ಶುಕ್ರವಾರ, ಡಿಸೆಂಬರ್ 9, 2022
21 °C

Daughter's Day: ಮಗಳು ಸಾರಾಗೆ ಸಚಿನ್ ತೆಂಡೂಲ್ಕರ್ ಶುಭ ಹಾರೈಕೆ

ಪ್ರಜಾವಾಣಿ ವೆಬ್ ಡೆ‌ಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ‘ಮಗಳ ದಿನ (Daughter's Day)’ ಸಂದರ್ಭದಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಇನ್‌ಸ್ಟಾಗ್ರಾಂನಲ್ಲಿ ಮಗಳು ಸಾರಾಗೆ ಶುಭಾಶಯ ಕೋರಿದ್ದು, ಪತ್ರವೊಂದನ್ನು ಬರೆದಿದ್ದಾರೆ.

ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಆಗಾಗ ಸಂದೇಶಗಳನ್ನು ಪ್ರಕಟಿಸುತ್ತಾ ಇರುವ ಸಚಿನ್, ಮಗಳ ದಿನದಂದು ಸಾರಾಗೆ ಹೃತ್ಪೂರ್ವಕ ಶುಭಾಶಯ ಕೋರಿ ಸಂದೇಶ ಪ್ರಕಟಿಸಿದ್ದಾರೆ.

ಸಂದೇಶದ ಜತೆಗೆ, ಸಾರಾ ಮತ್ತು ಸಾಕು ನಾಯಿಗಳು ಹಾಗೂ ತಾವು ಜತೆಯಾಗಿ ಕುಳಿತಿರುವ ಎರಡು ಚಿತ್ರಗಳನ್ನೂ ಸಚಿನ್ ಪೋಸ್ಟ್ ಮಾಡಿದ್ದಾರೆ.

‘ನನ್ನ ಮಡಿಲಲ್ಲಿ ಕುಳಿತಿರುತ್ತಿದ್ದ ನೀನಿಂದು ಎತ್ತರಕ್ಕೆ ಬೆಳೆದಿದ್ದರೂ ನನ್ನ ಹೃಯದಿಂದ ಹೊರಹೋಗಲು ಸಾಧ್ಯವಿಲ್ಲ. ನಾವು ಜತೆಯಾಗಿ ಹಂಚಿಕೊಂಡ ಅದ್ಭುತ ಸಮಯಗಳನ್ನು ಈ ದಿನ ನನಗೆ ನೆನಪಿಸುತ್ತದೆ. ಆ ಕ್ಷಣಗಳನ್ನು ನಾನು ನಿಜವಾಗಿಯೂ ಪ್ರೀತಿಸುತ್ತೇನೆ. ಮಗಳ ದಿನದ ಶುಭಾಶಯಗಳು ಸಾರಾ’ ಎಂದು ತೆಂಡೂಲ್ಕರ್ ಬರೆದಿದ್ದಾರೆ.

ಸಚಿನ್ ಅವರ ಸಂದೇಶಕ್ಕೆ ನೂರಾರು ಮಂದಿ ಪ್ರತಿಕ್ರಿಯಿಸಿದ್ದು, ಮೆಚ್ಚುಗೆ ಸೂಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು