ಭಾನುವಾರ, ಜನವರಿ 24, 2021
27 °C

ಹನುಮ ವಿಹಾರಿ ಕ್ರಿಕೆಟ್‌ನ ಕೊಲೆ ಮಾಡಿದ್ದಾರೆ: ಬಿಜೆಪಿ ಸಂಸದ ಬಾಬುಲ್ ಸುಪ್ರಿಯೊ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

Babul Supriyo. Credit: AFP Photo

ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿಯ ಮೂರನೇ ಪಂದ್ಯ ಡ್ರಾ ಮೂಲಕ ಕೊನೆಯಾಗಿದೆ. ಸಿಡ್ನಿಯಲ್ಲಿ ಸೋಮವಾರ ನಡೆದ ಐದನೇ ದಿನದಾಟದಲ್ಲಿ ಭಾರತ ತಂಡ ಟೆಸ್ಟ್ ಡ್ರಾ ಮಾಡಿಕೊಂಡಿದೆ. ಈ ಪಂದ್ಯದಲ್ಲಿ ಸುದೀರ್ಘ ಓವರ್ ಎದುರಿಸಿದ ಹನುಮ ವಿಹಾರಿ, ಕ್ರಿಕೆಟ್ ಅನ್ನು ಕೊಲೆ ಮಾಡಿದ್ದಾರೆ ಎಂದು ಬಿಜೆಪಿ ಸಂಸದ ಬಾಬುಲ್ ಸುಪ್ರಿಯೊ ಆರೋಪಿಸಿದ್ದಾರೆ.

ಟ್ವೀಟ್ ಮೂಲಕ ಸುಪ್ರಿಯೋ ಆರೋಪ

ಸಂಸದ ಬಾಬುಲ್ ಸುಪ್ರಿಯೊ, ಹನುಮ ವಿಹಾರಿ ಕುರಿತು ಟ್ವೀಟ್ ಮಾಡಿದ್ದು, ಭಾರತ ತಂಡಕ್ಕೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನಲ್ಲಿ ಗೆಲುವಿನ ಅವಕಾಶವಿದ್ದರೂ, ಅದನ್ನು ಮಾಡದೇ, ಹನುಮ ವಿಹಾರಿ ಕ್ರಿಕೆಟ್‌ನ ಕೊಲೆ ಮಾಡಿದ್ದಾರೆ. 109 ಎಸೆತ ಎದುರಿಸಿ ಕೇವಲ 7 ರನ್ ಗಳಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ, ಕೊನೆಯ ಸಾಲಿನಲ್ಲಿ, ನನಗೆ ಕ್ರಿಕೆಟ್ ಬಗ್ಗೆ ಏನೂ ತಿಳಿದಿಲ್ಲ ಎಂದು ನನಗೆ ತಿಳಿದಿದೆ ಎಂದೂ ಟ್ವೀಟ್ ಮಾಡಿದ್ದಾರೆ.

ಸಂಸದರಿಗೆ ಟ್ವಿಟರ್‌ನಲ್ಲಿ ತರಾಟೆ

ಭಾರತದ ಟೆಸ್ಟ್ ಪಂದ್ಯದ ಕುರಿತು ಜನರು ಶ‌್ಲಾಘಿಸುತ್ತಿರುವಂತೆಯೇ, ಸಂಸದ ಬಾಬುಲ್ ಮಾಡಿರುವ ಟ್ವೀಟ್ ಬಗ್ಗೆ ಟ್ವೀಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹನುಮ ವಿಹಾರಿ ಮತ್ತು ಟೆಸ್ಟ್ ಪಂದ್ಯದ ಕುರಿತು ಏನೂ ಅರಿಯದ ನೀವು ದಯವಿಟ್ಟು ರಾಜಕೀಯದಲ್ಲೇ ಇರಿ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು