ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಿನ್‌ ಎದುರಿಸಲು ದ್ರಾವಿಡ್‌ ಸಲಹೆ ನೆರವಾಯಿತು: ಪೀಟರ್ಸನ್‌

Last Updated 2 ಆಗಸ್ಟ್ 2020, 12:19 IST
ಅಕ್ಷರ ಗಾತ್ರ

ಲಂಡನ್‌: ತಮ್ಮ ಬ್ಯಾಟಿಂಗ್ ಶೈಲಿಯ‌ ಮೇಲೆ ಭಾರತದ ಖ್ಯಾತ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಅವರು ಬೀರಿದ ಪ್ರಭಾವವನ್ನು ಇಂಗ್ಲೆಂಡ್‌ ಕ್ರಿಕೆಟಿಗ ಕೆವಿನ್‌ ಪೀಟರ್ಸನ್‌ ಕೊಂಡಾಡಿದ್ದಾರೆ. ‘ಸ್ಪಿನ್‌ ಬೌಲಿಂಗ್‌ಅನ್ನು ಎದುರಿಸಲು ದ್ರಾವಿಡ್ ನೀಡಿದ ಸಲಹೆ ತನ್ನ ಮುಂದೆ ಹೊಸ ಜಗತ್ತನ್ನೇ ತೆರೆದಿಟ್ಟಿತು’ ಎಂದು ಪೀಟರ್ಸನ್‌ ಹೇಳಿದ್ದಾರೆ.

‘ವಿಶ್ವ ದರ್ಜೆಯ ಆಟಗಾರರಾದ ದ್ರಾವಿಡ್‌ ಹಾಗೂ ವೀರೇಂದ್ರ ಸೆಹ್ವಾಗ್‌ ಅವರೊಂದಿಗೆ ಇಂಡಿಯನ್‌ ಪ್ರೀಮಿಯರ್ ಲೀಗ್‌ (ಐಪಿಎಲ್‌) ಕ್ರಿಕೆಟ್‌ ಟೂರ್ನಿಯ ವೇಳೆ ಕಳೆದ ಕ್ಷಣಗಳು,ಬ್ಯಾಟಿಂಗ್‌ನಲ್ಲಿ ಇನ್ನಷ್ಟು ಉತ್ತಮ ಹೊಡೆತಗಳನ್ನು ಪ್ರಯೋಗಿಸಲು ನೆರವಾದವು‘ ಎಂದು ಪೀಟರ್ಸನ್‌ ನುಡಿದರು.

ಪೀಟರ್ಸನ್‌ ಅವರು ಐಪಿಎಲ್‌ನಲ್ಲಿ ಈ ಹಿಂದೆ ಇದ್ದ ಡೆಕ್ಕನ್‌ ಚಾರ್ಜರ್ಸ್‌ ಹೈದರಾಬಾದ್‌, ಡೆಲ್ಲಿ ಡೇರ್‌ಡೆವಿಲ್ಸ್‌, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳ ಪರ ಆಡಿದ್ದಾರೆ.

‘ಸ್ಪಿನ್‌ ಬೌಲಿಂಗ್‌ಅನ್ನು ಎದುರಿಸುವ ಕಲೆಯ ಕುರಿತು ದ್ರಾವಿಡ್‌ ನನಗೊಂದು ಇ–ಮೇಲ್‌ ಕಳುಹಿಸಿದರು. ಅಂದಿನಿಂದ ನನ್ನ ಮುಂದೆ ಸಂಪೂರ್ಣ ಹೊಸ ಜಗತ್ತೊಂದು ಸೃಷ್ಟಿಯಾಯಿತು. ಬೌಲರ್‌ ಚೆಂಡನ್ನು ಎಸೆದ ಬಳಿಕ ಅದರ ವೇಗವನ್ನು ಅರಿತು ಆಡುವುದು ದ್ರಾವಿಡ್‌ ನೀಡಿದ ಸಲಹೆಗಳಲ್ಲಿ ಪ್ರಮುಖವಾಗಿತ್ತು‘ ಎಂದು ಸ್ಕೈ ಸ್ಪೋರ್ಟ್ಸ್ ಹಮ್ಮಿಕೊಂಡಿದ್ದ ‘ಏಕದಿನ ಮಾದರಿ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್‌ ಬೆಳೆದುಬಂದ ಬಗೆ‘ ಎಂಬ ವಿಷಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಪೀಟರ್ಸನ್‌ ಈ ಮಾತು ಹೇಳಿದ್ದಾರೆ.

2004ರಿಂದ 2014ರ ಅವಧಿಯಲ್ಲಿ ಪೀಟರ್ಸನ್‌ ಅವರು ಸ್ಫೋಟಕ ಶೈಲಿಯ ವಿಶ್ವದ ಪ್ರಮುಖ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದರು. ಅದರಲ್ಲೂ ನಿರ್ದಿಷ್ಟವಾಗಿ ಸೀಮಿತ ಓವರ್‌ಗಳ ಮಾದರಿಯಲ್ಲಿ.

104 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಪೀಟರ್ಸನ್‌ 47.28ರ ಸರಾಸರಿಯಲ್ಲಿ 8181 ರನ್‌ ಕಲೆಹಾಕಿದ್ದಾರೆ. 136 ಏಕದಿನ ಪಂದ್ಯಗಳಿಂದ 4440 ರನ್‌ ಗಳಿಸಿದ್ದಾರೆ. ಬ್ಯಾಟಿಂಗ್‌ ಸರಾಸರಿ 40.73.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT