ಲಂಡನ್: ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್ಸ್ (ಡಬ್ಲ್ಯುಟಿಸಿ) ಫೈನಲ್ನಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಮಣಿಸಿರುವ ದಕ್ಷಿಣ ಆಫ್ರಿಕಾ ತಂಡ ಮೊಟ್ಟ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ. ಅಷ್ಟೇ ಅಲ್ಲ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಟೂರ್ನಿಗಳಲ್ಲಿ ಬರೋಬ್ಬರಿ 27 ವರ್ಷಗಳ ನಂತರ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 74 ರನ್ಗಳ ಹಿನ್ನಡೆ ಅನುಭವಿಸಿದರೂ, ನಂತರ ಮೈಕೊಡವಿ ಎದ್ದ ಆಫ್ರಿಕಾ ಪಡೆ ದಾಖಲೆಯ ಮೊತ್ತ ಬೆನ್ನತ್ತಿ ಗೆದ್ದಿದೆ.

ಮೊದಲ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 212 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಆಫ್ರಿಕಾ ಪಡೆ 138 ರನ್ಗೆ ಸರ್ವಪತನ ಕಂಡಿತ್ತು. ಉತ್ತಮ ಮುನ್ನಡೆಯೊಂದಿಗೆ ಮತ್ತೆ ಬ್ಯಾಟಿಂಗ್ ಮಾಡಿದ ಆಸಿಸ್, ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ (43 ರನ್) ಹಾಗೂ ಬಾಲಂಗೋಚಿ ಬ್ಯಾಟರ್ ಮಿಚೇಲ್ ಸ್ಟಾರ್ಕ್ (ಅಜೇಯ 58 ರನ್) ನೆರವಿನಿಂದ 2ನೇ ಇನಿಂಗ್ಸ್ನಲ್ಲಿ 207 ರನ್ ಗಳಿಸಿತ್ತು.

ಹೀಗಾಗಿ, ಆಫ್ರಿಕನ್ನರಿಗೆ 282ರನ್ಗಳ ಕಠಿಣ ಗುರಿ ಎದುರಾಗಿತ್ತು. ಮೊದಲ ಮೂರೂ ಇನಿಂಗ್ಸ್ಗಳಲ್ಲಿ ಬೌಲರ್ಗಳೇ ಮೇಲುಗೈ ಸಾಧಿಸಿದ್ದರಿಂದ ಹರಿಣಗಳ ಪಡೆ ಗೆಲ್ಲುವುದು ಅಸಾಧ್ಯವೆನ್ನಲಾಗಿತ್ತು. ಆದರೆ, ಆ ಎಲ್ಲ ಲೆಕ್ಕಾಚಾರವನ್ನು ಆರಂಭಿಕ ಬ್ಯಾಟರ್ ಏಡನ್ ಮರ್ಕರಂ ಮತ್ತು ನಾಯಕ ತೆಂಬಾ ಬವುಮಾ ತಲೆಕೆಳಗಾಗಿಸಿದರು.
.WTC Final: ಫೈನಲ್ನಲ್ಲಿ ಎಡವಿದ ಆಸಿಸ್; ಚಾಂಪಿಯನ್ ಪಟ್ಟಕ್ಕೇರಿದ ದ. ಆಫ್ರಿಕಾ.WTC ಫೈನಲ್ನಲ್ಲಿ ಮಿಂಚಿದ ಮರ್ಕ್ರಂ 2014ರ ವಿಶ್ವಕಪ್ ಗೆದ್ದುಕೊಟ್ಟಿದ್ದರು!.
ಮರ್ಕರಂ 136 ರನ್ ಗಳಿಸಿದರೆ, ತೆಂಬಾ ಬವುಮಾ 66 ರನ್ ಗಳಿಸಿದರು. ಹೀಗಾಗಿ, 83.4 ಓವರ್ಗಳಲ್ಲಿ 5ವಿಕೆಟ್ಗೆ 285 ರನ್ ಗಳಿಸಿದ ಆಫ್ರಿಕಾ, ಇನ್ನೂ ಒಂದು ದಿನ ಬಾಕಿ ಇರುವಂತೆಯೇ ಪ್ಯಾಕ್ ಕಮಿನ್ಸ್ ಬಳವನ್ನು ಮಣಿಸಿತು.

ಐಸಿಸಿ ಅಂತರರಾಷ್ಟ್ರೀಯ ಪುರುಷರ ಕ್ರಿಕೆಟ್ನಲ್ಲಿ ದಕ್ಷಿಣ ಆಫ್ರಿಕಾಗೆ ಒಲಿದ ಎರಡನೇ ಪ್ರಶಸ್ತಿಯಾಗಿದೆ. ಈ ತಂಡ 1998ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿ ಹಿಡಿದಿತ್ತು.

ಡಬ್ಲ್ಯುಟಿಸಿ ಫೈನಲ್ ಪಂದ್ಯದ ಪ್ರಮುಖ ಅಂಶಗಳು ಇಲ್ಲಿವೆ

ಟಾಸ್ ಗೆದ್ದು ಬೌಲಿಂಗ್ ಆಯ್ಕೆ
ಡಬ್ಲ್ಯುಟಿಸಿ ಫೈನಲ್ ಪಂದ್ಯಗಳಲ್ಲಿ ಈವರೆಗೆ ಟಾಸ್ ಗೆದ್ದ ಮುರೂ ತಂಡಗಳು ಬೌಲಿಂಗ್ ಆಯ್ದುಕೊಂಡಿವೆ. 2021ರಲ್ಲಿ ನಡೆದ ಫೈನಲ್ನಲ್ಲಿ ಭಾರತ ವಿರುದ್ಧ ಟಾಸ್ ಗೆದ್ದಿದ್ದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್, 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಾಸ್ ಜಯಿಸಿದ್ದ ಭಾರತದ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡರು.

ಅದೇ ರೀತಿ ಈ ಬಾರಿ ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವುಮಾ ಎದುರಾಳಿಯನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿದ್ದರು.

ಮೊದಲೆರಡು ಆವೃತ್ತಿಗಳಲ್ಲಿ ಕ್ರಮವಾಗಿ ನ್ಯೂಜಿಲೆಂಡ್, ಆಸ್ಟ್ರೇಲಿಯಾ ಚಾಂಪಿಯನ್ ಎನಿಸಿದ್ದವು.

ರಬಾಡ 50
ದಕ್ಷಿಣ ಆಫ್ರಿಕಾ ವೇಗಿ ಕಗಿಸೊ ರಬಾಡ ಅವರು ಆಸಿಸ್ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ 50ಕ್ಕಿಂತ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದರು.

ಮೊದಲ ಇನಿಂಗ್ಸ್ನಲ್ಲಿ ಉಸ್ಮಾನ್ ಖ್ವಾಜಾ ಹಾಗೂ ಕ್ಯಾಮರೂನ್ ಗ್ರೀನ್ ಅವರನ್ನು ಔಟ್ ಮಾಡುವ ಮೂಲಕ ಈ ಸಾಧನೆ ಮಾಡಿದರು.

ಕಾಂಗರೂ ಪಡೆ ವಿರುದ್ಧ ಈವರೆಗೆ ಒಟ್ಟು 11 ಟೆಸ್ಟ್ಗಳಲ್ಲಿ ಆಡಿರುವ ರಬಾಡ, ನಾಲ್ಕು ಬಾರಿ ಐದು ವಿಕೆಟ್ ಗೊಂಚಲು ಸಹಿತ 58 ವಿಕೆಟ್ ಪಡೆದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಆಫ್ರಿಕಾ ತಂಡದ ಪರ ಡೇಲ್ ಸ್ಟೇಯ್ನ್ ಗರಿಷ್ಠ (70) ವಿಕೆಟ್ ಪಡೆದಿದ್ದಾರೆ.

ಸ್ಮಿತ್ ದಾಖಲೆ
ಇಂಗ್ಲೆಂಡ್ನಲ್ಲಿ ಅತಿಹೆಚ್ಚು ಬಾರಿ 50ಕ್ಕಿಂತ ಹೆಚ್ಚು ರನ್ ಗಳಿಸಿದ ವಿದೇಶಿ ಬ್ಯಾಟರ್ ಎಂಬ ಶ್ರೇಯಕ್ಕೆ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಭಾಜನರಾದರು.

ಒಟ್ಟು 18 ಸಲ ಈ ಸಾಧನೆ ಮಾಡಿರುವ ಸ್ಮಿತ್, ಮೊದಲ ಇನಿಂಗ್ಸ್ನಲ್ಲಿ 66 ರನ್ ಗಳಿಸಿದ್ದರು.

ಆಸ್ಟ್ರೇಲಿಯಾದವರೇ ಆದ ಅಲನ್ ಬಾರ್ಡರ್ (17), ವೆಸ್ಟ್ ಇಂಡೀಸ್ನ ವಿವಿಯನ್ ರಿಚರ್ಡ್ಸನ್ (17) ನಂತರದ ಸ್ಥಾನದಲ್ಲಿದ್ದಾರೆ.

ದಿಗ್ಗಜರ ಸಾಲಿಗೆ ರಬಾಡ
ಈ ಪಂದ್ಯದಲ್ಲಿ ಒಟ್ಟು 9 ವಿಕೆಟ್ಗಳನ್ನು ಪಡೆದ ರಬಾಡ, ದಕ್ಷಿಣ ಆಫ್ರಿಕಾ ಪರ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದರು.

ಮೊದಲ ಇನಿಂಗ್ಸ್ನಲ್ಲಿ 5 ಮತ್ತು ಎರಡನೇ ಇನಿಂಗ್ಸ್ನಲ್ಲಿ 4 ವಿಕೆಟ್ ಪಡೆದ ಅವರ ವಿಕೆಟ್ ಗಳಿಕೆ 336ಕ್ಕೆ ಏರಿದೆ.

ಮಾಜಿ ವೇಗಿಗಳಾದ ಡೇಲ್ ಸ್ಟೇಯ್ನ್ (439), ಶಾನ್ ಪೊಲಾಕ್ (421), ಮಕಾಯ್ ಎನ್ಟಿನಿ (390) ಮೊದಲ ಮೂರು ಸ್ಥಾನಗಳಲ್ಲಿ ಇದ್ದಾರೆ.

ಲಾರ್ಡ್ಸ್ನಲ್ಲಿ 5 ವಿಕೆಟ್; ಪ್ಯಾಟ್ ಸಾಧನೆ
ಲಾರ್ಡ್ಸ್ನಲ್ಲಿ ನಡೆದ ಟೆಸ್ಟ್ ಪಂದ್ಯದ ಇನಿಂಗ್ಸ್ವೊಂದಲ್ಲಿ ಐದು ವಿಕೆಟ್ ಕಬಳಿಸಿದ ನಾಲ್ಕನೇ ನಾಯಕ ಪ್ಯಾಟ್ ಕಮಿನ್ಸ್. ಇಂಗ್ಲೆಂಡ್ ನಾಯಕರಾದ ಗಬ್ಬಿ ಅಲೆನ್ 1936ರ ಟೆಸ್ಟ್ನ ಎರಡೂ ಇನಿಂಗ್ಸ್ಗಳಲ್ಲಿ (35ಕ್ಕೆ 5, 43ಕ್ಕೆ 5), ಬಾಬ್ ವಿಲ್ಲೀಸ್ 1982ರ ಟೆಸ್ಟ್ನಲ್ಲಿ ಭಾರತದ ವಿರುದ್ಧ (101ಕ್ಕೆ 6) ಈ ಸಾಧನೆ ಮಾಡಿದ್ದರು.

ನ್ಯೂಜಿಲೆಂಡ್ ನಾಯಕರಾಗಿದ್ದ ಡೆನಿಯಲ್ ವೆಟ್ಟೋರಿ 2008ರಲ್ಲಿ ಇಂಗ್ಲೆಂಡ್ ವಿರುದ್ಧ (69ಕ್ಕೆ 5) ಐದು ವಿಕೆಟ್ ಗೊಂಚಲು ಕಬಳಿಸಿದ್ದರು. ಇದೀಗ ಕಮಿನ್ಸ್ – ಫೈನಲ್ನಲ್ಲಿ 28 ರನ್ಗೆ 6 ವಿಕೆಟ್ ಉರುಳಿಸಿದ್ದಾರೆ.

ಟೆಸ್ಟ್ ಕ್ರಿಕೆಟ್: ನಾಯಕನಾಗಿ ಹೆಚ್ಚು ಸಲ ಐದು ವಿಕೆಟ್
ಇಮ್ರಾನ್ ಖಾನ್ (ಪಾಕಿಸ್ತಾನ) – 12 ಸಲ
ರಿಚಿ ಬೆನೌಡ್ (ಆಸ್ಟ್ರೇಲಿಯಾ) – 9 ಸಲ
ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ) – 9 ಸಲ
ಬಿಷನ್ ಸಿಂಗ್ ಬೇಡಿ (ಭಾರತ) – 8 ಸಲ

ಟೆಸ್ಟ್ ಕ್ರಿಕೆಟ್: 2024ರಿಂದೀಚೆಗೆ ಅತಿಹೆಚ್ಚು ನೋಬಾಲ್
ಕಗಿಸೊ ರಬಾಡ (ದಕ್ಷಿಣ ಆಫ್ರಿಕಾ) – 57
ಜಸ್ಪ್ರೀತ್ ಬೂಮ್ರಾ (ಭಾರತ) – 24
ಗಸ್ ಅಟ್ಕಿನ್ಸನ್ (ಇಂಗ್ಲೆಂಡ್) – 20

ಸ್ಟಾರ್ಕ್ ಅರ್ಧಶತಕದ ದಾಖಲೆ
ಆಸ್ಟ್ರೇಲಿಯಾ ತಂಡದ ಪ್ರಮುಖ ವೇಗದ ಬೌಲರ್ ಮಿಚೇಲ್ ಸ್ಟಾರ್ಕ್, ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದರು. ಟೆಸ್ಟ್ನಲ್ಲಿ ಅವರು ಒಟ್ಟು 11 ಬಾರಿ ಅರ್ಧಶತಕದ ಗಡಿ ದಾಟಿದ್ದಾರೆ. 9ನೇ ಕ್ರಮಾಂಕದಲ್ಲಿ ಇದು ಅವರ 8ನೇ ಅರ್ಧಶತಕ.

ಈ ಕ್ರಮಾಂಕದಲ್ಲಿ ಬೇರೆ ಯಾರೂ ಇಷ್ಟು ಫಿಫ್ಟಿ ಗಳಿಸಿಲ್ಲ. ಇಂಗ್ಲೆಂಡ್ನ ಸ್ಟುವರ್ಟ್ ಬ್ರಾಡ್ ಹಾಗೂ ನ್ಯೂಜಿಲೆಂಡ್ನ ಡೆನಿಯಲ್ ವೆಟ್ಟೋರಿ ತಲಾ 6 ಅರ್ಧಶತಕ ಗಳಿಸಿದ್ದಾರೆ.

ಲಾರ್ಡ್ಸ್ನಲ್ಲಿ 10ನೇ ವಿಕೆಟ್ಗೆ ಅತಿಹೆಚ್ಚು ರನ್ ಜೊತೆಯಾಟ
ಎರಡನೇ ಇನಿಂಗ್ಸ್ನಲ್ಲಿ ಅಲ್ಪ ಮೊತ್ತಕ್ಕೆ ಕುಸಿಯುವ ಆತಂಕದಲ್ಲಿದ್ದ ಆಸಿಸ್ಗೆ ಆಸರೆಯಾದ ಸ್ಟಾರ್ಕ್, ಜೋಶ್ ಹ್ಯಾಜಲ್ವುಡ್ ಜೊತೆ ಸೇರಿ 10ನೇ ವಿಕೆಟ್ಗೆ 59 ರನ್ ಸೇರಿಸಿದರು.

ಇದು ಲಾರ್ಡ್ಸ್ನಲ್ಲಿ ಕೊನೇ ವಿಕೆಟ್ ಜೊತೆಯಾಟದಲ್ಲಿ ಬಂದ 5ನೇ ಗರಿಷ್ಠ ಜೊತೆಯಾಟವಾಗಿದೆ.

ಆಸ್ಟ್ರೇಲಿಯಾದವರಾದ ಹ್ಯಾರಿ ಬೋಲೆ – ಟಪ್ ಸ್ಕಾಟ್ 1884ರಲ್ಲಿ ಹಾಗೂ ಡೆನ್ನಿಸ್ ಲಿಲ್ಲೀ – ಆಶ್ಲೇ ಮಲ್ಲೆಟ್ 1975ರಲ್ಲಿ 69 ರನ್ ಗಳಿಸಿದ್ದು ದಾಖಲೆಯಾಗಿದೆ.

4ನೇ ಇನಿಂಗ್ಸ್ನಲ್ಲಿ ಶತಕ
ಆಸ್ಟ್ರೇಲಿಯಾ ನೀಡಿದ 282 ರನ್ಗಳ ಗುರಿ ಎದುರು ದಿಟ್ಟ ಆಟವಾಡಿದ ಮರ್ಕರಂ 136 ರನ್ ಗಳಿಸಿದರು. ಇದು ಟೆಸ್ಟ್ ಪಂದ್ಯವೊಂದರ ನಾಲ್ಕನೇ ಇನಿಂಗ್ಸ್ನಲ್ಲಿ ಅವರು ಗಳಿಸಿದ ಮೂರನೇ ಶತಕವಾಗಿದೆ.

ಭಾರತದ ಸುನಿಲ್ ಗವಾಸ್ಕರ್ ಹಾಗೂ ದಕ್ಷಿಣ ಆಫ್ರಿಕಾದವರೇ ಆದ ಗ್ರೇಮ್ ಸ್ಮಿತ್ ಅವರು ನಾಲ್ಕನೇ ಇನಿಂಗ್ಸ್ನಲ್ಲಿ ಹೆಚ್ಚು ಶತಕ ಗಳಿಸಿದ ದಾಖಲೆ ಹೊಂದಿದ್ದಾರೆ. ಅವರಿಬ್ಬರು ತಲಾ 4 ಬಾರಿ ಈ ಸಾಧನೆ ಮಾಡಿದ್ದಾರೆ.

ಲಾರ್ಡ್ಸ್ ಟೆಸ್ಟ್ನಲ್ಲಿ ಮೂರನೇ ಗರಿಷ್ಠ ಮೊತ್ತ
ವೆಸ್ಟ್ ಇಂಡೀಸ್ನ ಗಾರ್ಡನ್ ಗ್ರೀನಿಜ್ ಅವರು 1984ರಲ್ಲಿ ಇಂಗ್ಲೆಂಡ್ ವಿರುದ್ಧ ಅಜೇಯ 214 ರನ್ ಗಳಿಸಿದ್ದು ಲಾರ್ಡ್ಸ್ ಟೆಸ್ಟ್ನಲ್ಲಿ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.

1976ರಲ್ಲಿ ಇಂಗ್ಲೆಂಡ್ ಎದುರು 138 ರನ್ ಗಳಿಸಿದ್ದ ಆದ ರಾಯ್ ಫ್ರೆಡ್ರಿಕ್ಸ್ (ವೆಸ್ಟ್ ಇಂಡೀಸ್) ಎರಡನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಮೈಕಲ್ ಕ್ಲಾರ್ಕ್ (vs ಇಂಗ್ಲೆಂಡ್, 2009) ಹಾಗೂ ಏಡನ್ ಮರ್ಕರಂ (136 ರನ್) ನಂತರದ ಸ್ಥಾನದಲ್ಲಿದ್ದಾರೆ.

ಭಾರತದ ಅಜಿತ್ ಅಗರ್ಕರ್ ಅವರು 2002ರಲ್ಲಿ ಇಂಗ್ಲೆಂಡ್ ವಿರುದ್ಧ ಅಜೇಯ 109 ರನ್ ಗಳಿಸಿರುವುದೂ ಲಿಸ್ಟ್ನಲ್ಲಿದೆ.

ಮರ್ಕರಂ – ತೆಂಬಾ ಜೊತೆಯಾಟ
ಆಸಿಸ್ ವಿರುದ್ಧ ಗುರಿ ಬೆನ್ನತ್ತುವ ವೇಳೆ ಮರ್ಕರಂ ಹಾಗೂ ತೆಂಬಾ ಬವುಮಾ 3ನೇ ವಿಕೆಟ್ಗೆ 147ರನ್ ಸೇರಿಸಿದರು. ಇದು ಲಾರ್ಡ್ಸ್ನಲ್ಲಿ ಮೂರನೇ ಅತ್ಯುತ್ತಮ ಜೊತೆಯಾಟವಾಗಿದೆ.

ವೆಸ್ಟ್ ಇಂಡೀಸ್ನ ಲಾರಿ ಗೋಮ್ಸ್ – ಗಾರ್ಡನ್ ಗ್ರೀನಿಜ್ ಅವರು 1984ರಲ್ಲಿ ಇಂಗ್ಲೆಂಡ್ ವಿರುದ್ಧ 287 ರನ್ ಸೇರಿಸಿದ್ದರು. ಆಸ್ಟ್ರೇಲಿಯಾದ ಮೈಕಲ್ ಕ್ಲಾರ್ಕ್ – ಬ್ರಾಡ್ ಹಡಿನ್ ಜೋಡಿ ಇಂಗ್ಲೆಂಡ್ ವಿರುದ್ಧ 185 ರನ್ ಕಲೆಹಾಕಿದ್ದು ಎರಡನೇ ಅತ್ಯುತ್ತಮ ಜೊತೆಯಾಟ ಎನಿಸಿದೆ.

ಲಾರ್ಡ್ಸ್ನಲ್ಲಿ ನಾಯಕನ ವಿಕೆಟ್ ಪಡೆದ ನಾಯಕ
ಫೈನಲ್ ಪಂದ್ಯದ ಎರಡೂ ಇನಿಂಗ್ಸ್ಗಳಲ್ಲಿ ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಅವರನ್ನು ಆಸಿಸ್ ನಾಯಕ ಪ್ಯಾಟ್ ಕಮಿನ್ಸ್ ಔಟ್ ಮಾಡಿದರು. ಲಾರ್ಡ್ಸ್ ಟೆಸ್ಟ್ನಲ್ಲಿ 5ನೇ ಬಾರಿ ಈ ರೀತಿ ಆಗಿದೆ.

ಗರಿಷ್ಠ ಮೊತ್ತ ಬೆನ್ನತ್ತಿ ಗೆದ್ದ ತಂಡಗಳು
342 ರನ್: ವೆಸ್ಟ್ ಇಂಡಿಸ್ vs ಇಂಗ್ಲೆಂಡ್, 1984
282 ರನ್: ದಕ್ಷಿಣ ಆಫ್ರಿಕಾ vs ಆಸ್ಟ್ರೇಲಿಯಾ, 2025
282 ರನ್: ಇಂಗ್ಲೆಂಡ್ vs ನ್ಯೂಜಿಲೆಂಡ್, 2004
277 ರನ್: ಇಂಗ್ಲೆಂಡ್ vs ನ್ಯೂಜಿಲೆಂಡ್, 2022
216 ರನ್: ಇಂಗ್ಲೆಂಡ್ vs ನ್ಯೂಜಿಲೆಂಡ್, 1965

ಆಸ್ಟ್ರೇಲಿಯಾಗೆ ಐಸಿಸಿ ಟೂರ್ನಿಗಳ ಫೈನಲ್ನಲ್ಲಿ ಸೋಲು
vs ವೆಸ್ಟ್ ಇಂಡೀಸ್, ಏಕದಿನ ವಿಶ್ವಕಪ್ – 1975
vs ಶ್ರೀಲಂಕಾ, ಏಕದಿನ ವಿಶ್ವಕಪ್ – 1996
vs ಇಂಗ್ಲೆಂಡ್, ಟಿ20 ವಿಶ್ವಕಪ್ – 2010
vs ದಕ್ಷಿಣ ಆಫ್ರಿಕಾ, ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್ – 2025

ಐಸಿಸಿ ಟೂರ್ನಿಗಳ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ಸಾಧನೆ
ಪುರುಷರ ಚಾಂಪಿಯನ್ಸ್ ಟ್ರೋಫಿ – 1998: vs ವೆಸ್ಟ್ ಇಂಡಿಸ್ –ಜಯ
ಮಹಿಳಾ ಟಿ20 ವಿಶ್ವಕಪ್ – 2023: vs ಆಸ್ಟ್ರೇಲಿಯಾ –ಸೋಲು
ಪುರುಷರ ಟಿ20 ವಿಶ್ವಕಪ್ – 2024: vs ಭಾರತ –ಸೋಲು
ಮಹಿಳಾ ಟಿ20 ವಿಶ್ವಕಪ್ – 2024: vs ನ್ಯೂಜಿಲೆಂಡ್ – ಸೋಲು
ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್ – 2025: vs ಆಸ್ಟ್ರೇಲಿಯಾ – ಜಯ

ಮೊದಲ 10 ಟೆಸ್ಟ್ ಪಂದ್ಯಗಳಲ್ಲಿ ಹೆಚ್ಚು ಜಯ
9 – ಪೆರ್ಸಿ ಚಾಂಪ್ಮನ್ (ಇಂಗ್ಲೆಂಡ್), ತೆಂಬಾ ಬವುಮಾ (ದಕ್ಷಿಣ ಆಫ್ರಿಕಾ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.