ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿಗೆ ನನ್ನ ಹೆಸರು ಗೊತ್ತು: ಫೋಟೊ ಹಂಚಿಕೊಂಡು ಸಂಭ್ರಮಿಸಿದ ಕನ್ನಡತಿ ಶ್ರೇಯಾಂಕ

Published 20 ಮಾರ್ಚ್ 2024, 12:46 IST
Last Updated 20 ಮಾರ್ಚ್ 2024, 12:46 IST
ಅಕ್ಷರ ಗಾತ್ರ

ಭಾನುವಾರವಷ್ಟೇ (ಮಾರ್ಚ್‌ 17ರಂದು) ಮುಕ್ತಾಯವಾದ ಮಹಿಳೆಯರ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಟೂರ್ನಿಯ 'ಪರ್ಪಲ್ ಕ್ಯಾಪ್‌' ಜೊತೆಗೆ, 'ಎಮರ್ಜಿಂಗ್‌ ಪ್ಲೆಯರ್‌' ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡ ಕನ್ನಡತಿ ಶ್ರೇಯಾಂಕ ಪಾಟೀಲ, ಆರ್‌ಸಿಬಿ 'ಕಪ್‌' ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು. ಇದೀಗ ಅವರು ಆರ್‌ಸಿಬಿಯ 'ಕಾಯಂ ಆಟಗಾರ' ಮತ್ತು ಕ್ರಿಕೆಟ್‌ ಲೋಕದ 'ರನ್‌ ಮಷಿನ್‌' ವಿರಾಟ್‌ ಕೊಹ್ಲಿ ಅವರೊಂದಿಗೆ ಫೋಟೊ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ಅನ್‌ ಬಾಕ್ಸ್‌ ಕಾರ್ಯಕ್ರಮದಲ್ಲಿ ಕೊಹ್ಲಿಯನ್ನು ಶ್ರೇಯಾಂಕ ಭೇಟಿಯಾಗಿದ್ದಾರೆ.

ಈ ವೇಳೆ ಕ್ಲಿಕ್ಕಿಸಿದ ಚಿತ್ರವನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿರುವ ಕನ್ನಡತಿ, 'ಅವರ (ಕೊಹ್ಲಿ) ಕಾರಣದಿಂದಲೇ ಕ್ರಿಕೆಟ್‌ ನೋಡಲು ಶುರು ಮಾಡಿದೆ. ಅವರಂತಾಬೇಕು ಎಂಬ ಕನಸಿನೊಂದಿಗೆ ಬೆಳೆದೆ. ಕಳೆದ ರಾತ್ರಿ ನನ್ನ ಜೀವನದ ಅತ್ಯಮೂಲ್ಯ ಘಟನೆ ನಡೆಯಿತು' ಎಂದು ಹೇಳಿಕೊಂಡಿದ್ದಾರೆ.

ಈಗಲೂ ನಾನು ಕೊಹ್ಲಿ ಅಭಿಮಾನಿ ಎನ್ನುತ್ತಾ #StillAFanGirl ಟ್ಯಾಗ್‌ ಬಳಸಿರುವ ಅವರು, 'ಹಾಯ್ ಶ್ರೇಯಾಂಕ, ತುಂಬಾ ಚೆನ್ನಾಗಿ ಬೌಲಿಂಗ್ ಮಾಡಿದೆ ಎಂದು ಕೊಹ್ಲಿ ಹೇಳಿದರು. ಅವರಿಗೆ ನನ್ನ ಹೆಸರು ಗೊತ್ತು' ಎಂದು ಬರೆದು ಸಂಭ್ರಮಿಸಿದ್ದಾರೆ.

ಟೂರ್ನಿಯ 8 ಪಂದ್ಯಗಳಲ್ಲಷ್ಟೇ ಆಡುವ ಅವಕಾಶ ಗಿಟ್ಟಿಸಿದ 21 ವರ್ಷದ ಶ್ರೇಯಾಂಕ, 13 ವಿಕೆಟ್‌ಗಳನ್ನು ಉರುಳಿಸುವ ಮೂಲಕ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಎನಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT