ಮಂಗಳವಾರ, ಜನವರಿ 21, 2020
27 °C

ಹೆಚ್ಚು ಮಾಂಸ ತಿನ್ನಿ, ಶಕ್ತಿ ಬರುತ್ತೆ: ಬಾಂಗ್ಲಾ ಆಟಗಾರರಿಗೆ ಡೆಲ್ಪೋರ್ಟ್ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಆಹಾರಕ್ರಮದಲ್ಲಿ ಮಾಂಸಾಹಾರಕ್ಕೆ ಒತ್ತು ನೀಡುವುದರಿಂದ ಟಿ20 ಕ್ರಿಕೆಟ್‌ನಲ್ಲಿ ಶಕ್ತಿಶಾಲಿ ಹೊಡೆತಗಳನ್ನು ಪ್ರಯೋಗಿಸಲು ಸಾಧ್ಯವಾಗುತ್ತದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಕ್ಯಾಮೆರೋನ್ ಡೆಲ್ಪೋರ್ಟ್‌ ಬಾಂಗ್ಲಾದೇಶ ಕ್ರಿಕೆಟಿಗರಿಗೆ ಸಲಹೆ ನೀಡಿರುವುದಾಗಿ ಕ್ರಿಕ್‌ಫ್ರೆನ್ಜಿ ವೆಬ್‌ಸೈಟ್ ವರದಿ ಮಾಡಿದೆ. ಮಾಂಸ ಸೇವಿಸುವುದರಿಂದ ತೋಳಿಗೆ ಬಲ ಬರುತ್ತದೆ ಎಂಬುದು ಡೆಲ್ಪೋರ್ಟ್ ನಂಬಿಕೆ.

ಬಾಂಗ್ಲಾದೇಶ ಪ್ರಿಮಿಯರ್‌ ಲೀಗ್‌ನಲ್ಲಿ ರಂಗ್‌ಪುರ್‌ ರೇಂಜರ್ಸ್‌ ತಂಡದ ಪರ ಆಡುವ ಡೆಲ್ಪೋರ್ಟ್‌, ‘ಹೆಚ್ಚಾಗಿ ಮಾಂಸ ತಿನ್ನಿ(ಚೆಂಡನ್ನು ಬೌಂಡರಿ ಗೆರೆಯಿಂದಾಚೆಗೆ ಹೊಡೆಯಲು). ನಾನು ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ ನಡೆಸುತ್ತೇನೆ ಮತ್ತು ಫಿಟ್‌ ಆಗಿದ್ದೇನೆ. ನೀವೂ ಕಠಿಣ ಪರಿಶ್ರಮದೊಂದಿಗೆ ಅಭ್ಯಾಸ ನಡೆಸಿ, ಪ್ರತಿಫಲ ಸಿಗುತ್ತದೆ’ ಎಂದು ಸಲಹೆ ನೀಡಿದ್ದಾರೆ.

‘ಇಲ್ಲಿನ ಪಿಚ್‌ಗಳಲ್ಲಿ ಚೆಂಡು ಹೆಚ್ಚಾಗಿ ಪುಟಿಯುವುದಿಲ್ಲ. ಆದರೆ ಆಫ್ರಿಕಾ ಪಿಚ್‌ಗಳಲ್ಲಿ ಚೆಂಡು ಸಾಕಷ್ಟು ಬೌನ್ಸ್‌ ಆಗುತ್ತದೆ. ಈ ಕಾರಣದಿಂದಾಗಿ ದಕ್ಷಿಣ ಆಫ್ರಿಕಾದ ಎಲ್ಲರೂ ಬಿಗ್‌ ಹಿಟ್ಟರ್‌ಗಳೆ. ದೊಡ್ಡ ಹೊಡೆತಗಳನ್ನು ಪ್ರಯೋಗಿಸಲು ಇದೂ ಸಹಕಾರಿ’ ಎಂದೂ ಅಭಿಪ್ರಾಯಪಟ್ಟಿದ್ದಾರೆ.

ಇದು ಡೆಲ್ಪೋರ್ಟ್‌ ಅಭಿಪ್ರಾಯವಷ್ಟೇ. ವಿಶ್ವ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ಮತ್ತು ಫಿಟ್‌ನೆಸ್‌ನಿಂದಾಗಿ ಮಾದರಿಯಾಗಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್‌ ಕೊಹ್ಲಿ ಮಾಂಸಾಹಾರದಿಂದ ಅಂತರ ಕಾಯ್ದುಕೊಂಡು ಸಸ್ಯಾಹಾರಕ್ಕೆ ಒತ್ತು ನೀಡಿದ್ದಾರೆ. ಬಟರ್‌ ಚಿಕನ್‌ ಹಾಗೂ ಕಬಾಬ್‌ ಪ್ರಿಯ ಕೊಹ್ಲಿ ಇದೀಗ ಸಸ್ಯಾಹಾರ ಪಾಲನೆ ಮಾಡುತ್ತಿದ್ದಾರೆ. ಮಾಂಸಾಹಾರದಿಂದ ಅಂತರ ಕಾಯ್ದುಕೊಂಡ ಬಳಿಕ, ಆಟದಲ್ಲಿ ಸಾಕಷ್ಟು ಸುಧಾರಣೆಯಾಗಿದೆ ಎಂದು ಕೊಹ್ಲಿಯೇ ಹೆಳಿಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು