ಬೆಂಗಳೂರು: ಭಾರತ ತಂಡದ ಎಡಗೈ ಬ್ಯಾಟರ್ ಎನ್.ತಿಲಕ್ ವರ್ಮಾ ಅವರು ಇಲ್ಲಿ ಆಗಸ್ಟ್ 28ರಿಂದ ನಡೆಯಲಿರುವ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ದಕ್ಷಿಣ ವಲಯ ತಂಡವನ್ನು ಮುನ್ನಡೆಸಲಿದ್ದಾರೆ. ಕರ್ನಾಟಕದ ಬ್ಯಾಟರ್ ದೇವದತ್ತ ಪಡಿಕ್ಕಲ್, ವೇಗಿ ವೈಶಾಖ ವಿಜಯಕುಮಾರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

22 ವರ್ಷ ವಯಸ್ಸಿನ ತಿಲಕ್ ಅವರು ಭಾರತ ತಂಡಕ್ಕಾಗಿ ನಾಲ್ಕು ಏಕದಿನ ಮತ್ತು 25 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈಚೆಗೆ ಕೌಂಟಿ ಕ್ರಿಕೆಟ್ನಲ್ಲಿ ಹ್ಯಾಂಪ್ಶೈರ್ ತಂಡಕ್ಕೆ ಆಡಿದ ಅವರು, ನಾಲ್ಕು ಇನಿಂಗ್ಸ್ಗಳಲ್ಲಿ ಕ್ರಮವಾಗಿ 100, 56, 47 ಮತ್ತು 112 ರನ್ ಗಳಿಸಿ ಗಮನ ಸೆಳೆದಿದ್ದರು.

ದುಲೀಪ್ ಟ್ರೋಫಿಗಾಗಿ ಭಾನುವಾರ 16 ಮಂದಿಯ ತಂಡವನ್ನು ಪ್ರಕಟಿಸಲಾಗಿದೆ. ಹಾಲಿ ರಣಜಿ ಟ್ರೋಫಿ ರನ್ನರ್ಸ್ ಅಪ್ ಕೇರಳ ತಂಡದಲ್ಲಿದ್ದ ನಾಲ್ವರಿಗೆ ಅವಕಾಶ ನೀಡಲಾಗಿದೆ. ಮೊಹಮ್ಮದ್ ಅಜರುದ್ದೀನ್ ಅವರನ್ನು ಉಪನಾಯಕನನ್ನಾಗಿ ನೇಮಕ ಮಾಡಲಾಗಿದೆ. ಎಂ.ಡಿ. ನಿಧೀಶ್, ಬಾಸಿಲ್ ಎನ್.ಪಿ. ಮತ್ತು ಸಲ್ಮಾನ್ ನಿಜಾರ್ ಅವರಿಗೂ ಮಣೆ ಹಾಕಲಾಗಿದೆ.

ತಮಿಳುನಾಡಿನ ಸ್ಪಿನ್ನರ್ ಆರ್.ಸಾಯಿಕಿಶೋರ್, ಬ್ಯಾಟರ್ ನಾರಾಯಣ್ ಜಗದೀಶನ್ ಅವರೂ ತಂಡದಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರಿಷಭ್ ಪಂತ್ ಗಾಯಗೊಂಡಿದ್ದರಿಂದ ಬದಲಿ ಆಟಗಾರನಾಗಿ ಜಗದೀಶನ್ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು.

ರಣಜಿ ಟ್ರೋಫಿಯ ಕಳೆದ ಆವೃತ್ತಿಯಲ್ಲಿ ಕರ್ನಾಟಕದ ಪರ ಹೆಚ್ಚು ರನ್ ಗಳಿಸಿದ್ದ (516) ಆರ್.ಸ್ಮರಣ್ ಅವರು ಮೀಸಲು ಆಟಗಾರರ ಪಟ್ಟಿಯಲ್ಲಿದ್ದಾರೆ.

ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯು ಈ ವರ್ಷದಿಂದ ಮತ್ತೆ ಅಂತರ ವಲಯ ತಂಡಗಳ ಮಾದರಿಯಲ್ಲಿ ನಡೆಯಲಿದೆ. ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ಕೇಂದ್ರ ಮತ್ತು ಈಶಾನ್ಯ ವಲಯ ಸೇರಿದಂತೆ ಒಟ್ಟು ಆರು ತಂಡಗಳು ಸೆಣಸಾಟ ನಡೆಸಲಿವೆ. ನಾಲ್ಕು ದಿನಗಳ ಟೂರ್ನಿಯು ಇಲ್ಲಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆಯಲಿದೆ.

ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಉತ್ತರ ವಲಯವು ಪೂರ್ವ ವಲಯದ ವಿರುದ್ಧ; ಮಧ್ಯ ವಲಯವು ಈಶಾನ್ಯ ವಲಯದ ವಿರುದ್ಧ ಆಡಲಿವೆ. ದಕ್ಷಿಣ ವಲಯ ಮತ್ತು ಪಶ್ಚಿಮ ವಲಯಗಳು ನೇರ ಸೆಮಿಫೈನಲ್ಗೆ ಪ್ರವೇಶ ಪಡೆದಿವೆ.

ದಕ್ಷಿಣ ವಲಯ ತಂಡ ಹೀಗಿದೆ: ತಿಲಕ್ ವರ್ಮಾ (ನಾಯಕ), ಮೊಹಮ್ಮದ್ ಅಜರುದ್ದೀನ್ (ಉಪ ನಾಯಕ), ತನ್ಮಯ್ ಅಗರವಾಲ್, ದೇವದತ್ತ ಪಡಿಕ್ಕಲ್, ಮೋಹಿತ್ ಕಾಳೆ, ಸಲ್ಮಾನ್ ನಿಜಾರ್, ನಾರಾಯಣ್ ಜಗದೀಶನ್, ಟಿ.ವಿಜಯ್, ಆರ್. ಸಾಯಿ ಕಿಶೋರ್, ತನಯ್ ತ್ಯಾಗರಾಜನ್, ವೈಶಾಖ ವಿಜಯ್ಕುಮಾರ್, ಎಂ.ಡಿ. ನಿಧೀಶ್, ರಿಕಿ ಭುಯಿ, ಬಾಸಿಲ್ ಎನ್.ಪಿ, ಗುರ್ಜಪ್ನೀತ್ ಸಿಂಗ್, ಸ್ನೇಹಲ್ ಕೌತಂಕರ್.

ಮೀಸಲು ಆಟಗಾರರು: ಮೋಹಿತ್ ರೆಡ್ಕರ್, ಆರ್. ಸ್ಮರನ್, ಅಂಕಿತ್ ಶರ್ಮಾ, ಎಡೆನ್ ಆಪಲ್ ಟಾಮ್, ಆ್ಯಂಡ್ರೆ ಸಿದ್ದಾರ್ಥ್, ಶೇಖ್ ರಶೀದ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.