ಮಂಗಳವಾರ, ಫೆಬ್ರವರಿ 18, 2020
26 °C

U19 world cup | ಇಂದು 4 ಪಂದ್ಯ: ಟಾಸ್ ಗೆದ್ದ ಎಲ್ಲ ತಂಡಗಳಿಂದ ಬೌಲಿಂಗ್ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಿಂಬರ್ಲಿ: 19 ವರ್ಷದೊಳಗಿನವರ ಏಕದಿನ ವಿಶ್ವಕಪ್‌ ಟೂರ್ನಿಯ ಎರಡನೇ ದಿನ ನಾಲ್ಕು ಪಂದ್ಯಗಳು ನಡೆಯುತ್ತಿದ್ದು, ಟಾಸ್‌ ಗೆದ್ದಿರುವ ಎಲ್ಲ ತಂಡಗಳು ಬೌಲಿಂಗ್ ಆಯ್ಕೆ ಮಾಡಿಕೊಂಡಿವೆ.

ಎ ಗುಂಪಿನಲ್ಲಿರುವ ನ್ಯೂಜಿಲೆಂಡ್‌ ಹಾಗೂ ಜಪಾನ್‌ ತಂಡಗಳ ನಡುವಣ ಫಾಟ್ಚೆಫ್‌ಸ್ಟ್ರೋಮ್‌ನಲ್ಲಿ ನಡೆಯುತ್ತಿರುವ ಪಂದ್ಯಕ್ಕೆ ಮಳೆ ಅಡ್ಡಿ ಪಡೆಸಿದೆ. ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನ್ಯೂಜಿಲೆಂಡ್ ತಂಡ ಸದ್ಯ 28.5 ಓವರ್‌ಗಳಲ್ಲಿ ಎರಡು ವಿಕೆಟ್‌ ನಷ್ಟಕ್ಕೆ 195 ರನ್ ಗಳಿಸಿದೆ.

ಕಿವೀಸ್‌ಗೆ ಆರಂಭಿಕ ರೈಸ್‌ ಮರಿಯು (50) ಹಾಗೂ ಒಲ್ಲೀ ವೈಟ್‌ (80) ಮೊದಲ ವಿಕೆಟ್‌ಗೆ 116 ರನ್‌ ಕೂಡಿಸಿದರು. 37 ರನ್‌ ಗಳಿಸಿರುವ ಫೆರ್ಗ್ಯೂಸ್‌ ಲೆಲ್‌ಮನ್‌ ಮತ್ತು ಬಿಡಬ್ಲೂ ಗ್ರೀನಲ್‌ (2) ಕ್ರೀಸ್‌ನಲ್ಲಿದ್ದಾರೆ.

**

ವಜ್ರಗಳ ನಗರಿ ಕಿಂಬರ್ಲಿಯಲ್ಲಿ ನಡೆಯುತ್ತಿರುವ ಇನ್ನೊಂದು ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ವೆಸ್ಟ್‌ಇಂಡೀಸ್‌ ಸೆಣಸುತ್ತಿವೆ. ಬಿ ಗುಂಪಿನ ಈ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದರಿಂದ ಇನಿಂಗ್ಸ್‌ಗಳನ್ನು ತಲಾ 49 ಓವರ್‌ಗಳಿಗೆ ಇಳಿಸಲಾಗಿದೆ.

ಬ್ಯಾಟಿಂಗ್ ಆರಂಭಿಸಿದ ಆಸಿಸ್‌ 35.4 ಓವರ್‌ಗಳಲ್ಲಿ 179 ರನ್‌ ಗಳಿಸಿ ಆಲೌಟ್‌ ಆಗಿದೆ. ಈ ತಂಡದ ಜಾಕ್‌ ಎಫ್‌. ಮೆಕ್‌ಗರ್ಕ್‌ (84) ನಾಯಕ ಮೆಕೆನ್ಜಿ ಹಾರ್ವೆ (20) ರನ್‌ ಗಳಿಸಿದರು. ವಿಂಡೀಸ್‌ ತಂಡದ ಜಾಯ್ಡೆನ್‌ ಸೀಲೆಸ್ 4 ಹಾಗೂ ಮ್ಯಾಥ್ಯೂ ಫೋರ್ಡೆ 3 ವಿಕೆಟ್‌ ಪಡೆದು ಆಸಿಸ್‌ಗೆ ಪೆಟ್ಟು ನೀಡಿದರು.

ಮೊತ್ತ ಬೆನ್ನತ್ತಿರುವ ವಿಂಡೀಸ್‌ ಸದ್ಯ 7 ಓವರ್‌ ಮುಕ್ತಾಯಕ್ಕೆ ಒಂದು ವಿಕೆಟ್‌ ಕಳೆದುಕೊಂಡು 39 ರನ್ ಗಳಿಸಿದೆ.

**

ಫಾಟ್ಚೆಫ್‌ಸ್ಟ್ರೋಮ್‌ನ ಮತ್ತೊಂದು ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ಮತ್ತು ಜಿಂಬಾಬ್ವೆ ವಿರುದ್ಧ ಪಂದ್ಯ ನಡೆಯುತ್ತಿದೆ. ಮಳೆಬಾಧಿತ ಪಂದ್ಯದಲ್ಲಿ ಆಡುತ್ತಿರುವ ಈ ತಂಡಗಳು ಸಿ ಗುಂಪಿನಲ್ಲಿವೆ. ಸದ್ಯ ಬ್ಯಾಟಿಂಗ್ ಆರಂಭಿಸಿರುವ ಜಿಂಬಾಬ್ವೆ ತಂಡ 28.1 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 137 ರನ್‌ ಗಳಿಸಿದೆ. 

**

ಬ್ಲೂಂಫೊಂಟೇನ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಪಂದ್ಯದಲ್ಲಿ ಕೆನಡಾ ಮತ್ತು ಯುಎಇ ಎದುರಾಗಿವೆ. ಮೊದಲು ಬ್ಯಾಟಿಂಗ್ ಮಾಡಿದ ಕೆನಡಾ ತಂಡ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 231 ರನ್‌ ಗಳಿಸಿದೆ.

ಕೆನಡಾದ ಮಿಹಿರ್‌ ಪಟೇಲ್‌ 90 ರನ್ ಗಳಿಸಿ ಮಿಂಚಿದರು. ಸದ್ಯ ಇನಿಂಗ್ಸ್‌ ಆರಂಭಿಸಿರುವ ಯುಎಇ 5.5 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 34 ರನ್‌ ಗಳಿಸಿದೆ.

ಶನಿವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಅಫ್ಗಾನಿಸ್ತಾನ ತಂಡ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿ ಶುಭಾರಂಭ ಮಾಡಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು