AUS vs IND ಏಕದಿನ ಕ್ರಿಕೆಟ್: ಭಾರತ ತಂಡಕ್ಕೆ ದಂಡ

ದುಬೈ: ಆಸ್ಟ್ರೇಲಿಯಾ ಎದುರಿನ ಏಕದಿನ ಪಂದ್ಯದಲ್ಲಿ ಶುಕ್ರವಾರ ಭಾರತ ತಂಡವು ನಿಗದಿಯ ಓವರ್‌ಗಳನ್ನು ನಿರ್ಧರಿತ ಸಮಯದಲ್ಲಿ ಪೂರೈಸದ ಕಾರಣ ದಂಡ ವಿಧಿಸಲಾಗಿದೆ.
ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಭಾರತದ ಬೌಲರ್‌ಗಳು 50 ಓವರ್‌ಗಳನ್ನು ಬೌಲಿಂಗ್ ಮಾಡಲು ನಾಲ್ಕು ಗಂಟೆ, ಆರು ನಿಮಿಷಗಳನ್ನು ತೆಗೆದುಕೊಂಡಿದ್ದರು. ಪಂದ್ಯದ ರೆಫರಿ ಡೇವಿಡ್ ಬೂನ್ ಐಸಿಸಿಗೆ ಈ ಕುರಿತು ವರದಿ ಸಲ್ಲಿಸಿದ್ದರು.
ಇದನ್ನೂ ಓದಿ: AUS vs IND 1st ODI: ಫಿಂಚ್, ಸ್ಮಿತ್ ಪ್ರತಾಪ; ಕೊಹ್ಲಿ ಬಳಗಕ್ಕೆ ಸೋಲಿನ ತಾಪ
’ಐಸಿಸಿಯ 2.22 ನಿಯಮದ ಪ್ರಕಾರ ನಿಗದಿತ ಸಮಯದಲ್ಲಿ ಕನಿಷ್ಠ ಸಂಖ್ಯೆಯ ಓವರ್‌ಗಳನ್ನೂ ಬೌಲಿಂಗ್ ಮಾಡಿರದ ಕಾರಣ ಕ್ರಮ ಕೈಗೊಳ್ಳಲಾಗಿದೆ. ಪಂದ್ಯ ಶುಲ್ಕದ ಶೇ 20ರಷ್ಟನ್ನು ದಂಡವಾಗಿ ಪಾವತಿಸಬೇಕು‘ ಎಂದು ನಾಯಕ ವಿರಾಟ್ ಕೊಹ್ಲಿಗೆ ಸೂಚಿಸಲಾಗಿದೆ.
’ಏಕದಿನ ಕ್ರಿಕೆಟ್‌ನಲ್ಲಿ ಇದು ನಾನು ಎದುರಿಸಿದ ಸುದೀರ್ಘ ಬೌಲಿಂಗ್ ಎನಿಸುತ್ತದೆ. ಬಹುಶಃ ಭಾರತ ತಂಡವು ನಿಗದಿಯ ಅವಧಿಗಿಂತ 45 ನಿಮಿಷ ಹೆಚ್ಚು ತೆಗೆದುಕೊಂಡಿದೆ. ಇದಕ್ಕೆ ಕಾರಣ ಏನೆಂಬುದು ಗೊತ್ತಿಲ್ಲ‘ ಎಂದು ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಹೇಳಿದ್ದಾರೆ.
ಇದನ್ನೂ ಓದಿ: ಕ್ರಿಕೆಟ್ ವೀಕ್ಷಕ ವಿವರಣೆಯನ್ನು ಕನ್ನಡದಲ್ಲೇ ನೀಡಲು ನೆಟ್ಟಿಗರ ಒತ್ತಾಯ
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.