IND vs AUS ಟೆಸ್ಟ್: ಭಾರತಕ್ಕೆ ಐತಿಹಾಸಿಕ ಗೆಲುವು, ಇಲ್ಲಿವೆ ಸ್ವಾರಸ್ಯಕರ ಸಂಗತಿ

ಬ್ರಿಸ್ಬೇನ್: ಇಲ್ಲಿನ ‘ಗಾಬಾ’ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯವನ್ನು 3 ವಿಕೆಟ್‌ಗಳಿಂದ ಗೆಲ್ಲುವ ಮೂಲಕ ಭಾರತವು 4 ಪಂದ್ಯಗಳ ಟೆಸ್ಟ್ ಸರಣಿಯನ್ನು 2–1 ಅಂತರದಿಂದ ತನ್ನದಾಗಿಸಿಕೊಂಡಿದೆ. ‘ಗಾಬಾ ಟೆಸ್ಟ್’ನಲ್ಲಿ ಭಾರತ ಜಯ ಗಳಿಸಿದ್ದು ಒಂದು ಸಾಧನೆಯಾದರೆ, ಆಸ್ಟ್ರೇಲಿಯಾ ಸೋಲನುಭವಿಸಿದ್ದೂ ವಿಶೇಷವೇ!
ಓದಿ: 2-1 ರಿಂದ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ಭಾರತ
‘ಗಾಬಾ ಟೆಸ್ಟ್’ಗೆ ಸಂಬಂಧಿಸಿ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯು (ಐಸಿಸಿ) ಹಲವು ಸ್ವಾರಸ್ಯಕರ ಸಂಗತಿಗಳನ್ನು ಟ್ವೀಟ್ ಮೂಲಕ ಹಂಚಿಕೊಂಡಿದೆ.
‘ಕಳೆದ ಬಾರಿ ಆಸ್ಟ್ರೇಲಿಯಾವು ಗಾಬಾದಲ್ಲಿ ಸೋಲನುಭವಿಸಿದ್ದು ಯಾವಾಗ...
* ಜಾರ್ಜ್ ಎಚ್.ಡಬ್ಲ್ಯು. ಬುಷ್ ಅವರು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯ ಗಳಿಸಿದ್ದಾಗ.
* ಜಾನ್ ಬೋವಿ ಅವರ ‘ಬ್ಯಾಡ್ ಮೆಡಿಸಿನ್’ ಹಾಡು ಜನಪ್ರಿಯಗೊಂಡಿದ್ದಾಗ.
* ವಿರಾಟ್ ಕೊಹ್ಲಿ ಅವರು ಜನಿಸಿ 16 ದಿನ ಆಗಿದ್ದಾಗ.
* ಸಚಿನ್ ತೆಂಡೂಲ್ಕರ್ ಅವರಿನ್ನೂ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಲು ಒಂದು ವರ್ಷ ಬಾಕಿ ಇದ್ದಾಗ’
ಎಂದು ಐಸಿಸಿ ಟ್ವೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಓದಿ: PV Web Exclusive: ಮಧ್ಯಮವೇಗಿ ಶಾರ್ದೂಲ್ ಠಾಕೂರ್ನ ಸಿಕ್ಸರ್ ಕಥೆ
ಈ ಹಿಂದೆ ‘ಗಾಬಾ’ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋಲನುಭವಿಸಿದ್ದು 1988ರಲ್ಲಿ. ಅದಾದ ಬಳಿಕ ಆಸ್ಟ್ರೇಲಿಯಾ ಅಲ್ಲಿ ಸೋಲನುಭವಿಸಿರುವುದು ಇದೇ ಮೊದಲು.
Last time Australia lost a Gabba Test...
🇺🇸 George H.W. Bush had just won the US Presidential election
🎶 Bad Medicine by Bon Jovi was charting #1
👶 Virat Kohli was 16 days old
🏏 Sachin Tendulkar was still one year away from making his Test debut pic.twitter.com/87DmsDXDqo
— ICC (@ICC) January 19, 2021
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.