ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಾಂಗೀಯ ನಿಂದನೆ ಬರೀ ಮೈಬಣ್ಣವಷ್ಟೇ ಅಲ್ಲ: ಇರ್ಫಾನ್ ಪಠಾಣ್

Last Updated 10 ಜೂನ್ 2020, 1:49 IST
ಅಕ್ಷರ ಗಾತ್ರ

ನವದೆಹಲಿ: ಜನಾಂಗೀಯ ದ್ವೇಷವು ಕೇವಲ ಮೈಬಣ್ಣಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ವಿಭಿನ್ನ ರೂಢಿಗಳಿರುವ ವ್ಯಕ್ತಿಗಳಲ್ಲಿ ಅವಿಶ್ವಾಸದಿಂದ ನಡೆದುಕೊಳ್ಳುವುದು ಕೂಡ ತಾರತಮ್ಯ ಎಂದು ಹಿರಿಯ ಕ್ರಿಕೆಟಿಗ ಇರ್ಫಾನ್‌ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದಲ್ಲಿ ಪೊಲೀಸ್‌ ದೌರ್ಜನ್ಯದಿಂದಾಗಿ ಆಫ್ರಿಕನ್ ಮೂಲದ ಜಾರ್ಜ್‌ ಫ್ಲಾಯ್ಡ್‌ ಸಾವಿನ ಹಿನ್ನೆಲೆಯಲ್ಲಿ ಜನಾಂಗೀಯ ನಿಂದನೆಯ ಸುತ್ತ ನಡೆಯುತ್ತಿರುವ ಚರ್ಚೆಯ ಹಿನ್ನೆಲೆಯಲ್ಲಿ ಇರ್ಫಾನ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಒಬ್ಬ ವ್ಯಕ್ತಿಯು ವಿಭಿನ್ನ ಸಂಪ್ರದಾಯ, ನಂಬಿಕೆಯುಳ್ಳವನಾಗಿರುತ್ತಾನೆ. ಆದರೆ ಅದರ ಆಧಾರದಲ್ಲಿ ಆತನಿಗೆ ಸಮಾಜದಲ್ಲಿ ಮನೆಯನ್ನು ನೀಡಲು ನಿರಾಕರಿಸುವುದು ಕೂಡ ಜನಾಂಗೀಯ ತಾರತಮ್ಯ ಎಂದು ಟ್ವೀಟ್ ಮಾಡಿದ್ದಾರೆ.

‘ಇದು ನನ್ನ ಗಮನಕ್ಕೆ ಬಂದಿದ್ದು. ಇದನ್ನು ಬೇರೆಯವರು ಅಲ್ಲಗಳೆಯುತ್ತಾರೆಂದು ನನಗನಿಸುವುದಿಲ್ಲ’ ಎಂದಿದ್ದಾರೆ.

ಇರ್ಫಾನ್ 29 ಟೆಸ್ಟ್‌, 120 ಏಕದಿನ ಮತ್ತು 24 ಟಿ20 ಪಂದ್ಯಗಳನ್ನು ಭಾರತ ತಂಡದಲ್ಲಿ ಆಡಿದ್ದಾರೆ.

ಕ್ರಿಕೆಟ್‌ನಲ್ಲಿಯೂ ಜನಾಂಗೀಯ ತಾರತಮ್ಯ ಇದೆ ಎಂದು ವೆಸ್ಟ್‌ ಇಂಡೀಸ್‌ ತಂಡದ ಆಟಗಾರ ಕ್ರಿಸ್ ಗೇಲ್ ಮತ್ತು ಡರೆನ್ ಸಾಮಿ ಈಗಾಗಲೇ ಹೇಳಿಕೆ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT