ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG: 700 ವಿಕೆಟ್‌ ಪಡೆದ ವಿಶ್ವದ ಮೊದಲ ವೇಗಿ ಜೇಮ್ಸ್ ಆ್ಯಂಡರ್ಸನ್

Published 9 ಮಾರ್ಚ್ 2024, 6:28 IST
Last Updated 9 ಮಾರ್ಚ್ 2024, 6:28 IST
ಅಕ್ಷರ ಗಾತ್ರ

ಧರ್ಮಶಾಲಾ: ಇಂಗ್ಲೆಂಡ್‌ನ ವೇಗದ ಬೌಲರ್ ಜೇಮ್ಸ್ ಆ‌್ಯಂಡರ್‌ಸನ್ ಟೆಸ್ಟ್ ಕ್ರಿಕೆಟ್‌ನಲ್ಲಿ 700 ವಿಕೆಟ್‌ಗಳನ್ನು ಪಡೆಯುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೊದಲ ವೇಗದ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಮತ್ತು ಆಸ್ಟ್ರೇಲಿಯಾದ, ದಿವಂಗತ ಶೇನ್ ವಾರ್ನ್ ಅವರ ಬಳಿಕ 700 ವಿಕೆಟ್ ಗಡಿ ದಾಟಿದ ಮೂರನೇ ಬೌಲರ್ ಆಗಿದ್ದಾರೆ. ಸ್ಪಿನ್‌ ಮಾಂತ್ರಿಕರಾದ ಮುರಳೀಧರನ್ 800, ಶೇನ್ ವಾರ್ನ್ 708 ವಿಕೆಟ್‌ ಪಡೆದಿದ್ದಾರೆ.

ಭಾರತ ವಿರುದ್ದ ನಡೆಯುತ್ತಿರುವ ಐದನೇ ಟೆಸ್ಟ್‌ ಪಂದ್ಯದಲ್ಲಿ ಜೇಮ್ಸ್ ಆ‌್ಯಂಡರ್‌ಸನ್ ಈ ಸಾಧನೆ ಮಾಡಿದ್ದಾರೆ. ಪಂದ್ಯದ ಎರಡನೇ ದಿನವಾದ ನಿನ್ನೆ ಶುಭಮನ್‌ ಗಿಲ್ ವಿಕೆಟ್ ಪಡೆಯುವ ಮೂಲಕ 699 ವಿಕೆಟ್‌ಗಳ ಸಂಪಾದಿಸಿದ್ದರು. ಮೂರನೇ ದಿನವಾದ ಶನಿವಾರ ಕುಲದೀಪ್ ಯಾದವ್ ವಿಕೆಟ್‌ ಪಡೆಯುವ ಮೂಲಕ 700 ವಿಕೆಟ್‌ಗಳನ್ನು ಪಡೆದ ಶ್ರೇಯಕ್ಕೆ ಪಾತ್ರರಾದರು. 

41 ವರ್ಷದ ಆ್ಯಂಡರ್ಸನ್ ಈಗಲೂ ಇಂಗ್ಲೆಂಡ್ ತಂಡದ ಬೌಲಿಂಗ್ ವಿಭಾಗದ ಮುಂದಾಳು. 2002ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯವಾಡುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಅಡಿ ಇರಿಸಿದರು. 2003ರಲ್ಲಿ ಅವರು ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು. ಇದುವರೆಗೆ ಇಂಗ್ಲೆಂಡ್​ ಪರ ಅವರು 186 ಟೆಸ್ಟ್​ ಪಂದ್ಯಗಳನ್ನು ಆಡಿ 700 ವಿಕೆಟ್​ ಪಡೆದಿದ್ದಾರೆ. 

ಟೆಸ್ಟ್​ನಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಬೌಲರ್​ಗಳ ಪಟ್ಟಿಯಲ್ಲಿ ಭಾರತದ ಅನಿಲ್ ಅನಿಲ್ ಕುಂಬ್ಳೆ 619 ವಿಕೆಟ್‌ ಪಡೆದು ನಾಲ್ಕನೇ ಸ್ಥಾನದಲ್ಲಿದ್ದಾರೆ. ರವಿಚಂದ್ರನ್ ಅಶ್ವಿನ್ ಅವರು 511 ವಿಕೆಟ್‌ಗಳ ಮೂಲಕ 9ನೇ ಸ್ಥಾನದಲ್ಲಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT