ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿ: ಭಾರತ ಡಿ ತಂಡಕ್ಕೆ ಕಠಿಣ ಗುರಿ

ಪ್ರಥಮ್, ತಿಲಕ್ ಅಮೋಘ ಬ್ಯಾಟಿಂಗ್
Published : 14 ಸೆಪ್ಟೆಂಬರ್ 2024, 14:16 IST
Last Updated : 14 ಸೆಪ್ಟೆಂಬರ್ 2024, 14:16 IST
ಫಾಲೋ ಮಾಡಿ
Comments

ಅನಂತಪುರ: ಪ್ರಥಮ್ ಸಿಂಗ್ ಮತ್ತು ತಿಲಕ್ ವರ್ಮಾ ಅವರಿಬ್ಬರೂ ಗಳಿಸಿದ ಶತಕದ ಬಲದಿಂದ ಭಾರತ ಎ ತಂಡವು ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಭಾರತ ಡಿ ತಂಡಕ್ಕೆ ಕಠಿಣ ಗುರಿ ನೀಡಿದೆ.

ಪಂದ್ಯದ ಮೂರನೇ ದಿನವಾದ ಶನಿವಾರ ಭಾರತ ಎ ತಂಡವು ಎರಡನೇ ಇನಿಂಗ್ಸ್‌ನಲ್ಲಿ  98 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 380 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಇದರೊಂದಿಗೆ ಡಿ ತಂಡಕ್ಕೆ 488 ರನ್‌ಗಳ ಗೆಲುವಿನ ಗುರಿಯೊಡ್ಡಿತು. ಇದಕ್ಕುತ್ತರವಾಗಿ ಡಿ ತಂಡವು 19 ಓವರ್‌ಗಳಲ್ಲಿ 1 ವಿಕೆಟ್‌ಗೆ 62 ರನ್ ಗಳಿಸಿದೆ. 

ಎ ತಂಡವು ಮೊದಲ ಇನಿಂಗ್ಸ್‌ನಲ್ಲಿ 107 ರನ್‌ಗಳ ಮುನ್ನಡೆ ಸಾಧಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಪ್ರಥಮ್ (122; 189ಎ, 4X12, 6X1) ಮತ್ತು ತಿಲಕ್ ವರ್ಮಾ (ಔಟಾಗದೆ 111; 193ಎ, 4X9) ಶತಕಗಳನ್ನು ದಾಖಲಿಸಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ 104 ರನ್ ಸೇರಿಸಿದರು. 

ಇದಕ್ಕೂ ಮುನ್ನ ಪ್ರಥಮ್ ಅವರು  ಮಯಂಕ್ ಅಗರವಾಲ್ ಅವರೊಂದಿಗೆ ಶತಕದ ಜೊತೆಯಾಟವಾಡಿದ್ದರು. ಎರಡನೇ ದಿನದಾಟದ ಅಂತ್ಯಕ್ಕೆ ಅರ್ಧಶತಕ ಗಳಿಸಿದ್ದ ಪ್ರಥಮ್ (59 ರನ್) ಕ್ರೀಸ್‌ನಲ್ಲಿದ್ದರು. ಶನಿವಾರ ಬೆಳಿಗ್ಗೆಯೂ ತಮ್ಮ ಚೆಂದದ ಬ್ಯಾಟಿಂಗ್ ಮುಂದುವರಿಸಿದರು. ಒಟ್ಟು 149 ಎಸೆತಗಳಲ್ಲಿ 100 ರನ್ ಗಳಿಸಿದರು. ರೈಲ್ವೆ ತಂಡದಲ್ಲಿ ಆಡುವ 32 ವರ್ಷದ ಪ್ರಥಮ್ ಅವರು ಎಡಗೈ ಸ್ಪಿನ್ನರ್ ಸೌರಭ್ ಕುಮಾರ್ ಎಸೆತದಲ್ಲಿ ಔಟಾದರು. 

ಇನ್ನೊಂದೆಡೆ ತಿಲಕ್ ವರ್ಮಾ ಅವರು ಚುರುಕಾಗಿ ಬ್ಯಾಟಿಂಗ್ ಮಾಡಿದರು. ಭಾರತದ  ಎಲ್ಲ ಮಾದರಿಗಳ ಕ್ರಿಕೆಟ್‌ ಆಟಗಾರ ಎಂದು ರೋಹಿತ್ ಶರ್ಮಾ ಅವರಿಂದ ಮೆಚ್ಚುಗೆಗೆ ಪಾತ್ರವಾಗಿರುವ ತಿಲಕ್ ಇಲ್ಲಿ ತಮ್ಮ ಪ್ರತಿಭೆ ಮೆರೆದರು. 

96 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ನಂತರದ 50 ರನ್‌ಗಳನ್ನು 81 ಎಸೆತಗಳಲ್ಲಿ ಪೂರೈಸಿದರು. 57.51ರ ಸ್ಟ್ರೈಕ್‌ರೇಟ್‌ನಲ್ಲಿ ಅವರು ಶತಕ ದಾಖಲಿಸಿದರು. ಅವರು ರಿಯಾನ್ ಪರಾಗ್ (20 ರನ್) ಜೊತೆಗೆ ಮೂರನೇ ವಿಕೆಟ್ ಪಾಲುದಾರಿಕೆಯಲ್ಲಿ 45 ರನ್ ಸೇರಿಸಿದರು. ಊಟದ ನಂತರ ರಿಯಾನ್ ಔಟಾದರು. ಆಗ ತಿಲಕ್ ಜೊತೆಗೂಡಿದ ಶಾಶ್ವತ್ ರಾವತ್ (64; 88ಎ, 4X7) ಆಟದ ದಿಕ್ಕನ್ನೇ ಬದಲಿಸಿಬಿಟ್ಟರು. ರನ್‌ ಗಳಿಕೆಗೆ ರಾಕೆಟ್ ವೇಗ ನೀಡಿದರು. ಇದರಿಂದಾಗಿ ದೊಡ್ಡ ಗುರಿ ಒಡ್ಡಲು ಸಾಧ್ಯವಾಯಿತು. 

ಸಂಕ್ಷಿಪ್ತ ಸ್ಕೋರು:

ಮೊದಲ ಇನಿಂಗ್ಸ್: ಭಾರತ ಎ: 84.3 ಓವರ್‌ಗಳಲ್ಲಿ 290. ಭಾರತ ಡಿ: 52.1 ಓವರ್‌ಗಳಲ್ಲಿ 183. ಎರಡನೇ ಇನಿಂಗ್ಸ್: ಭಾರತ ಎ: 98 ಓವರ್‌ಗಳಲ್ಲಿ 3ಕ್ಕೆ380 ಡಿಕ್ಲೇರ್ (ಪ್ರಥಮ್ ಸಿಂಗ್ 122, ತಿಲಕ್ ವರ್ಮಾ 111, ಶಾಶ್ವತ್ ರಾವತ್ 64, ರಿಯಾನ್ ಪರಾಗ್ 20, ಸೌರಭ್ ಕುಮಾರ್ 110ಕ್ಕೆ2) ಭಾರತ ಡಿ: 19 ಓವರ್‌ಗಳಲ್ಲಿ 1 ವಿಕೆಟ್‌ಗೆ 62 (ಯಶ್ ದುಬೆ ಔಟಾಗದೆ 15, ರಿಕಿ ಭುಯ್ ಔಟಾಗದೆ 44, ಖಲೀಲ್ ಅಹಮದ್ 17ಕ್ಕೆ1) 

ಅಭಿಮನ್ಯು ಈಶ್ವರನ್ ಶತಕ

ಅನಂತಪುರ (ಪಿಟಿಐ): ಶತಕ ಗಳಿಸಿದ ಆರಂಭಿಕ ಬ್ಯಾಟರ್ ಅಭಿಮನ್ಯು ಈಶ್ವರನ್ ಅವರು ಭಾರತ ಬಿ ತಂಡದ ಹೋರಾಟಕ್ಕೆ ಬಲ ತುಂಬಿದರು. ಆದರೂ ಸಿ ತಂಡದ ಎದುರು ಫಾಲೋ ಆನ್ ತಪ್ಪಿಸಿಕೊಳ್ಳಲು ಬಿ ತಂಡಕ್ಕೆ ಇನ್ನೂ 66 ರನ್‌ಗಳ ಅಗತ್ಯವಿದೆ.  ಸಿ ತಂಡವು ಮೊದಲ ಇನಿಂಗ್ಸ್‌ನಲ್ಲಿ  525  ರನ್‌ಗಳ ಮೊತ್ತ ಗಳಿಸಿದೆ. ಮೂರನೇ ದಿನದಾಟದ ಕೊನೆಯಲ್ಲಿ ಬಿ ತಂಡವು 101 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 309 ರನ್ ಗಳಿಸಿದೆ. ಅಭಿಮನ್ಯು (143; 262ಎ 4X12 6X1) ಶತಕ ದಾಖಲಿಸಿದರು. ಎನ್. ಜಗದೀಶ್ (70; 137ಎ) ಅರ್ಧಶತಕ ಗಳಿಸಿದರು. ಇವರಿಬ್ಬರೂ ಮೊದಲ ವಿಕೆಟ್ ಜೊತೆಯಾಟದಲ್ಲಿ 129 ರನ್‌ ಸೇರಿಸಿದರು.  ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಭಾರತ ಸಿ: 124.1 ಓವರ್‌ಗಳಲ್ಲಿ 525 ಭಾರತ ಬಿ: 101 ಓವರ್‌ಗಳಲ್ಲಿ 7ಕ್ಕೆ309 (ಅಭಿಮನ್ಯು ಈಶ್ವರನ್ 143 ನಾರಾಯಣ ಜಗದೀಶನ್ 70  ಸಾಯಿಕಿಶೋರ್ 21 ರಾಹುಲ್ ಚಾಹರ್ ಔಟಾಗದೆ 18 ಅನ್ಷುಲ್ ಕಾಂಬೋಜ್ 66ಕ್ಕೆ5 ವೈಶಾಖ ವಿಜಯಕುಮಾರ್ 67ಕ್ಕೆ1) 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT