ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG 3rd Test: ಬೃಹತ್ ಮುನ್ನಡೆಯತ್ತ ಇಂಗ್ಲೆಂಡ್

Last Updated 26 ಆಗಸ್ಟ್ 2021, 13:00 IST
ಅಕ್ಷರ ಗಾತ್ರ

ಲೀಡ್ಸ್: ಇಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಎದುರಾಳಿ ಭಾರತ ತಂಡವನ್ನು ಕೇವಲ 78 ರನ್ನಿಗೆ ಕಟ್ಟಿ ಹಾಕಿರುವ ಆಂಗ್ಲರ ಪಡೆ ದಿಟ್ಟ ಉತ್ತರವನ್ನೇ ನೀಡುತ್ತಿದೆ.

ಎರಡನೇ ದಿನದಾಟದಲ್ಲಿ ಊಟದ ವಿರಾಮ ಹೊತ್ತಿಗೆ 68 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿ ಸುಸ್ಥಿತಿಯಲ್ಲಿದೆ.

ಈ ಮೂಲಕ 104 ರನ್‌ಗಳ ಮುನ್ನಡೆ ಗಳಿಸಿದ್ದು, ಬೃಹತ್ ಮೊತ್ತದತ್ತ ದಾಪುಗಾಲನ್ನಿಟ್ಟಿದೆ.

ಆಕರ್ಷಕ ಅರ್ಧಶತಕಗಳನ್ನು ಬಾರಿಸಿರುವ ಆರಂಭಿಕರಾದ ರೋರಿ ಬರ್ನ್ಸ್ ಹಾಗೂ ಹಸೀಬ್ ಹಮೀದ್ ವಿಕೆಟ್‌ಗಳು ಆತಿಥೇಯರಿಗೆ ನಷ್ಟವಾಗಿದೆ. ಈ ಎರಡು ವಿಕೆಟ್‌ಗಳನ್ನು ಮೊಹಮ್ಮದ್ ಶಮಿ ಹಾಗೂ ರವೀಂದ್ರ ಜಡೇಜ ಹಂಚಿದರು.

153 ಎಸೆತಗಳನ್ನು ಎದುರಿಸಿದ ಬರ್ನ್ಸ್ ಆರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 61 ರನ್ ಗಳಿಸಿದರು. ಇನ್ನೊಂದೆಡೆ ಹಮೀದ್ 195 ಎಸೆತಗಳಲ್ಲಿ 12 ಬೌಂಡರಿಗಳ ನೆರವಿನಿಂದ 68 ರನ್ ಗಳಿಸಿದರು.

ಈಗ ಕ್ರೀಸಿನಲ್ಲಿರುವ ಡೇವಿಡ್ ಮಲನ್ (27*) ಹಾಗೂ ನಾಯಕ ಜೋ ರೂಟ್ (14*) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಮೊದಲ ದಿನದಾಟದಲ್ಲಿ ಜೇಮ್ಸ್ ಆ್ಯಂಡರ್ಸನ್ (6ಕ್ಕೆ 3 ವಿಕೆಟ್) ಹಾಗೂ ಕ್ರೇಗ್ ಓವರ್ಟನ್ (14ಕ್ಕೆ 3 ವಿಕೆಟ್) ದಾಳಿಗೆ ನಲುಗಿದಭಾರತ 40.4 ಓವರ್‌ಗಳಲ್ಲಿ 78 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT