ಶನಿವಾರ, ಜೂನ್ 19, 2021
26 °C
ಗುಲಾಬಿ ಗುಂಗಲ್ಲಿ ಕ್ರಿಕೆಟಿಗರು

IND vs BAN: ರಹಾನೆಗೆ ಕನಸಿನಲ್ಲೂ ಕಾಡುತ್ತಿದೆ ಐತಿಹಾಸಿಕ ಪಿಂಕ್‌ ಟೆಸ್ಟ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತದಲ್ಲಿ ಇದೇ ಮೊದಲ ಬಾರಿಗೆ ಹಗಲು ರಾತ್ರಿ ಟೆಸ್ಟ್‌ ಪಂದ್ಯವನ್ನು ಆಯೋಜಿಸಲಾಗುತ್ತಿದೆ. ಬಾಂಗ್ಲಾದೇಶ ತಂಡದೆದುರು ಇದೇ 22 ರಿಂದ ಆರಂಭವಾಗಲಿರುವ ಈ ಐತಿಹಾಸಿಕ ಪಂದ್ಯಕ್ಕೆ ಪಿಂಕ್‌(ಗುಲಾಬಿ/ನಸುಗೆಂಪು) ಬಣ್ಣದ ಚೆಂಡು ಬಳಕೆ ಮಾಡುತ್ತಿರುವುದು ವಿಶೇಷ.

ಗುಣಮಟ್ಟಕ್ಕೆ ಸಂಬಂಧಿಸಿದಂತೆ ಸಾಕಷ್ಟು ತಕರಾರುಗಳಿದ್ದರೂ ಈ ಪಂದ್ಯದಲ್ಲಿ ಪಿಂಕ್‌ ಚೆಂಡನ್ನೇ ಬಳಸಲಾಗುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಹಗಲು–ರಾತ್ರಿ ಪಂದ್ಯಗಳನ್ನು ಆಡಿದ್ದರೂ, ಇದೇ ಮೊದಲ ಸಲ ರಾತ್ರಿ ಟೆಸ್ಟ್‌ ಆಡಲಿರುವುದರಿಂದ  ಉಭಯ ತಂಡದ ಆಟಗಾರರು ಸಹಜವಾಗಿಯೇ ಪುಳಕಗೊಂಡಿದ್ದಾರೆ.

ಇದನ್ನೂ ಓದಿ: ಹಗಲು–ರಾತ್ರಿ ಟೆಸ್ಟ್‌ಗೆ ಸಿದ್ಧತೆ: 72ಪಿಂಕ್ ಬಾಲ್‌ಗಳಿಗೆ ಆರ್ಡರ್ ಮಾಡಿದ ಬಿಸಿಸಿಐ

ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಪಂದ್ಯಕ್ಕೆ ಭರದಿಂದ ಸಿದ್ಧತೆ ನಡೆದಿವೆ. ಎರಡೂ ತಂಡದವರು ಸತತ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಎಲ್ಲರಿಗೂ ನಿಂತಲ್ಲಿ ಕೂತಲ್ಲಿ ಗುಲಾಬಿಯದೇ ಗುಂಗು. ಉಳಿದೆಲ್ಲರಿಗಿಂತ ಚೂರು ಮುಂದೆ ಹೋಗಿರುವ ಭಾರತ ತಂಡದ ಉಪನಾಯಕ ಅಜಿಂಕ್ಯ ರಹಾನೆ, ಕನಸಿನಲ್ಲೂ ಪಿಂಕ್‌ ಬಾಲ್‌ ಟೆಸ್ಟ್‌ ಬಗ್ಗೆ ಕನವರಿಸುತ್ತಿದ್ದಾರಂತೆ.

ತಾವು ಹಾಸಿಗೆ ಮೇಲೆ ಮಲಗಿರುವ ಚಿತ್ರವನ್ನು ಇನ್‌ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡಿರುವ ರಹಾನೆ, ‘ಐತಿಹಾಸಿಕ ಪಿಂಕ್‌ ಟೆಸ್ಟ್‌ ಬಗ್ಗೆ ನಾನು ಈಗಾಗಲೇ ಕನಸು ಕಾಣುತ್ತಿದ್ದೇನೆ’ ಬರೆದುಕೊಂಡಿದ್ದಾರೆ.

 
 
 
 

 
 
 
 
 
 
 
 
 

Already dreaming about the historic pink ball test 😊

A post shared by Ajinkya Rahane (@ajinkyarahane) on

 

ಈ ಚಿತ್ರ ಇದೀಗ ಸಾಕಷ್ಟು ವೈರಲ್‌ ಆಗಿದ್ದು, 25 ಲಕ್ಷಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, ಸಹ ಆಟಗಾರ ಶಿಖರ್‌ ಧವನ್‌ ಸೇರಿದಂತೆ ಹಲವರು ಪ್ರತಿಕ್ರಿಯಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು
ಹೊನಲು–ಬೆಳಕಿನ ಟೆಸ್ಟ್‌ಗೆ ಕೊಹ್ಲಿ ಒಪ್ಪಿಗೆ: ಗಂಗೂಲಿ
ಮೊದಲ ಸಲ ಪಿಂಕ್ ಬಾಲ್ ಎದುರಿಸಿದ ವಿರಾಟ್!
ನವೆಂಬರ್ 22ರಿಂದ  ಡೇ ಆ್ಯಂಡ್ ನೈಟ್ ಟೆಸ್ಟ್: ಗಂಗೂಲಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು