ಬೆಂಗಳೂರು: ಐದು ವಿಕೆಟ್ ಗೊಂಚಲು ಗಳಿಸಿದ ಅಭಿಷೇಕ್ ಪ್ರಭಾಕರ್ ಅವರ ಪರಿಣಾಮಕಾರಿ ದಾಳಿ ಮತ್ತು ಆರ್. ಸ್ಮರಣದ ಅರ್ಧಶತಕದಿಂದ ಗುಲ್ಬರ್ಗ ಮಿಸ್ಟಿಕ್ಸ್ ತಂಡವು ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ನಾಲ್ಕನೇ ಜಯ ಸಾಧಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಮಧ್ಯಾಹ್ನ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಗುಲ್ಬರ್ಗ ತಂಡದ ನಾಯಕ ದೇವದತ್ತ ಪಡಿಕ್ಕಲ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಭಿಷೇಕ್ (4–0–21–5) ಅವರ ದಾಳಿಯ ಮುಂದೆ ಮೈಸೂರು ವಾರಿಯರ್ಸ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 154 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಗುಲ್ಬರ್ಗ್ ತಂಡವು ಆರ್. ಸ್ಮರಣ್ (52; 36ಎ, 4X2, 6X4) ಅವರ ಅರ್ಧಶತಕದ ಬಲದಿಂದ 18.5 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 157 ರನ್ ಗಳಿಸಿತು. 5 ವಿಕೆಟ್‌ಗಳಿಂದ ಜಯಿಸಿತು.

ಗುಲ್ಬರ್ಗ್ ತಂಡಕ್ಕೆ ಲವನಿತ್ ಸಿಸೊಡಿಯಾ (23; 16ಎ) ಮತ್ತು ದೇವದತ್ತ ಪಡಿಕ್ಕಲ್ (24; 21ಎ) ಅವರು ಮೊದಲ ವಿಕೆಟ್‌ಗೆ 41 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಆದರೆ ವಿದ್ಯಾಧರ್ ಪಾಟೀಲ ಮತ್ತು ಕೆ. ಗೌತಮ್ ಅವರು ಕ್ರಮವಾಗಿ ಲವನೀತ್ ಮತ್ತು ದೇವದತ್ತ ವಿಕೆಟ್‌ಗಳನ್ನು ಗಳಿಸಿದರು. ಕೆ.ವಿ.ಅನೀಶ್ (8) ಬೇಗನೆ ಔಟಾದರು. ಈ ಹಂತದಲ್ಲಿ ಸ್ಮರಣ್ ಮತ್ತು ರಿತೇಶ್ ಭಟ್ಕಳ (22; 16ಎ) ತಂಡದ ಗೆಲುವಿಗೆ ಬಲ ತುಂಬಿದರು.

ಮೊದಲು ಬ್ಯಾಟಿಂಗ್ ಮಾಡಿದ ಕರುಣ್ ನಾಯರ್ ನಾಯಕತ್ವದ ಮೈಸೂರು ತಂಡದಲ್ಲಿ ದೊಡ್ಡ ಜೊತೆಯಾಟಗಳು ಬೆಳೆಯದಂತೆ ಅಭಿಷೇಕ್ ಪ್ರಭಾಕರ್ ನೋಡಿಕೊಂಡರು. ಅವರು ಪ್ರಮುಖ ಬ್ಯಾಟರ್‌ಗಳ ವಿಕೆಟ್ ಕಬಳಿಸಿದರು.

ಸಂಕ್ಷಿಪ್ತ ಸ್ಕೋರು

ಮೈಸೂರು ವಾರಿಯರ್ಸ್: 20 ಓವರ್‌ಗಳಲ್ಲಿ 9ಕ್ಕೆ154 (ಎಸ್.ಯು. ಕಾರ್ತಿಕ್ 24, ಜೆ. ಸುಚಿತ್ ಔಟಾಗದೆ 25, ಮನೋಜ್ ಭಾಂಡಗೆ 38, ವೈಶಾಖ ವಿಜಯಕುಮಾರ್ 47ಕ್ಕೆ2, ಅಭಿಷೇಕ್ ಪ್ರಭಾಕರ್ 21ಕ್ಕೆ5, ಪ್ರವೀಣ ದುಬೆ 19ಕ್ಕೆ1)

ಗುಲ್ಬರ್ಗ ಮಿಸ್ಟಿಕ್ಸ್: 18.5 ಓವರ್‌ಗಳಲ್ಲಿ 5ಕ್ಕೆ157 (ಲವನಿತ್ ಸಿಸೊಡಿಯಾ 23, ದೇವದತ್ತ ಪಡಿಕ್ಕಲ್ 24, ಆರ್. ಸ್ಮರಣ್ 52, ರಿತೇಶ್ ಭಟ್ಕಳ 22, ಮನೋಜ್ ಭಾಂಡಗೆ 36ಕ್ಕೆ2)

ಫಲಿತಾಂಶ: ಗುಲ್ಬರ್ಗ ಮಿಸ್ಟಿಕ್ಸ್‌ಗೆ 5 ವಿಕೆಟ್‌ಗಳ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.