ನವದೆಹಲಿ: ಐಸಿಸಿ ಪುರುಷರ ಟಿ–ಟ್ವೆಂಟಿ ವಿಶ್ವಕಪ್ 2022ರ ಟೀಮ್ ಇಂಡಿಯಾದ ಎಲ್ಲ ಪಂದ್ಯಗಳು ದೇಶದಾದ್ಯಂತ ಇರುವ ಐನಾಕ್ಸ್ ಮೂಲಕ ನೇರಪ್ರಸಾರವಾಗಲಿವೆ.
ಈ ಕುರಿತು ಐಸಿಸಿ ಜತೆ ಐನಾಕ್ಸ್ ಲೀಸರ್ ಲಿಮಿಟೆಡ್ ಒಪ್ಪಂದ ಮಾಡಿಕೊಂಡಿದೆ ಎಂದು ಸಂಸ್ಥೆ ತಿಳಿಸಿದೆ.
ಅಕ್ಟೋಬರ್ 23ರಂದು ಪಾಕಿಸ್ತಾನ ಎದುರು ಟೀಮ್ ಇಂಡಿಯಾ ಮೊದಲ ಪಂದ್ಯ ಆಡಲಿದೆ. ಅದರೊಂದಿಗೆ ಐನಾಕ್ಸ್ ಮಲ್ಟಿಪ್ಲೆಕ್ಸ್‌ನಲ್ಲಿ ನೇರಪ್ರಸಾರ ಆರಂಭವಾಗಲಿದೆ.
ಜತೆಗೆ ಸೆಮಿಫೈನಲ್ ಮತ್ತು ಅಂತಿಮ ಪಂದ್ಯವೂ ನೇರಪ್ರಸಾರದಲ್ಲಿ ಇರಲಿದೆ.
ದೇಶದಾದ್ಯಂತ 25 ನಗರಗಳಲ್ಲಿ ಐನಾಕ್ಸ್ ಪಂದ್ಯವನ್ನು ನೇರಪ್ರಸಾರ ಮಾಡಲು ನಿರ್ಧರಿಸಿದೆ.
ಐಸಿಸಿ ಪುರುಷರ ಟಿ–ಟ್ವೆಂಟಿ ವಿಶ್ವಕಪ್ 2022ರ ಪಂದ್ಯಗಳು ಅಕ್ಟೋಬರ್ 16ರಿಂದ ಆರಂಭವಾಗಲಿದೆ. ನವೆಂಬರ್ 13ರಂದು ಮೆಲ್ಬರ್ನ್‌ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.