ಬುಧವಾರ, ಏಪ್ರಿಲ್ 1, 2020
19 °C

ಮಹಿಳಾ ವಿಶ್ವಕಪ್ | ಥಾಯ್ಲೆಂಡ್ ವಿರುದ್ಧ ವಿಂಡೀಸ್, ಲಂಕಾ ಎದುರು ಕಿವೀಸ್‌ಗೆ ಜಯ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಪರ್ತ್‌: ಥಾಯ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ ಹಾಗೂ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಗೆಲುವು ಸಾಧಿಸುವುದರೊಂದಿಗೆ, ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಜಯದ ಆರಂಭ ಕಂಡವು.

ಇಂದು ಇಲ್ಲಿನ ವೆಸ್ಟರ್ನ್‌ ಆಸ್ಟ್ರೇಲಿಯಾ ಕ್ರಿಕೆಟ್ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಥಾಯ್ಲೆಂಡ್‌, ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು ಕೇವಲ 78 ರನ್‌ ಗಳಿಸಿತು. ಈ ತಂಡದ ವಿಕೆಟ್‌ ಕೀಪರ್‌ ನನ್ನಾಪತ್‌ ಕೊಂಚಾರೊಯೆಂಕೈ (33) ಹಾಗೂ ನರುಎಮೊಲ್‌ ಛೈವೈ (13) ಹೊರತುಪಡಿಸಿ ಉಳಿದವರ್ಯಾರೂ ಎರಡಂಕಿ ಮುಟ್ಟಲಿಲ್ಲ.

ವಿಂಡೀಸ್‌ ನಾಯಕಿ ಸ್ಟಫಾನಿ ಟೇಲರ್‌ ಕೇವಲ 13 ರನ್ ನೀಡಿ 3 ವಿಕೆಟ್‌ ಪಡೆದರು. ಬ್ಯಾಟಿಂಗ್‌ನಲ್ಲೂ ಮಿಂಚಿದ ಅವರು ಅಜೇಯ 26 ರನ್‌ ಗಳಿಸಿ ತಮ್ಮ ತಂಡಕ್ಕೆ 7 ವಿಕೆಟ್ ಜಯ ತಂದುಕೊಟ್ಟರು.

ಬಳಿಕ ಬ್ಯಾಟಿಂಗ್ ಮಾಡಿದ ವಿಂಡೀಸ್‌, 16.4 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು.

ಲಂಕಾ ಎದುರು ಕಿವೀಸ್‌ಗೆ ಜಯ
ಇದೇ ಅಂಗಳದಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡ ಶ್ರೀಲಂಕಾವನ್ನು ಮಣಿಸಿತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 127 ರನ್ ಗಳಿಸಿತು.

ಈ ಮೊತ್ತದೆದರು ಇನಿಂಗ್ಸ್‌ ಆರಂಭಿಸಿರುವ ಕಿವೀಸ್‌ ಇನ್ನೂ 20 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. ನಾಯಕಿ ಸೊಫಿ ಡಿವೈನ್‌ ಕೇವಲ 55 ಎಸೆತಗಳಲ್ಲಿ ಎರಡು ಭರ್ಜರಿ ಸಿಕ್ಸರ್‌, 6 ಬೌಂಡರಿ ಸಹಿತ 75 ರನ್‌ ಗಳಿಸಿ ತಮ್ಮ ತಂಡದ ಗೆಲುವಿಗೆ ಉಪಯುಕ್ತ ಕೊಡುಗೆ ನೀಡಿದರು.

ನಾಳೆ ಇಲ್ಲಿಯೇ ಇಂಗ್ಲೆಂಡ್‌ ಮತ್ತು ದಕ್ಷಿಣ ಆಫ್ರಿಕಾ ಮಹಿಳೆಯರು ಸೆಣಸಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು