ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಅಪ್ಪಟ ಸಂಪ್ರದಾಯವಾದಿ: ಐಸಿಸಿ ಚಿಂತನೆ ಬಗ್ಗೆ ಮೆಕ್‌ಗ್ರಾತ್ ಪ್ರತಿಕ್ರಿಯೆ

Last Updated 2 ಜನವರಿ 2020, 12:17 IST
ಅಕ್ಷರ ಗಾತ್ರ

ಮೆಲ್ಬೋರ್ನ್‌: ಟೆಸ್ಟ್‌ ಚಾಂಪಿಯನ್‌ಷಿಪ್‌ನ ಭಾಗವಾಗಿ 2023ರಿಂದ 2031ರ ಅವಧಿಯಲ್ಲಿ ನಾಲ್ಕು ದಿನಗಳ ಟೆಸ್ಟ್‌ ಪಂದ್ಯಗಳನ್ನು ಆಯೋಜಿಸಲು ಚಿಂತನೆ ನಡೆಸುತ್ತಿರುವುದಾಗಿ ಐಸಿಸಿ ಹೇಳಿತ್ತು. ಇದಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು.ಆದರೆ ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಗ್ಲೇನ್‌ ಮೆಕ್‌ಗ್ರಾತ್‌ ಐಸಿಸಿಯ ನಿರ್ಧಾರವನ್ನು ಸ್ಪಷ್ಟವಾಗಿ ವಿರೋಧಿಸಿದ್ದಾರೆ.

ಕ್ರೀಡಾ ವಾಹಿನಿಯೊಂದರ ಜೊತೆ ಮಾತನಾಡಿರುವ ಮೆಕ್‌ ಗ್ರಾತ್‌, ‘ನಾನು ಅಪ್ಪಟಸಂಪ್ರದಾಯವಾದಿ. ಆಟವು (ಟೆಸ್ಟ್‌ ಕ್ರಿಕೆಟ್‌) ಈಗ ಹೇಗಿದೆಯೋ ಆಗೆಯೇ ಇರುವುದನ್ನು ಬಯಸುತ್ತೇನೆ’ ಎಂದು ಹೇಳಿಕೊಂಡಿದ್ದಾರೆ.

‘ನನಗೆ ಐದು ದಿನಗಳ ಆಟವು ವಿಶೇಷವಾದುದು. ಅದನ್ನು ಕಡಿತಗೊಳಿಸುವುದನ್ನು ನಾನು ವಿರೋಧಿಸುತ್ತೇನೆ. ಪಿಂಕ್‌ ಟೆಸ್ಟ್‌, ಹಗಲು ರಾತ್ರಿ ಪಂದ್ಯಗಳನ್ನು ಪರಿಚಯಿಸಿರುವುದು ನಮ್ಮ ಆಟದ ತಾಜಾತನವನ್ನು ಉಳಿಸಿಕೊಳ್ಳಲು ಉತ್ತಮ ಮಾರ್ಗಗಳಾಗಿವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಅಧ‌್ಯಕ್ಷ ಸೌರವ್‌ ಗಂಗೂಲಿ, ‘ಐಸಿಸಿಪ್ರಸ್ತಾವದ ಬಗ್ಗೆ ಪ್ರತಿಕ್ರಿಯಿಸಲು ಇದು ಸಕಾಲವಲ್ಲ. ಅದರ ಬಗ್ಗೆ ಸರಿಯಾದ ನನಗೆ ಮಾಹಿತಿ ಇಲ್ಲ. ತಿಳಿದುಕೊಂಡು ನಂತರ ಪ್ರತಿಕ್ರಿಯಿಸುತ್ತೇನೆ’ ಎಂದು ಹೇಳಿದ್ದರು.

‘ಈ ಕುರಿತುಗಂಭೀರ ಚಿಂತನೆ ನಡೆಯಬೇಕಿದೆ. ಈ ಯೋಜನೆ ಜಾರಿಯಾದರೆ ಏನೆಲ್ಲಾ ಅನುಕೂಲಗಳು ಆಗಲಿವೆ ಎಂಬುದನ್ನು ಎಲ್ಲರೂ ಮನಗಾಣಬೇಕಿದೆ’ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾದ (ಸಿಎ) ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕೆವಿನ್‌ ರಾಬರ್ಟ್ಸ್‌ ಪ್ರತಿಕ್ರಿಯಿಸಿದ್ದರು.

ಪಂದ್ಯಗಳ ಆಯೋಜನೆಯ ವೆಚ್ಚ, ಆಟಗಾರರ ಮೇಲಿನ ಹೊರೆ ಕಡಿಮೆ ಮಾಡುವುದು ಹಾಗೂ ಟೆಸ್ಟ್‌ನತ್ತ ಹೆಚ್ಚು ಅಭಿಮಾನಿಗಳನ್ನು ಸೆಳೆಯುವ ಉದ್ದೇಶಗಳಿಂದ ಈ ತೀರ್ಮಾನ ಕೈಗೊಳ್ಳಲು ನಿರ್ಧರಿಸಿರುವುದಾಗಿಯೂ ಐಸಿಸಿ ತಿಳಿಸಿತ್ತು.

ಇದೇ ಮೊದಲಲ್ಲ: ನಾಲ್ಕು ದಿನಗಳ ಟೆಸ್ಟ್‌, ಹೊಸ ಪರಿಕಲ್ಪನೆಯಲ್ಲ. 2019ರ ಆರಂಭದಲ್ಲಿ ಇಂಗ್ಲೆಂಡ್‌ ಮತ್ತು ಐರ್ಲೆಂಡ್‌ ತಂಡಗಳು ನಾಲ್ಕು ದಿನಗಳ ಟೆಸ್ಟ್‌ ಆಡಿದ್ದವು. 2017ರಲ್ಲಿ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ನಡುವೆಯೂ ಪಂದ್ಯ ಆಯೋಜನೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT