ಲಂಡನ್: ಜಾಗತಿಕ ಮಟ್ಟದ ಪ್ರಮುಖ ಕ್ರಿಕೆಟ್ ಟೂರ್ನಿಗಳ ಫೈನಲ್ ನಡೆದಾಗಲೆಲ್ಲಾ ಆಸ್ಟ್ರೇಲಿಯಾ ತನ್ನ ತಾಕತ್ತನ್ನು ತೋರಿಸುತ್ತ ಬಂದಿದೆ. ಅದು ಚುಟುಕು ಕ್ರಿಕೆಟ್ ಇರಲಿ, ಏಕದಿನ ಮಾದರಿಯ ವಿಶ್ವಕಪ್ ಇರಲಿ ಅಥವಾ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಇರಲಿ ಆಸ್ಟ್ರೇಲಿಯಾದ ಪ್ರಾಬಲ್ಯ ಎದ್ದುಕಂಡಿದೆ.

ಕ್ರಿಕೆಟ್ನ ತವರು ಲಾರ್ಡ್ಸ್ನಲ್ಲಿ ಬುಧವಾರ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಮೂರನೇ ಆವೃತ್ತಿಯ ಫೈನಲ್ನಲ್ಲೂ ಪ್ಯಾಟ್ ಕಮಿನ್ಸ್ ನೇತೃತ್ವದ ತಂಡ ನೆಚ್ಚಿನ ತಂಡ ಎನಿಸಿದೆ.

ದೊಡ್ಡ ವೇದಿಕೆಗಳಲ್ಲಿ ಆಸ್ಟ್ರೇಲಿಯಾ ಪ್ರಾಬಲ್ಯ ಒಂದೆಡೆಯಾದರೆ, ದಕ್ಷಿಣ ಆಫ್ರಿಕಾ ತಂಡ ನಿರ್ಣಾಯಕ ಪಂದ್ಯಗಳಲ್ಲಿ ಒತ್ತಡಕ್ಕೆ ಒಳಗಾಗಿ ‘ಚೋಕರ್ಸ್’ ಎನಿಸಿಕೊಂಡಿದೆ. ಈ ತಂಡ ಕೆಲವು ಬಾರಿ ಪ್ರಶಸ್ತಿಯ ಸಮೀಪ ಬಂದು ಎಡವಿದೆ.

ಆದರೆ ಈ ಬಾರಿ ಅನುಭವಿಗಳಿಂದ ಕೂಡಿರುವ ಹರಿಣಗಳ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಗೆಲ್ಲಬೇಕೆಂಬ ಕೆಚ್ಚು, ಒಬ್ಬರಿಗೊಬ್ಬರು ಧೈರ್ಯತುಂಬುವ ದೃಶ್ಯಗಳು ಈ ಬಾರಿ ತಂಡದಲ್ಲಿ ಢಾಳಾಗಿ ಕಾಣಿಸಿವೆ.

ಈ ಹಿಂದಿನ– 2023ರ ಫೈನಲ್ನಲ್ಲಿ ಅನುಭವಿಗಳಿಂದ ಕೂಡಿದ ಆಸ್ಟ್ರೇಲಿಯಾ ತಂಡ 209 ರನ್ಗಳಿಂದ ಭಾರತ ತಂಡವನ್ನು ಸದೆಬಡಿದಿತ್ತು. ಆ ತಂಡದ 11 ಮಂದಿಯಲ್ಲಿ 10 ಮಂದಿ ಈ ತಂಡದಲ್ಲೂ ಇದ್ದಾರೆ. ಟೆಸ್ಟ್ನಿಂದ ನಿವೃತ್ತರಾಗಿರುವ ಆರಂಭ ಆಟಗಾರ ಡೇವಿಡ್ ವಾರ್ನರ್ ಮಾತ್ರ ಈ ತಂಡದಲ್ಲಿಲ್ಲ.

ಗಾಯಾಳಾಗಿದ್ದ ಜೋಶ್ ಹ್ಯಾಜಲ್ವುಡ್ ಚೇತರಿಸಿಕೊಂಡಿದ್ದು, ಅವರು ಸ್ಕಾಟ್ ಬೋಲ್ಯಾಂಡ್ ಬದಲು ಸ್ಥಾನ ಪಡೆದಿದ್ದಾರೆ. ಹೇಜಲ್ವುಡ್ ಭುಜದ ಗಾಯದಿಂದ ಚೇತರಿಸಿಕೊಂಡಿದ್ದು, ಇತ್ತೀಚೆಗೆ ಆರ್ಸಿಬಿ ತಂಡ ಮೊದಲ ಬಾರಿ ಐಪಿಎಲ್ ಪ್ರಶಸ್ತಿ ಗೆಲ್ಲುವಲ್ಲಿ ಕೊಡುಗೆ ನೀಡಿದ್ದರು. ಲೀಗ್ನಲ್ಲಿ 22 ವಿಕೆಟ್ ಕಬಳಿಸಿದ್ದರು.

ವಾರ್ನರ್ ಬದಲು ಲಾಬುಶೇನ್ ಅವರು ಉಸ್ಮಾನ್ ಖ್ವಾಜಾ ಜೊತೆ ಇನಿಂಗ್ಸ್ ಆರಂಭಿಸಲಿದ್ದಾರೆ ಎಂದು ಪ್ಯಾಟ್ ಕಮಿನ್ಸ್ ಮಂಗಳವಾರ ಪ್ರಕಟಿಸಿದ್ದಾರೆ. 2016ರ ನಂತರ ಒಮ್ಮೆ ಮಾತ್ರ ಲಾಬುಶೇನ್ ಇನಿಂಗ್ಸ್ ಆರಂಭಿಸಿದ್ದಾರೆ. ಅವರ ಲಯ ಮೊದಲಿನ ರೀತಿಯಲ್ಲಿಲ್ಲ. 17 ತಿಂಗಳ ಹಿಂದೆ ವಾರ್ನರ್ ನಿವೃತ್ತರಾದ ಬಳಿಕ ಆ ಸ್ಥಾನಕ್ಕೆ ಕಾಯಂ ಆದ ಆಟಗಾರನ್ನು ಕಂಡುಕೊಳ್ಳಲು ಕಾಂಗರೂ ಪಡೆಗೆ ಸಾಧ್ಯವಾಗಿಲ್ಲ.

ಆದರೆ ಬೌಲಿಂಗ್ ಉತ್ತಮವಾಗಿದೆ. ಆಸ್ಟ್ರೇಲಿಯಾ ಪರ ಸಾರ್ವಕಾಲಿಕ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳಲ್ಲಿ ನಾಲ್ವರು ಈ ತಂಡದಲ್ಲಿದ್ದಾರೆ. ನೇಥನ್ ಲಯನ್ (553), ಮಿಚೆಲ್ ಸ್ಟಾರ್ಕ್ (382), ಪ್ಯಾಟ್ ಕಮಿನ್ಸ್ (294), ಹೇಜಲ್ವುಡ್ (279) ಈ ನಾಲ್ವರು.

ಸ್ಟೀವ್ ಸ್ಮಿತ್ ತಮ್ಮ ಕೊನೆಯ ಐದು ಟೆಸ್ಟ್ಗಳಲ್ಲಿ ನಾಲ್ಕು ಶತಕ ಬಾರಿಸಿ ಒಳ್ಳೆಯ ಲಯದಲ್ಲಿದ್ದಾರೆ. ಟೆಸ್ಟ್ನಲ್ಲಿ 10 ಸಹಸ್ರ ರನ್ಗಳ ಮೈಲಿಗಲ್ಲು ದಾಟಿದ್ದಾರೆ. ಲಾರ್ಡ್ಸ್ನಲ್ಲಿ ಅವರು 58ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.

ಖ್ವಾಜಾ ಅವರು ಆಫ್ರಿಕಾದ ಪ್ರಮುಖ ವೇಗಿ ರಬಾಡ ಬೌಲಿಂಗ್ನಲ್ಲಿ 10 ಸಲ ಔಟ್ ಆಗಿದ್ದಾರೆ. 327 ವಿಕೆಟ್ ಪಡೆದಿರುವ ರಬಾಡ ಅವರಿಗೆ ದಕ್ಷಿಣ ಆಫ್ರಿಕಾದ ಅಗ್ರ ಬೌಲರ್ಗಳ ಪಟ್ಟಿಯಲ್ಲಿ ಅಲನ್ ಡೊನಾಲ್ಡ್ ಅವರನ್ನು ಹಿಂದೆಹಾಕಿ ನಾಲ್ಕನೇ ಸ್ಥಾನ ಪಡೆಯಬೇಕಾದರೆ 3 ವಿಕೆಟ್ಗಳಷ್ಟೇ ಬೇಕಿವೆ. ರಬಾಡ ಅವರಿಗೆ ಮಾರ್ಕೊ ಯಾನ್ಸೆನ್ (ಡಬ್ಲ್ಯುಟಿಸಿಯ 6 ಪಂದ್ಯಗಳಿಂದ 29 ವಿಕೆಟ್) ಉತ್ತಮ ಬೆಂಬಲ ನೀಡುತ್ತಿದ್ದಾರೆ. ಲುಂಗಿ ಗಿಡಿ ತಂಡದ ಮೂರನೇ ವೇಗಿಯಾಗಿ ಸ್ಥಾನ ಪಡೆದಿದ್ದಾರೆ.

ಏಡನ್ ಮರ್ಕರಂ ಹಾಗೂ ರಿಯಾನ್ ರಿಕೆಲ್ಟನ್ ಅವರು ದಕ್ಷಿಣ ಆಫ್ರಿಕಾದ ಇನಿಂಗ್ಸ್ ಆರಂಭಿಸಲಿದ್ದಾರೆ. ನಾಯಕ ಬವುಮಾ ನಾಲ್ಕನೇ ಕ್ರಮಾಂಕದಲ್ಲಿ ಆಡಲಿದ್ದಾರೆ.

ತಂಡಗಳು: ಆಸ್ಟ್ರೇಲಿಯಾ: ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಶೇನ್, ಕ್ಯಾಮರೂನ್ ಗ್ರೀನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಬ್ಯೂ ವೆಬ್ಸ್ಟರ್ ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನೇಥನ್ ಲಯನ್, ಜೋಶ್ ಹ್ಯಾಜಲ್ವುಡ್.

ದಕ್ಷಿಣ ಆಫ್ರಿಕಾ: ಏಡನ್ ಮರ್ಕರಂ, ರಿಯಾನ್ ರಿಕೆಲ್ಟನ್, ವಿಯಾನ್ ಮುಲ್ಡರ್, ತೆಂಬಾ ಬವುಮಾ (ನಾಯಕ), ಟ್ರಿಸ್ಟನ್ ಸ್ಟಬ್ಸ್, ಡೇವಿಡ್ ಬೆಡಿಂಗಮ್, ಕೈಲ್ ವೆರಿಯನ್, ಮಾರ್ಕೊ ಯಾನ್ಸನ್, ಕೇಶವ ಮಹಾರಾಜ್, ಕಗಿಸೊ ರಬಾಡ, ಲುಂಗಿ ಗಿಡಿ.

ಪಂದ್ಯ ಆರಂಭ: ಮಧ್ಯಾಹ್ನ 3.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಮತ್ತು ಜಿಯೊ ಹಾಟ್ಸ್ಟಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.