ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಕಪ್‌ ಅರ್ಹತಾ ಟೂರ್ನಿ| ಸ್ಕಾಟ್ಲೆಂಡ್‌ ಮೇಲೆ ಗೆದ್ದ ಲಂಕಾ ಸೂಪರ್‌ಸಿಕ್ಸ್‌ಗೆ

Published 27 ಜೂನ್ 2023, 17:09 IST
Last Updated 27 ಜೂನ್ 2023, 17:09 IST
ಅಕ್ಷರ ಗಾತ್ರ

ಬುಲಾವಯೊ (ಜಿಂಬಾಬ್ವೆ): ಶ್ರೀಲಂಕಾ ತಂಡ 82 ರನ್‌ಗಳಿಂದ ಸ್ಕಾಟ್ಲೆಂಡ್‌ ತಂಡವನ್ನು ಸೋಲಿಸಿ ವಿಶ್ವ ಕಪ್‌ ಅರ್ಹತಾ ಟೂರ್ನಿಯ ಸೂಪರ್‌ ಸಿಕ್ಸ್‌ ಹಂತಕ್ಕೆ ಮುನ್ನಡೆಯಿತು. ಕ್ರಿಸ್‌ ಗ್ರೀವ್ಸ್‌ ಅವರ ಆಲ್‌ರೌಂಡ್ ಪ್ರದರ್ಶನ (32ಕ್ಕೆ 4 ಮತ್ತು ಔಟಾಗದೇ 56) ಅಮೋಘ ಪ್ರದರ್ಶನ ಗೆಲುವಿಗೆ ಸಾಕಾಗಲಿಲ್ಲ.

ಮೊದಲು ಬ್ಯಾಟ್‌ ಮಾಡಿದ ಶ್ರೀಲಂಕಾ ಪಥುನ್‌ ನಿಸ್ಸಾಂಕ (75) ಮತ್ತು ಚರಿತ್‌ ಅಸಳಂಕ (63) ಅವರ ಅರ್ಧ ಶತಕಗಳ ನೆರವಿನಿಂದ 245 ರನ್‌ ಗಳಿಸಿತು. ಸ್ಪಿನ್ನರ್‌ ಗ್ರೀವ್ಸ್‌ ಜೊತೆ ಇನ್ನೊಬ್ಬ ಸ್ಪಿನ್ನರ್ ಮಾರ್ಕ್ ವಾಟ್ ಮೂರು ವಿಕೆಟ್‌ ಪಡೆದರು.

ಇದಕ್ಕೆ ಉತ್ತರವಾಗಿ ಸ್ಕಾಟ್ಲೆಂಡ್‌ ತಂಡ 163 ರನ್‌ಗಳಿಗೆ ಆಲೌಟ್ ಆಯಿತು. 1996ರ ವಿಶ್ವಕಪ್‌ ಚಾಂಪಿಯನ್‌ ಶ್ರೀಲಂಕಾ  ‘ಬಿ’ ಗುಂಪಿನಿಂದ ಅಗ್ರಸ್ಥಾನ ಗಳಿಸಿ ಸೂಪರ್‌ ಸಿಕ್ಸ್‌ಗೆ ಮುನ್ನಡೆಯಿತು. ನಾಲ್ಕು ಪಾಯಿಂಟ್‌ ಹೊಂದಿರುವ ಶ್ರಿಲಂಕಾ ಮುಂದಿನ ಪಂದ್ಯಗಳಲ್ಲಿ ನೆದರ್ಲೆಂಡ್ಸ್‌, ಜಿಂಬಾಬ್ವೆ ಮತ್ತು ವೆಸ್ಟ್‌ ಇಂಡೀಸ್‌ ವಿರುದ್ಧ ಆಡಲಿದೆ.

ಸ್ಕಾಟ್ಲೆಂಡ್‌ ಗುಂಪಿನಲ್ಲಿ ಮೂರನೇ ತಂಡವಾಗಿ ಅರ್ಹತೆ ಪಡೆಯಿತು.  ಟೂರ್ನಿಯ ಸೂಪರ್‌ ಸಿಕ್ಸ್‌ ಹಂತ ಗುರುವಾರ ಆರಂಭವಾಗಲಿದೆ. ಸೂಪರ್‌ ಸಿಕ್ಸ್‌ ಹಂತದಲ್ಲಿ ಮೊದಲ ಎರಡು ಸ್ಥಾನ ಗಳಿಸುವ ತಂಡಗಳು ಭಾರತದಲ್ಲಿ ಸೆಪ್ಟೆಂಬರ್‌– ಅಕ್ಟೋಬರ್‌ ತಿಂಗಳಲ್ಲಿ ನಡೆಯುವ ವಿಶ್ವಕಪ್‌ಗೆ ಅರ್ಹತೆ ಪಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT