ಬ್ರಿಸ್ಬೇನ್: ಪ್ರವಾಸಿ ಭಾರತ ವಿರುದ್ಧ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯಕ್ಕೆ ಆತಿಥೇಯ ಆಸ್ಟ್ರೇಲಿಯಾ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದೆ.

ಈ ಕುರಿತು ನಾಯಕ ಪ್ಯಾಟ್ ಕಮಿನ್ಸ್ ಮಾಹಿತಿ ನೀಡಿದ್ದು, ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ.

ಸಂಪೂರ್ಣ ದೈಹಿಕ ಸಾಮರ್ಥ್ಯ ಮರಳಿ ಪಡೆದಿರುವ ಜೋಶ್ ಹ್ಯಾಜಲ್ವುಡ್ ತಂಡಕ್ಕೆ ಪುನರಾಗಮನ ಮಾಡಿದ್ದಾರೆ.

ಅವರಿಗೆ ಸ್ಕಾಟ್ ಬೋಲ್ಯಾಂಡ್ ತಮ್ಮ ಸ್ಥಾನವನ್ನು ಬಿಟ್ಟು ಕೊಟ್ಟಿದ್ದಾರೆ.

ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಸರಣಿ 1-1ರಲ್ಲಿ ಸಮಬಲಗೊಂಡಿದೆ. ಪರ್ತ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ 295 ರನ್ ಅಂತರದಲ್ಲಿ ಗೆಲುವು ದಾಖಲಿಸಿದ್ದರೆ ಅಡಿಲೇಡ್ನಲ್ಲಿ ನಡೆದ ಹಗಲು-ರಾತ್ರಿ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ 10 ವಿಕೆಟ್ ಅಂತರದ ಜಯ ಗಳಿಸಿತ್ತು.

ಮೂರನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್ನ ಗಾಬಾ ಮೈದಾನದಲ್ಲಿ ನಾಳೆಯಿಂದ (ಡಿ.14) ಆರಂಭವಾಗಲಿದೆ. ಇದರಂತೆ ಆಸ್ಟ್ರೇಲಿಯಾ ಹಿಂದಿನ ದಿನವೇ ತಂಡವನ್ನು ಪ್ರಕಟಿಸಿದೆ.

ಭಾರತದ ಆಡುವ ಹನ್ನೊಂದರ ಬಳಗ ಟಾಸ್ಗೂ ಮುನ್ನ ಘೋಷಣೆಯಾಗಲಿದೆ.

ಆಸ್ಟ್ರೇಲಿಯಾದ ಆಡುವ ಹನ್ನೊಂದರ ಬಳಗ ಇಂತಿದೆ:

1. ಉಸ್ಮಾನ್ ಖ್ವಾಜಾ,

2. ನೇಥನ್ ಮೆಕ್ಸ್ವೀನಿ,

3. ಮಾರ್ನಲ್ ಲಾಬುಷೇನ್,

4. ಸ್ಟೀವ್ ಸ್ಮಿತ್,

5. ಟ್ರಾವಿಸ್ ಹೆಡ್,

6. ಮಿಚೆಲ್ ಮಾರ್ಷ್,

7. ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್),

8. ಪ್ಯಾಟ್ ಕಮಿನ್ಸ್ (ನಾಯಕ),

9. ಮಿಚೆಲ್ ಸ್ಟಾರ್ಕ್,

10. ನೇಥನ್ ಲಯನ್,

11. ಜೋಶ್ ಹ್ಯಾಜಲ್ವುಡ್.
.ರೋಹಿತ್ ಏನನ್ನೂ ಸಾಬೀತುಪಡಿಸುವ ಅಗತ್ಯವಿಲ್ಲ: ಕಪಿಲ್ ದೇವ್.PHOTOS | ಕೊಹ್ಲಿ ಮೈಲಿಗಲ್ಲು, ದಿನದ ಕೊನೆಯ ಎಸೆತದಲ್ಲಿ ಔಟ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.