ಸೋಮವಾರ, ಆಗಸ್ಟ್ 15, 2022
24 °C

ಕ್ರಿಕೆಟ್: ಜಂಪಾ ಸ್ಪಿನ್‌ಗೆ ತಡಬಡಾಯಿಸಿದ ಇಂಗ್ಲೆಂಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮ್ಯಾಂಚೆಸ್ಟರ್ : ಆಸ್ಟ್ರೇಲಿಯಾದ ಆ್ಯಡಂ ಜಂಪಾ ಸ್ಪಿನ್ ಮೋಡಿಗೆ ಆತಿಥೇಯ ಇಂಗ್ಲೆಂಡ್‌ ಬ್ಯಾಟಿಂಗ್ ಪಡೆಯು ತಡವರಿಸಿತು.‌

ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಏಯಾನ್ ಮಾರ್ಗನ್ ಬಳಗವು 50 ಓವರ್‌ಗಳಲ್ಲಿ 9ಕ್ಕೆ 231 ರನ್‌ಗಳ ಸಾಧಾರಣ ಮೊತ್ತ ಗಳಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡವು  ಏಳು ಓವರ್‌ಗಳಲ್ಲಿ 29 ರನ್‌ಗಳಿಗೇ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ಜಾನಿ ಬೆಸ್ಟೊ ಖಾತೆ ತೆರೆಯದೇ ಮಿಚೆಲ್ ಸ್ಟಾರ್ಕ್‌ಗೆ ವಿಕೆಟ್‌ ಒಪ್ಪಿಸಿದರು.

ಜೇಸನ್ ರಾಯ್ (21ರನ್) ರನ್‌ಔಟ್ ಆದರು. ಈ ಹಂತದಲ್ಲಿ ರೂಟ್ (39; 73ಎಸೆತ) ಮತ್ತು ನಾಯಕ ಮಾರ್ಗನ್ (42; 52ಎ) ಇನಿಂಗ್ಸ್‌ಗೆ ಚೇತರಿಕೆ ನೀಡುವ ಪ್ರಯತ್ನ ಮಾಡಿದರು. ಇವರಿಬ್ಬರಿಗೂ ಜಂಪಾ ಪೆವಿಲಿಯನ್ ಹಾದಿ ತೋರಿದರು. ಸ್ಯಾಮ್ ಬಿಲ್ಲಿಂಗ್ಸ್‌ ಅವರನ್ನೂ ಜಂಪಾ ಕ್ಲೀನ್‌ಬೌಲ್ಡ್ ಮಾಡಿದರು. ತುಸು ಹೋರಾಟ ತೋರಿದ ಕ್ರಿಸ್ ವೋಕ್ಸ್‌ (26 ರನ್), ಕೆಳಕ್ರಮಾಂಕದಲ್ಲಿ ಟಾಮ್ ಕರನ್ (37) ಮತ್ತು ಆದಿಲ್ ರಶೀದ್ (ಔಟಾಗದೆ 35) ಅವರು ಎರಡಂಕಿ ದಾಟಿದ್ದರಿಂದ ತಂಡವು ಇನ್ನೂರರ ಗಡಿ ದಾಟಲು ಸಾಧ್ಯವಾಯಿತು. 

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್: 50 ಓವರ್‌ಗಳಲ್ಲಿ 9ಕ್ಕೆ231 (ಜೇಸನ್ ರಾಯ್ 21, ಜೋ ರೂಟ್ 39, ಏಯಾನ್ ಮಾರ್ಗನ್ 42, ಕ್ರಿಸ್ ವೋಕ್ಸ್‌ 26, ಟಾಮ್ ಕರನ್ 37,  ಆದಿಲ್ ರಶೀದ್ ಬ್ಯಾಟಿಂಗ್ 35, ಮಿಚೆಲ್ ಸ್ಟಾರ್ಕ್ 38ಕ್ಕೆ2, ಆ್ಯಡಂ ಜಂಪಾ 36ಕ್ಕೆ3) ಆಸ್ಟ್ರೇಲಿಯಾ ವಿರುದ್ಧ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು