ಸೋಮವಾರ, ಜೂನ್ 1, 2020
27 °C

‘ಆತನದು ನಂಬಲಸಾಧ್ಯವಾದ ಆಟ’: ವಿರಾಟ್ ಕೊಹ್ಲಿಯನ್ನು ಹೊಗಳಿದ ಪಾಕ್ ಮಾಜಿ ಕ್ರಿಕೆಟಿಗ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಕ್ರಿಕೆಟ್‌ನ ಮೂರೂ ಮಾದರಿಯಲ್ಲಿ 50ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ರನ್‌ಗಳಿಸುತ್ತಿರುವ ವಿಶ್ವದ ಏಕೈಕ ಬ್ಯಾಟ್ಸ್‌ಮನ್‌ ಎನಿಸಿರುವ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅವರ ಆಟವನ್ನು, ಪಾಕಿಸ್ತಾನ ತಂಡದ ಮಾಜಿ ಆಟಗಾರ ಮೊಹಮದ್‌ ಯೂಸುಫ್‌ ಕೊಂಡಾಡಿದ್ದಾರೆ.

ಕ್ರೀಡಾವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಮೊಹಮದ್‌, ‘ಸದ್ಯ ರೋಹಿತ್‌ ಶರ್ಮಾ, ಸ್ಟೀವ್‌ ಸ್ಮಿತ್‌, ಕೇನ್‌ ವಿಲಿಯಮ್ಸನ್‌ ಅವರಂತಹ ಹಲವು ಉತ್ತಮ ಆಟಗಾರರಿದ್ದಾರೆ. ಆದರೆ, ಎಲ್ಲ ಮಾದರಿಯಲ್ಲಿ ಕೊಹ್ಲಿಯೇ ಶ್ರೇಷ್ಠ’ ಎಂದು ಹೇಳಿದ್ದಾರೆ.

‘ಪ್ರತಿ ಇನಿಂಗ್ಸ್‌ನಲ್ಲಿ ಆತ ಬ್ಯಾಟ್‌ ಬೀಸುವ ರೀತಿ, ಒತ್ತಡವನ್ನು ಮೀರಿ ನಿಲ್ಲುವ ಮತ್ತು ಶತಕ ಬಾರಿಸುವ ರೀತಿ ನಂಬಲಸಾಧ್ಯವಾದದ್ದು’ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ, ಪಾಕಿಸ್ತಾನ ಯುವ ಕ್ರಿಕೆಟಿಗ ಬಾಬರ್ ಅಜಂ ಅವರನ್ನು ವಿರಾಟ್‌ ಕೊಹ್ಲಿಗೆ ಹೋಲಿಸುವುದು ಸಂಜಸವಲ್ಲ ಎಂದೂ ಹೇಳಿದರು.

‘ಬಾಬರ್‌ ಇನ್ನೂ ಯುವಕ. ಸಾಕಷ್ಟು ಜನರು ಆತನನ್ನು ಕೊಹ್ಲಿಗೆ ಹೋಲಿಸಿದ್ದಾರೆ. ನನ್ನ ಪ್ರಕಾರ ಇದು ಸರಿಯಲ್ಲ. ಏಕೆಂದರೆ ಕೊಹ್ಲಿ 2008–09ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗಿನಿಂದ ಸಾಕಷ್ಟು ಪಂದ್ಯಗಳನ್ನು ಆಡಿದ್ದಾರೆ. ಹೆಚ್ಚಿನ ಅನುಭವ ಗಳಿಸಿದ್ದಾರೆ. ಬಾಬರ್‌ ನಂಬಲರ್ಹ ಬ್ಯಾಟ್ಸ್‌ಮನ್‌ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಇಬ್ಬರು ಪ್ರಚಂಡ ಆಟಗಾರರನನ್ನು ಹೋಲಿಸಲು ಇದು ಸಕಾಲ್ಲ. ಸದ್ಯ ಕೊಹ್ಲಿ ನಂ.1 ಆಟಗಾರ. ಆತನೇ ಶ್ರೇಷ್ಠ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದುವರೆಗೆ 86 ಟೆಸ್ಟ್‌ ಪಂದ್ಯಗಳ 145 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿರುವ ಕೊಹ್ಲಿ, 27 ಶತಕ ಸಹಿತ 53.63ರ ಸರಾಸರಿಯಲ್ಲಿ 7240 ರನ್‌ ಗಳಿಸಿದ್ದಾರೆ. 248 ಪಂದ್ಯಗಳ 239 ಇನಿಂಗ್ಸ್‌ಗಳಿಂದ 43 ಶತಕ ಬಾರಿಸಿ, 59.34ರ ಸರಾಸರಿಯಲ್ಲಿ 11,867 ರನ್‌ ಸಿಡಿಸಿದ್ದಾರೆ. ಉಳಿದಂತೆ 81 ಟಿ–20 ಪಂದ್ಯಗಳ 76 ಇನಿಂಗ್ಸ್‌ಗಳಿಂದ 50.8ರ ಸರಾಸರಿಯಲ್ಲಿ 2794 ರನ್‌ ಕಲೆಹಾಕಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು