ಬೆಕೆನ್ಹ್ಯಾಮ್ (ಯುಕೆ): ವಾಷಿಂಗ್ಟನ್ ಸುಂದರ್ ಅವರು ಅಲ್ಪ ಅವಧಿಯಲ್ಲಿ ವಯೋವರ್ಗ ಕ್ರಿಕೆಟ್ನಿಂದ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಕ್ಷಿಪ್ರಗತಿಯಲ್ಲಿ ಏರಿದ್ದು ತಮಗೆ ಪ್ರೇರಣೆಯಾಗಿದೆ ಎಂದು ಭಾರತ ಟೆಸ್ಟ್ ತಂಡದಲ್ಲಿ ಪದಾರ್ಪಣೆಗೆ ಸಜ್ಜಾಗಿರುವ ಬಿ.ಸಾಯಿಸುದರ್ಶನ್ ಹೇಳಿದ್ದಾರೆ.

ಆಲ್ರೌಂಡರ್ ಸುಂದರ್ ಅವರಂತೆ ಸುದರ್ಶನ್ ಕೂಡ ತಮಿಳುನಾಡಿನವರು. 2016ರಲ್ಲಿ ವಾಷಿಂಗ್ಟನ್ ಅವರು ಜೂನಿಯರ್ ವಿಶ್ವಕಪ್ನಲ್ಲಿ ಆಡಿದ ಭಾರತ 19 ವರ್ಷದೊಳಗಿನವರ ತಂಡದಲ್ಲಿ ಬ್ಯಾಟರ್ ಆಗಿದ್ದರು. ಇದಾಗಿ ಒಂದೂವರೆ ವರ್ಷದಲ್ಲೇ, 18ನೇ ವಯಸ್ಸಿನಲ್ಲಿ ಅವರು ಭಾರತ ಏಕದಿನ ತಂಡದಲ್ಲಿ ಸ್ಥಾನ ಪಡೆದರು. 2021ರಲ್ಲಿ ತಮ್ಮ 20ನೇ ವಯಸ್ಸಿನಲ್ಲಿ ಬಾರ್ಡರ್–ಗಾವಸ್ಕರ್ ಟ್ರೋಫಿ ಸರಣಿಯಲ್ಲಿ ಮಿಂಚಿದ್ದರು.

ಭಾರತ ತಂಡದಲ್ಲಿ ಸ್ಥಾನ ಪಡೆಯುವ ತಮ್ಮ ಗುರಿಸಾಧನೆಗೆ ಹೆಚ್ಚು ಶ್ರಮ ಹಾಕಲು ವಾಷಿಂಗ್ಟನ್ ಅವರ ಪಯಣ ಸ್ಫೂರ್ತಿ ನೀಡಿತು ಎಂದು ಅವರಿಗಿಂತ ಎರಡು ವರ್ಷ ಕಿರಿಯರಾದ ಸುದರ್ಶನ್ ಹೇಳಿದರು.

‘ಜೂನಿಯರ್ ಹಂತದಲ್ಲಿಅವರ ವಿರುದ್ಧ ಕೆಲವು ಪಂದ್ಯಗಳನ್ನು ಆಡಿದ್ದೆ. ಅವರು ಅತಿ ವೇಗದಲ್ಲಿ ಜೂನಿಯರ್ ಹಂತದಿಂದ ಸೀನಿಯರ್ ಹಂತಕ್ಕೆ ಏರಿದರು. ಇದು ನನ್ನ ಮನಸ್ಸಿನಲ್ಲಿತ್ತು’ ಎಂದು ಅವರು ಬಿಸಿಸಿಐ ಟಿವಿಗೆ ತಿಳಿಸಿದ್ದಾರೆ. ಈ ಸಂದರ್ಶನದಲ್ಲಿ ಅವರ ಪಕ್ಕದಲ್ಲೇ ವಾಷಿಂಗ್ಟನ್ ಅವರೂ ಇದ್ದರು.

ಭಾರತ ತಂಡದ ಪರ 9 ಟೆಸ್ಟ್, 23 ಏಕದಿನ ಮತ್ತು 54 ಟಿ20 ಪಂದ್ಯಗಳನ್ನು ಆಡಿರುವ ವಾಷಿಂಗ್ಟನ್ ಅವರೂ, ಸುದರ್ಶನ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ‘ಸಾಕಷ್ಟು ತರಬೇತುದಾರರು, ಸ್ನೇಹಿತರು ಸಾಯಿ ಸುದರ್ಶನ್ ಕ್ರಿಕೆಟ್ ಜೀವನದಲ್ಲಿ ಸಾಧಿಸಿರುವ ಪ್ರಗತಿಯನ್ನು ಆಗಾಗ ಹೇಳುತ್ತಿರುತ್ತಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.