ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs AUS ಬಾಕ್ಸಿಂಗ್ ಡೇ ಟೆಸ್ಟ್‌: ಅಪ್ಪನ ಕನಸು ನನಸಾಗಿಸಿದ ಸಿರಾಜ್

Last Updated 26 ಡಿಸೆಂಬರ್ 2020, 20:45 IST
ಅಕ್ಷರ ಗಾತ್ರ

ಮೆಲ್ಬರ್ನ್: ಹೈದರಾಬಾದಿನ ಮಧ್ಯಮ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಶನಿವಾರ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಮೊದಲ ದಿನವೇ ಎರಡು ವಿಕೆಟ್ ಪಡೆದು ಮಿಂಚಿದರು.

ಹೋದ ತಿಂಗಳು ನಿಧನರಾದ ತಮ್ಮ ತಂದೆಗೆ ಈ ಸಾಧನೆಯನ್ನು ಅರ್ಪಿಸಿದರು. ಸಿರಾಜ್ ಯುಎಇಯಲ್ಲಿ ನಡೆದಿದ್ದ ಐಪಿಎಲ್‌ನಲ್ಲಿ ಆಡಿದ ನಂತರ ನೇರವಾಗಿ ಆಸ್ಟ್ರೇಲಿಯಾಕ್ಕೆ ಭಾರತ ತಂಡದೊಂದಿಗೆ ತೆರಳಿದ್ದರು. ನವೆಂಬರ್ 20ರಂದು ಅವರ ತಂದೆ ಮೊಹಮ್ಮದ್ ಗೌಸ್ ಹೈದರಾಬಾದಿನಲ್ಲಿ ನಿಧನರಾಗಿದ್ದರು. ಆದರೆ, ಸಿರಾಜ್ ತಮ್ಮ ತಂದೆಯ ಅಂತ್ಯಕ್ರಿಯೆಗೆ ಬಂದಿರಲಿಲ್ಲ.

ತಮ್ಮ ತಂದೆಯ ಕನಸು ಈಡೇರಿಸಲು ಭಾರತ ತಂಡದಲ್ಲಿಯೇ ಇರುವುದಾಗಿ ಹೇಳಿದ್ದರು. ಅಡಿಲೇಡ್ ಪಂದ್ಯದಲ್ಲಿ ಮೊಹಮ್ಮದ್ ಶಮಿ ಗಾಯಗೊಂಡ ಕಾರಣ ಈ ಪಂದ್ಯದಲ್ಲಿ ಸಿರಾಜ್‌ಗೆ ಅವಕಾಶ ಸಿಕ್ಕಿತು. ಮಾರ್ನಸ್ ಲಾಬುಷೇನ್ ಅವರನ್ನು ಔಟ್ ಮಾಡಿ ತಮ್ಮ ಟೆಸ್ಟ್ ಜೀವನದ ಮೊದಲ ವಿಕೆಟ್ ಗಳಿಸಿದರು.

ಸಿರಾಜ್ ಭಾರತ ತಂಡದಲ್ಲಿ ಪದಾರ್ಪಣೆ ಮಾಡಿದ 296ನೇ ಆಟಗಾರನಾಗಿದ್ದಾರೆ. ಇದೇ ಮೊದಲ ಟೆಸ್ಟ್ ಪಂದ್ಯ ಆಡುತ್ತಿರುವ ಶುಭಮನ್ ಗಿಲ್. 297ನೇ ಕ್ರಿಕೆಟಿಗನಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT