ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

CWC Final: ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ದಾಖಲೆಯ 5.8 ಕೋಟಿ ವೀಕ್ಷಣೆ

Published 20 ನವೆಂಬರ್ 2023, 5:12 IST
Last Updated 20 ನವೆಂಬರ್ 2023, 5:12 IST
ಅಕ್ಷರ ಗಾತ್ರ

ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯನ್ನು ಭರ್ಜರಿಯಾಗಿ ಆರಂಭಿಸಿದ್ದ ಭಾರತ ತಂಡವು, ಫೈನಲ್‌ನಲ್ಲಿ ಸೋಲುವ ಮೂಲಕ ನಿರಾಸೆಯಿಂದ ಅಭಿಯಾನ ಮುಗಿಸಿದೆ. ಕಾಂಗರೂ ಪಡೆಗಳಿಗೆ ಶರಣಾಗುವ ಮೂಲಕ ಮೂರನೇ ಬಾರಿಗೆ ವಿಶ್ವಕಪ್ ಎತ್ತಿಹಿಡಿಯುವ ಭಾರತದ ಆಸೆ ಭಗ್ನಗೊಂಡಿದೆ.

ದೇಶದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕುಳಿತು 1.30 ಲಕ್ಷ ಮಂದಿ ಫೈನಲ್ ಪಂದ್ಯವನ್ನು ಕಣ್ತುಂಬಿಕೊಂಡರೆ, ಕೋಟ್ಯಂತರ ಮಂದಿ ಟಿ.ವಿ ಹಾಗೂ ಒ.ಟಿ.ಟಿ ಮೂಲಕ ವೀಕ್ಷಿಸಿದರು.

ಫೈನಲ್ ಪಂದ್ಯದಲ್ಲಿ ಆನ್‌ಲೈನ್ ಸ್ಟ್ರೀಮಿಂಗ್‌ ಆ್ಯಪ್‌ ‘ಡಿಸ್ನಿ + ಹಾಟ್‌ಸ್ಟಾರ್’ ದಾಖಲೆ ಸಂಖ್ಯೆಯ ವೀಕ್ಷಕರನ್ನು ಸೆಳೆಯಿತು. ಸುಮಾರು 5.8 ಕೋಟಿ ಬಳಕೆದಾರರು ಹಾಟ್‌ಸ್ಟಾರ್‌ ಮೂಲಕ ಪಂದ್ಯ ವೀಕ್ಷಣೆ ಮಾಡಿದರು. ಈ ಹಿಂದೆ ಭಾರತ ಹಾಗೂ ನ್ಯೂಜಿಲೆಂಡ್‌ ನಡುವಣ ಪಂದ್ಯವನ್ನು 5.3 ಕೋಟಿ ಬಳಕೆದಾರರು ವೀಕ್ಷಿಸಿದ್ದು ಈ ಹಿಂದಿನ ದಾಖಲೆಯಾಗಿತ್ತು.

ಮೊಬೈಲ್‌ನಲ್ಲಿ ಪಂದ್ಯದ ನಾನ್ ಎಚ್‌ಡಿ ವಿಡಿಯೊ ಉಚಿತವಾಗಿದ್ದರಿಂದ ವೀಕ್ಷಕರ ಸಂಖ್ಯೆ ಹೆಚ್ಚಳವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT