ವಿಡಿಯೊ: ಒಟ್ಟಾಗಿ ಕಾಣಿಸಿಕೊಂಡ ಧೋನಿ– ರೈನಾ; ಅಭಿಮಾನಿಗಳ ಪ್ರತಿಕ್ರಿಯೆ ಹೀಗಿತ್ತು?

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರರಾದ ಮಹೇಂದ್ರ ಸಿಂಗ್ ಧೋನಿ ಮತ್ತು ಸುರೇಶ್ ರೈನಾ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ಇಂಗ್ಲೆಂಡ್‌ನ ಲಾರ್ಡ್ಸ್ ಅಂಗಳದಲ್ಲಿ ಗುರುವಾರ ನಡೆದ ಭಾರತ –ಇಂಗ್ಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದ ವೇಳೆ ಎಂ.ಎಸ್.ಧೋನಿ, ಸುರೇಶ್ ರೈನಾ, ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ಹರ್ಭಜನ್ ಸಿಂಗ್ ಉಪಸ್ಥಿತರಿದ್ದರು.
ಧೋನಿ –ರೈನಾ ಇಬ್ಬರೂ ಒಂದೇ ಕಾರಿನಲ್ಲಿ ಲಾರ್ಡ್ಸ್ ಕ್ರೀಡಾಂಗಣಕ್ಕೆ ಆಗಮಿಸಿದ ವಿಡಿಯೊವನ್ನು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಸಹೋದರರ ಪುನರ್ಮಿಲನ’ ಎಂದು ಬರೆದುಕೊಂಡಿದೆ.
The Reunion of Brothers! 💛
THALA 🤝 thala! #WhistlePodu #Yellove 🦁💛 pic.twitter.com/ppLLVgZWRb— Chennai Super Kings (@ChennaiIPL) July 15, 2022
ಧೋನಿ –ರೈನಾ ಒಟ್ಟಾಗಿ ಕಾಣಿಸಿಕೊಂಡಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕ್ರೀಡಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಪಂದ್ಯದಲ್ಲಿ ಬ್ಯಾಟಿಂಗ್ ಕೈಕೊಟ್ಟರೂ, ಬೌಲರ್‌ಗಳ ಚುರುಕಿನ ದಾಳಿಯ ನೆರವಿನಿಂದ ಇಂಗ್ಲೆಂಡ್ ತಂಡ, ಭಾರತದ ವಿರುದ್ಧ 100 ರನ್‌ಗಳಿಂದ ಗೆದ್ದಿತು.
ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್, ಯಜುವೇಂದ್ರ ಚಾಹಲ್ (47ಕ್ಕೆ4) ಸ್ಪಿನ್ ಮೋಡಿಯ ಹೊರತಾಗಿಯೂ 49 ಓವರ್‌ಗಳಲ್ಲಿ 246 ರನ್‌ಗಳಿಗೆ ಆಲೌಟಾಯಿತು.
ಸಾಧಾರಣ ಗುರಿ ಬೆನ್ನಟ್ಟಿದ ರೋಹಿತ್ ಶರ್ಮ ಬಳಗ, ರೀಸ್ ಟೋಪ್ಲಿ (24ಕ್ಕೆ 6) ಅವರ ದಾಳಿಗೆ ನಲುಗಿ ಆಗಿಂದಾಗ್ಗೆ ವಿಕೆಟ್ ಕಳೆದುಕೊಂಡು 38.5 ಓವರ್‌ಗಳಲ್ಲಿ 146 ರನ್‌ಗಳಿಗೆ ಆಲೌಟಾಯಿತು.
ಮೂರು ಪಂದ್ಯಗಳ ಸರಣಿ 1–1 ರಲ್ಲಿ ಸಮಬಲ ಆಗಿದ್ದು, ಜುಲೈ 17 ರಂದು ನಡೆಯುವ ಅಂತಿಮ ಪಂದ್ಯ ಕುತೂಹಲ ಮೂಡಿಸಿದೆ.
ಇವನ್ನೂ ಓದಿ...
ಕಾರ್ಸೆಟ್ ಟ್ರೆಂಡ್: ವಾಣಿ ಕಪೂರ್ ಲುಕ್‌ಗೆ ಅಭಿಮಾನಿಗಳು ಫಿದಾ, ಫೋಟೊ ವೈರಲ್
ಬೋಲ್ಡ್ ಲುಕ್‌ನಲ್ಲಿ ಬಾಲಿವುಡ್ ಬೆಡಗಿ ದಿಶಾ ಪಟಾನಿ: ಹಾಟ್ ಫೋಟೊ ವೈರಲ್
ಬಹುಭಾಷಾ ನಟ, ನಿರ್ದೇಶಕ ಪ್ರತಾಪ್ ಪೋಥನ್ ಹೃದಯಾಘಾತದಿಂದ ನಿಧನ
ಪಾಕ್: ಮಕ್ಕಳ ಮುಂದೆಯೇ ಪತ್ನಿಯನ್ನು ಕೊಂದು ಕಡಾಯಿಯಲ್ಲಿ ಬೇಯಿಸಿದ ಕ್ರೂರಿ ಪತಿ!
ವಿಡಿಯೊ: ಮಹಾರಾಷ್ಟ್ರದಲ್ಲಿ ಉಕ್ಕಿ ಹರಿಯುವ ನದಿಗೆ ಧುಮುಕಿದ ಯುವಕ, ಮುಂದೇನಾಯ್ತು?
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.