ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿ: ಇಂಗ್ಲೆಂಡ್‌ಗೆ ಗುರುವಾರ ಮಾಡು–ಮಡಿ ಪಂದ್ಯ

ಲಯಕ್ಕೆ ಮರಳಿದ ಭರವಸೆಯಲ್ಲಿ ಪಾಕಿಸ್ತಾನ
Last Updated 23 ಮಾರ್ಚ್ 2022, 14:07 IST
ಅಕ್ಷರ ಗಾತ್ರ

ಕ್ರೈಸ್ಟ್‌ ಚರ್ಚ್‌: ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಮಾಡು–ಮಡಿ ಪಂದ್ಯದಲ್ಲಿ ಗುರುವಾರ ಕಣಕ್ಕೆ ಇಳಿಯಲಿದೆ. ಮಹತ್ವದ ಈ ಪಂದ್ಯದಲ್ಲಿ ತಂಡಕ್ಕೆ ಪಾಕಿಸ್ತಾನ ಎದುರಾಳಿ.

ಆರಂಭದಲ್ಲಿ ಸೋಲಿನ ಸುಳಿಯಲ್ಲಿ ಸಿಲುಕಿದ್ದ ಇಂಗ್ಲೆಂಡ್ ನಂತರ ಚೇತರಿಸಿಕೊಂಡಿತ್ತು. ಮೊದಲ ಮೂರು ಪಂದ್ಯಗಳಲ್ಲಿ ಸೋತಿದ್ದ ತಂಡ ಕಳೆದೆರಡು ಹಣಾಹಣಿಗಳಲ್ಲಿ ಗೆಲುವಿನ ಲಯಕ್ಕೆ ಮರಳಿದೆ. ಹೀಗಾಗಿ ಸೆಮಿಫೈನಲ್ ಆಸೆ ಚಿಗುರಿದೆ. ಪಾಕಿಸ್ತಾನ ಹಿಂದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎದುರು ಜಯ ಗಳಿಸಿ ಸೋಲಿನ ಸರಪಳಿ ಕಳಚಿಕೊಂಡಿತ್ತು. ಮಹಿಳೆಯರ ವಿಶ್ವಕಪ್‌ನ ಸತತ 18 ಪಂದ್ಯಗಳಲ್ಲಿ ಈ ತಂಡ ಜಯ ಗಳಿಸಿರಲಿಲ್ಲ.

ಸೋಫಿಯಾ ಡಂಕ್ಲಿ, ನಥಾಲಿಯಾ ಶೀವರ್ ಮತ್ತು ಟಾಮಿ ಬ್ಯೂಮೌಂಟ್ ಅವರು ಇಂಗ್ಲೆಂಡ್ ತಂಡದ ಬ್ಯಾಟಿಂಗ್ ವಿಭಾಗದ ಬಲವಾಗಿದ್ದು ಕೇಟ್ ಕ್ರಾಸ್ ಮತ್ತು ಸೋಫಿ ಎಕ್ಲೆಸ್ಟಾನ್ ಬೌಲಿಂಗ್‌ನಲ್ಲಿ ಭರವಸೆ ಮೂಡಿಸಿದ್ದಾರೆ.

ಪಾಕಿಸ್ತಾನವು ಬ್ಯಾಟರ್‌ಗಳಾದ ಅಲಿಯಾ ರಿಯಾಜ್, ಮುನೀಬಾ ಅಲಿ, ಬಿಸ್ಮಾ ಮರೂಫ್ ಅವರ ಮೇಲೆ ಭರವಸೆ ಇರಿಸಿಕೊಂಡಿದೆ. ಬೌಲಿಂಗ್ ಆಲ್‌ರೌಂಡರ್‌ಗಳಾದ ನಿದಾ ದಾರ್, ಘುಲಾಮ್ ಫಾತಿಮಾ, ಬೌಲರ್‌ಗಳಾದ ಡಯಾನ ಬೇಗ್‌, ನಶ್ರಾ ಸಂಧು, ಸಿದ್ರಾ ಅಮೀನ್ ಮುಂತಾದವರು ನಿರೀಕ್ಷೆ ಮೂಡಿಸಿದ್ದಾರೆ. ಸೆಮಿಫೈನಲ್ ಹಂತಕ್ಕೇರಲು ಸಾಧ್ಯವಿಲ್ಲದ ಕಾರಣದಿಂದ ತಂಡ ಕೊನೆಯ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿ ಸಮಾಧಾನಪಟ್ಟುಕೊಳ್ಳಲು ಪ್ರಯತ್ನಿಸಲಿದೆ.

ಇಂಗ್ಲೆಂಡ್‌ಗೆ ಎರಡು ಪಂದ್ಯಗಳು ಉಳಿದಿದ್ದ ಎರಡರಲ್ಲೂ ಜಯ ಸಾಧಿಸಿದರೆ ಮಾತ್ರ ಸೆಮಿಫೈನಲ್ ಹಾದಿ ಸುಗಮವಾಗಲಿದೆ. ಆದ್ದರಿಂದ ಗೆಲುವಿವಾಗಿ ತಂಡ ಶಕ್ತಿಮೀರಿ ಪ್ರಯತ್ನಿಸಲಿದೆ. ಹೀಗಾಗಿ ಪಂದ್ಯ ಕುತೂಹಲ ಕೆರಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT