ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೋನಿ ಹಿಂದಿಕ್ಕಿದ ಧವನ್; ಬುಮ್ರಾ ದಾಖಲೆ ಸರಿಗಟ್ಟಿದ ಚಾಹಲ್

Last Updated 7 ಡಿಸೆಂಬರ್ 2020, 6:21 IST
ಅಕ್ಷರ ಗಾತ್ರ

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಭಾನುವಾರ ಸಿಡ್ನಿಯಲ್ಲಿ ನಡೆದ ದ್ವಿತೀಯ ಟ್ವೆಂಟಿ-20 ಪಂದ್ಯದಲ್ಲೂ ಆರು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಮೂರು ಪಂದ್ಯಗಳ ಟಿ20 ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ವಶಪಡಿಸಿದೆ. ಈ ಪಂದ್ಯದಲ್ಲಿ ಭಾರತೀಯ ಆಟಗಾರರಾದ ಶಿಖರ್ ಧವನ್ ಹಾಗೂ ಯಜುವೇಂದ್ರ ಚಾಹಲ್ ವಿಶಿಷ್ಟ ಸಾಧನೆ ಮಾಡಿದ್ದಾರೆ.

195 ರನ್‌ಗಳ ಬೃಹತ್ ಮೊತ್ತ ಬೆನ್ನಟ್ಟಿದ್ದ ಭಾರತಕ್ಕೆ ಶಿಖರ್ ಧವನ್ ಬಿರುಸಿನ ಆರಂಭವೊದಗಿಸಿದರು. ಕೇವಲ 34 ಎಸೆತಗಳಲ್ಲೇ ಅರ್ಧಶತಕ ಸಾಧನೆ ಮಾಡಿದ ಧವನ್, ಆಸೀಸ್ ಬೌಲರ್‌ಗಳನ್ನು ಚೆಲ್ಲಾಟವಾಡಿದರು. 36 ಎಸೆತಗಳನ್ನು ಎದುರಿಸಿದ ಧವನ್ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 52 ರನ್ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

ಇದನ್ನೂ ಓದಿ:

ಇದರೊಂದಿಗೆ 'ಗಬ್ಬರ್' ಖ್ಯಾತಿಯ ಧವನ್ ವಿಶಿಷ್ಟ ದಾಖಲೆಯೊಂದನ್ನು ಬರೆದಿದ್ದಾರೆ. ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಿಂದಿಕ್ಕಿರುವ ಶಿಖರ್ ಧವನ್, ಟಿ20 ಅಂತರ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಪೈಕಿ ಮೂರನೇ ಸ್ಥಾನಕ್ಕೆ ನೆಗೆದಿದ್ದಾರೆ.

ಶಿಖರ್ ಧವನ್ ಇದುವರೆಗೆ ಆಡಿರುವ 63 ಟಿ20 ಪಂದ್ಯಗಳಲ್ಲಿ 28.29ರ ಸರಾಸರಿಯಲ್ಲಿ 1641 ರನ್ ಪೇರಿಸಿದ್ದಾರೆ. ಇದರಲ್ಲಿ 11 ಅರ್ಧಶತಕಗಳು ಸೇರಿವೆ. ಇನ್ನೊಂದೆಡೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 98 ಪಂದ್ಯಗಳಲ್ಲಿ ಒಟ್ಟು 1617 ರನ್ ಗಳಿಸಿದ್ದಾರೆ.

ಟಿ20 ಅಂತರ ರಾಷ್ಟ್ರೀಯ ಕ್ರಿಕೆಟ್‌ ರನ್ ಬೇಟೆಯಲ್ಲಿ ಸಾರ್ವಕಾಲಿಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ನಾಯಕ ವಿರಾಟ್ ಕೊಹ್ಲಿ 84 ಪಂದ್ಯಗಳಲ್ಲಿ 2843 ರನ್ ಗಳಿಸಿದ್ದಾರೆ. ಕೊಹ್ಲಿ ಹಿಂಬಾಲಿಸುತ್ತಿರುವ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ 108 ಪಂದ್ಯಗಳಲ್ಲಿ 2773 ರನ್ ಪೇರಿಸಿದ್ದಾರೆ. ಪ್ರಸ್ತುತ ಗಾಯದ ತೊಂದರೆಯಿಂದಾಗಿ ಸರಣಿಗೆ ಅಲಭ್ಯವಾಗಿದ್ದಾರೆ.

ಟಿ20ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿ:
ವಿರಾಟ್ ಕೊಹ್ಲಿ: 2843 ರನ್ (84 ಪಂದ್ಯ)
ರೋಹಿತ್ ಶರ್ಮಾ: 2773 ರನ್ (108 ಪಂದ್ಯ)
ಶಿಖರ್ ಧವನ್: 1641 ರನ್ (63 ಪಂದ್ಯ)
ಎಂಎಸ್ ಧೋನಿ: 1617 ರನ್ (98 ಪಂದ್ಯ)
ಸುರೇಶ್ ರೈನಾ: 1605 ರನ್ (78 ಪಂದ್ಯ)

ಬುಮ್ರಾ ದಾಖಲೆ ಸರಿಗಟ್ಟಿದ ಚಾಹಲ್:
ಇನ್ನೊಂದೆಡೆ ಟಿ20 ಅಂತರ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್‌ಗಳ ಸಾಲಿನಲ್ಲಿ ಜಸ್‌ಪ್ರೀತ್ ಬುಮ್ರಾ ದಾಖಲೆಯನ್ನು ಸರಿಗಟ್ಟಿರುವ ಯಜುವೇಂದ್ರ ಚಾಹಲ್, ಜಂಟಿ ಅಗ್ರಸ್ಥಾನವನ್ನು ಹಂಚಿಕೊಂಡಿದ್ದಾರೆ.

ಚಾಹಲ್ 44 ಪಂದ್ಯಗಳಲ್ಲಿ ಒಟ್ಟು 59 ವಿಕೆಟ್ ಕಬಳಿಸಿದ್ದಾರೆ. ಅತ್ತ ಜಸ್‌ಪ್ರೀತ್ ಬುಮ್ರಾ 50 ಪಂದ್ಯಗಳಲ್ಲಿ 59 ವಿಕೆಟ್ ಪಡೆದಿದ್ದಾರೆ.

ಟಿ20ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್‌ಗಳ ಪಟ್ಟಿ:
ಯಜುವೇಂದ್ರ ಚಾಹಲ್: 59 (44 ಪಂದ್ಯ)
ಜಸ್ಪ್ರೀತ್ ಬುಮ್ರಾ: 59 (50 ಪಂದ್ಯ)
ಆರ್ ಅಶ್ವಿನ್: 52 (46 ಪಂದ್ಯ)
ಭುವನೇಶ್ವರ್ ಕುಮಾರ್: 41 (43 ಪಂದ್ಯ)
ಕುಲ್‌ದೀಪ್ ಯಾದವ್: 39 (21 ಪಂದ್ಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT