆಸ್ಟ್ ಇಂಡೀಸ್ ವಿರುದ್ಧ ಅಹಮದಾಬಾದಿನಲ್ಲಿ ನಡೆದ ಟೆಸ್ಟ್ನಲ್ಲಿ ಚೊಚ್ಚಲ ಶತಕ ಸೇರಿದಂತೆ ಜುರೇಲ್, ಕೊನೆಯ ಒಂಬತ್ತು ಮೊದಲ ದರ್ಜೆ ಪಂದ್ಯಗಳಲ್ಲಿ ನಾಲ್ಕು ಶತಕಗಳನ್ನು ಬಾರಿಸಿದ್ದಾರೆ. ಇಂಗ್ಲೆಂಡ್ ಲಯನ್ಸ್ ಮತ್ತು ಆಸ್ಟ್ರೇಲಿಯಾ ಎ ವಿರುದ್ಧ ಪಂದ್ಯಗಳನ್ನೂ ಸೇರಿ ಇದೇ ಅವಧಿಯಲ್ಲಿ ನಾಲ್ಕು ಅರ್ಧ ಶತಕಗಳನ್ನು ಬಾರಿಸಿದ್ದಾರೆ.

ನಾಲ್ಕು ಸರಣಿಗಳಲ್ಲಿ ಹರಡಿಕೊಂಡ ಏಳು ಟೆಸ್ಟ್ಗಳಲ್ಲಿ ಅವರು 47.77ರ ಸರಾಸರಿಯಲ್ಲಿ 470 ರನ್ ಕಲೆಹಾಕಿದ್ದಾರೆ. ಇದು ಅವರ ಆಟದ ಆರಂಭವಷ್ಟೇ. ವರ್ಷ ಕಳೆದಂತೆ ಅವರ ನೈಜ ಆಟದ ಗುಣಮಟ್ಟ ಅಳೆಯಬಹುದಾಗಿದೆ. ವಿಶ್ವದ ಅಗ್ರ ವಿಕೆಟ್ಕೀಪರ್ಗಳೆನಿಸಿದ ಕುಮಾರ ಸಂಗಕ್ಕರ (57.40), ಆ್ಯಂಡಿ ಫ್ಲವರ್ (51.54) ಮತ್ತು ಎ.ಬಿ ಡಿವಿಲಿಯರ್ಸ್ (50.66) ಮಾತ್ರ ಟೆಸ್ಟ್ನಲ್ಲಿ ಅವರಿಂತ ಉತ್ತಮ ಸರಾಸರಿ ಹೊಂದಿದ್ದಾರೆ. ಆದರೆ ಜುರೇಲ್ ಅವರನ್ನು ಈಗಲೇ ಅಂಥ ಆಟಗಾರರ ಮಟ್ಟಕ್ಕೆ ಸೇರಿಸಲಾಗಿದ್ದರೂ, ಅವರ ಪ್ರತಿಭೆಯನ್ನು ಅಲ್ಲಗೆಳೆಯುವಂತಿಲ್ಲ.

30 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಜುರೇಲ್ 59ರ ಸರಾಸರಿಯಲ್ಲಿ ರನ್ ಗಳಿಸಿರುವುದನ್ನು ಗಮನಿಸಿದರೆ, ಅವರ ದೀರ್ಘ ಮಾದರಿಯಲ್ಲಿ ಬೇರೂರಿ ಆಡಬಲ್ಲ ಆಟಗಾರನೆಂಬುದನ್ನು ನಿರೂಪಿಸಿದೆ. ಟೆಸ್ಟ್ನಲ್ಲಿ ಇರಬೇಕಾದ ಸಂಯಮ, ಏಕದಿನ ಪಂದ್ಯಗಳಲ್ಲಿ ಇರುವ ವೇಗದ ರನ್ ಗಳಿಕೆ ಅವರ ಆಟದಲ್ಲಿ ಮಿಳಿತವಾಗಿದೆ. ಆರನೇ ಕ್ರಮಾಂಕದಲ್ಲಿ ಅವರು ಉತ್ತಮ ಆಯ್ಕೆಯಾಗಬಲ್ಲರು.

ಒತ್ತಡದ ಸಂದರ್ಭದಲ್ಲಿ ಆಡಬಲ್ಲೆ ಎಂಬುದನ್ನೂ ಅವರು ಸಾಬೀತುಪಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ರಾಂಚಿಯಲ್ಲಿ ನಡೆದ ಟೆಸ್ಟ್ನಲ್ಲಿ ತಂಡ 6 ವಿಕೆಟ್ಗೆ 171 ರನ್ ಗಳಿಸಿ ಸಂಕಷ್ಟದಲ್ಲಿದ್ದಾಗ ಅವರು ಅಮೂಲ್ಯ 90 ರನ್ ಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.