ಶುಕ್ರವಾರ, ನವೆಂಬರ್ 27, 2020
18 °C

ವೇತನ ಕಡಿತಕ್ಕೆ ಇಂಗ್ಲೆಂಡ್‌ ಆಟಗಾರರ ಒಪ್ಪಿಗೆ

ಎಪಿ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಕೊರೊನಾ ಹಾವಳಿಯ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಯು (ಇಸಿಬಿ) ಆದಾಯ ನಷ್ಟ ಅನುಭವಿಸಿದೆ. ಈ ಹಿನ್ನೆಲೆಯಲ್ಲಿ ತಂಡದ ಆಟಗಾರರು ಶೇಕಡಾ 15ರಷ್ಟು ವೇತನ ಕಡಿತಕ್ಕೆ ಒಪ್ಪಿಕೊಂಡಿದ್ದಾರೆ.

‘ಮಂಡಳಿಯ ಗುತ್ತಿಗೆ ಹೊಂದಿರುವ ಆಟಗಾರರ ಉಳಿತಾಯ, ಪಂದ್ಯ ಶುಲ್ಕ ಹಾಗೂ ಬೋನಸ್‌ಗಳಲ್ಲಿ ಕಡಿತವಾಗಲಿದೆ‘ ಎಂದು ಇಸಿಬಿ ಹೇಳಿದೆ.

ವೇತನ ಕಡಿತ ಅಕ್ಟೋಬರ್ 1ರಿಂದಲೇ ಜಾರಿಗೆ ಬಂದಿದೆ ಎಂದೂ ಮಂಡಳಿ ತಿಳಿಸಿದೆ.

ಇಂಗ್ಲೆಂಡ್‌ ಇತ್ತೀಚೆಗೆ ವೆಸ್ಟ್‌ ಇಂಡೀಸ್‌, ಪಾಕಿಸ್ತಾನ, ಐರ್ಲೆಂಡ್‌ ಹಾಗೂ ಆಸ್ಟ್ರೇಲಿಯಾ ತಂಡಗಳ ವಿರುದ್ಧದ ಸರಣಿಗಳಿಗೆ ಆತಿಥ್ಯ ವಹಿಸಿತ್ತು. ಎಲ್ಲ ಪಂದ್ಯಗಳು ಬಹುತೇಕ ಖಾಲಿ ಕ್ರೀಡಾಂಗಣದಲ್ಲಿ ನಡೆದಿದ್ದವು.

‘ಇಂತಹ ಸವಾಲಿನ ಸಮಯದಲ್ಲಿ ಪ್ರಬುದ್ಧತೆ ಹಾಗೂ ಜವಾಬ್ದಾರಿ ತೋರಿದ ತಂಡದ ನಾಯಕರಾದ ಜೊ ರೂಟ್‌, ಏಯಾನ್‌ ಮಾರ್ಗನ್‌ ಸೇರಿದಂತೆ ಎಲ್ಲ ಆಟಗಾರರಿಗೆ ಕೃತಜ್ಞತೆ ಸಲ್ಲುತ್ತವೆ‘ ಎಂದು ತಂಡದ ನಿರ್ದೇಶಕ ಆ್ಯಶ್ಲೆ ಗೈಲ್ಸ್ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು