ಆಡಿದ ಮಾತಿಗೆ ಮರುಗಿದ ಮಾಂಜ್ರೇಕರ್‌

ಭಾನುವಾರ, ಜೂಲೈ 21, 2019
27 °C

ಆಡಿದ ಮಾತಿಗೆ ಮರುಗಿದ ಮಾಂಜ್ರೇಕರ್‌

Published:
Updated:

ಮ್ಯಾಂಚೆಸ್ಟರ್‌: ರವೀಂದ್ರ ಜಡೇಜ ಅವರನ್ನು ‘ಸಣ್ಣ ಪುಟ್ಟ ಆಟಗಾರ’ ಎಂದು ಹೀಗಳೆದಿದ್ಹ ಭಾರತ ತಂಡದ  ಮಾಜಿ ಬ್ಯಾಟ್ಸ್‌ಮನ್‌ ಸಂಜಯ್‌ ಮಾಂಜ್ರೇಕರ್‌ ಈಗ ಪರಿತಪಿಸುವಂತಾಗಿದೆ. ಓಲ್ಡ್‌ ಟ್ರಾಫರ್ಡ್‌ನಲ್ಲಿ ಬ್ಯಾಟಿಂಗ್‌, ಫೀಲ್ಡಿಂಗ್  ಮತ್ತು ಕ್ಷೇತ್ರ ರಕ್ಷಣೆ ಮೂರರಲ್ಲೂ ಮಿಂಚಿದ ಜಡೇಜ ತಮ್ಮ ಮಾತನ್ನು ಸಂಪೂರ್ಣ ಮಿಥ್ಯವಾಗಿಸಿದರು ಎಂದು ಮಾಂಜ್ರೇಕರ್‌ ಒಪ್ಪಿಕೊಂಡಿದ್ದಾರೆ.

ನ್ಯೂಜಿಲೆಂಡ್‌ ವಿರುದ್ಧ ಆರಂಭದ ಪೆಟ್ಟಿನಿಂದ ಕಂಗೆಟ್ಟಿದ್ದ ಭಾರತವನ್ನು, ಆಲ್‌ರೌಂಡರ್‌ ಜಡೇಜ ಅವರ 77 ರನ್‌ಗಳ (56 ಎಸೆತಗಳಲ್ಲಿ) ಅಮೋಘ ಇನಿಂಗ್ಸ್‌ ಹೆಚ್ಚುಕಮ್ಮಿ ಗೆಲುವಿನ ಹಾದಿಗೆ ತಂದು ನಿಲ್ಲಿಸಿತ್ತು.

ಮಾಂಜ್ರೇಕರ್‌ ಅವರು ನಿಯಾಲ್‌ ಓ’ಬ್ರಯಾನ್‌ ಮತ್ತು ಇಯಾನ್‌ ಸ್ಮಿತ್‌ ಜೊತೆ ಸಂಭಾಷಣೆ ನಡೆಸುತ್ತಿರುವ  ವಿಡಿ ಯೊವನ್ನು ಐಸಿಸಿ ಪೋಸ್ಟ್‌ ಮಾಡಿದೆ.

‘ಸಣ್ಣ ಪುಟ್ಟ ಶ್ರೇಷ್ಠ ಆಟದ ತುಣುಕುಗಳನ್ನು ಪೋಣಿಸುವ ಮೂಲಕ ಅವರು ನನ್ನ ಹೇಳಿಕೆಯನ್ನು ನುಚ್ಚುನೂರು ಮಾಡಿದರು. ಜಡೇಜ ಅವರ ಇಂಥ ಆಟವನ್ನು ನಾವೆಂದೂ ಕಂಡಿರಲಿಲ್ಲ. ಬುಧವಾರ ಅವರ ಆಟ ಅತ್ಯಮೋಘವಾಗಿತ್ತು’ ಎಂದು ವಿಡಿಯೊ ದಲ್ಲಿ ಮಾಂಜ್ರೇಕರ್‌ ಶ್ಲಾಘಿಸಿದ್ದಾರೆ.

‘ನಾನು ಅವರ (ಜಡೇಜ) ಕ್ಷಮೆ ಕೇಳಬೇಕಾಗಿದೆ. ಅವರು ನಾನು ಎಲ್ಲಿದ್ದೇ ನೆಂದು ನೋಡುತ್ತಿದ್ದರು. ಆದರೆ ನಾನು ಅವರು ನೋಡುತ್ತಿದ್ದ ಕಡೆ ಇರಲಿಲ್ಲ. ಆಗ ಲಾಂಜ್‌ನಲ್ಲಿ ಊಟ ಮಾಡುತ್ತಿದ್ದೆ. ಕ್ಷಮೆಯಿರಲಿ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 15

  Happy
 • 3

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !