ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಡೀಸ್ ವಿರುದ್ಧ ಏಕದಿನ ಬಳಿಕ ಟಿ20 ಸರಣಿಯಲ್ಲೂ ಇಂಗ್ಲೆಂಡ್‌ಗೆ ಸೋಲು

Published 22 ಡಿಸೆಂಬರ್ 2023, 3:12 IST
Last Updated 22 ಡಿಸೆಂಬರ್ 2023, 3:12 IST
ಅಕ್ಷರ ಗಾತ್ರ

ಟ್ರಿನಿಡಾಡ್: ಪ್ರವಾಸಿ ಇಂಗ್ಲೆಂಡ್ ವಿರುದ್ದ ನಡೆದ ಐದನೇ ಹಾಗೂ ಅಂತಿಮ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನಾಲ್ಕು ವಿಕೆಟ್ ಅಂತರದ ಜಯ ಗಳಿಸಿದೆ.

ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯನ್ನು 3-2ರ ಅಂತರದಿಂದ ತನ್ನದಾಗಿಸಿಕೊಂಡಿತು.

ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡ ಆಂಗ್ಲರ ಪಡೆ, 19.3 ಓವರ್‌ಗಳಲ್ಲಿ 132 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಸರಣಿಯಲ್ಲಿ ಸತತ ಎರಡು ಶತಕ ಗಳಿಸಿದ್ದ ಫಿಲ್ ಸಾಲ್ಟ್, ಈ ಪಂದ್ಯದಲ್ಲಿ ತಂಡದ ಪರ ಗರಿಷ್ಠ 38 ರನ್ ಗಳಿಸಿದರು. ನಾಯಕ ಜೋಸ್ ಬಟ್ಲರ್ 11, ಲಿಯಾಮ್ ಲಿವಿಂಗ್‌ಸ್ಟೋನ್ 28 ಹಾಗೂ ಮೊಯಿನ್ ಅಲಿ 23 ರನ್ ಗಳಿಸಿದರು.

ವಿಂಡೀಸ್ ಪರ ಗುಡಕೇಶ್ ಮೋತಿ ಮೂರು ಮತ್ತು ಜೇಸನ್ ಹೋಲ್ಡರ್, ಅಕೀಲ್ ಹುಸೇನ್ ಮತ್ತು ಆ್ಯಂಡ್ರೆ ರಸೆಲ್ ತಲಾ ಎರಡು ವಿಕೆಟ್ ಗಳಿಸಿದರು.

ಈ ಗುರಿ ಬೆನ್ನಟ್ಟಿದ ಅತಿಥೇಯ ವಿಂಡೀಸ್ ಇನ್ನೂ ನಾಲ್ಕು ಎಸೆತಗಳು ಬಾಕಿ ಉಳಿದಿರುವಂತೆಯೇ 19.2 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಅಜೇಯ 43 ರನ್ ಗಳಿಸಿದ ಶಾಯ್ ಹೋಪ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಶೆರ್ಫಾನ್ ರುಥರ್‌ಫೋರ್ಡ್ 30 ಹಾಗೂ ಜಾನ್ಸನ್ ಚಾರ್ಲ್ಸ್ 27 ರನ್ ಗಳಿಸಿ ಮಿಂಚಿದರು. ಇಂಗ್ಲೆಂಡ್ ಪರ ರೀಸ್ ಟಾಪ್ಲಿ ಹಾಗೂ ಅದಿಲ್ ರಶೀದ್ ತಲಾ ಎರಡು ವಿಕೆಟ್ ಗಳಿಸಿದರು.

ಇದರೊಂದಿಗೆ ಏಕದಿನ ಸರಣಿ ಬಳಿಕ ಟಿ20 ಸರಣಿಯಲ್ಲೂ ಇಂಗ್ಲೆಂಡ್‌ ಸೋಲು ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT