IND vs NZ: ಸೂರ್ಯ ಶತಕದ ಅಬ್ಬರ, ಹೂಡಾಗೆ 4 ವಿಕೆಟ್, ಭಾರತಕ್ಕೆ ಗೆಲುವು

ಮೌಂಟ್ ಮಾಂಗನೂಯಿ: ಸೂರ್ಯಕುಮಾರ್ ಯಾದವ್ (ಅಜೇಯ 111) ಅಮೋಘ ಶತಕ ಹಾಗೂ ದೀಪಕ್ ಹೂಡಾ (10ಕ್ಕೆ 4 ವಿಕೆಟ್) ನೆರವಿನಿಂದ ಟೀಮ್ ಇಂಡಿಯಾ, ಆತಿಥೇಯ ನ್ಯೂಜಿಲೆಂಡ್ ವಿರುದ್ಧ ನಡೆದ ಎರಡನೇ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ 65 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡವು ಸೂರ್ಯಕುಮಾರ್ ಯಾದರ್ ಅವರ ಅಜೇಯ ಶತಕದ ಬಲದಿಂದ ಆರು ವಿಕೆಟ್ ನಷ್ಟಕ್ಕೆ 191 ರನ್ ಪೇರಿಸಿತ್ತು. ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ 18.5 ಓವರ್‌ಗಳಲ್ಲಿ 126 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.
ಕಿವೀಸ್ ಪರ ನಾಯಕ ಕೇನ್ ವಿಲಿಯಮ್ಸನ್ ಗರಿಷ್ಠ 61 ರನ್ ಗಳಿಸಿದರು. ಅಲ್ಲದೆ ಟಿಮ್ ಸೌಥಿ ಹ್ಯಾಟ್ರಿಕ್ ವಿಕೆಟ್ ಸಾಧನೆ ವ್ಯರ್ಥವೆನಿಸಿತು.
ಡೆವೊನ್ ಕಾನ್ವೇ (25), ಗ್ಲೆನ್ ಪಿಲಿಪ್ಸ್ (12), ಡೆರಿಲ್ ಮಿಚೆಲ್ (10), ಜೇಮ್ಸ್ ನೀಶಮ್ (0) ಹಾಗೂ ಫಿನ್ ಅಲೆನ್ (0) ನಿರಾಸೆ ಅನುಭವಿಸಿದರು.
ಭಾರತದ ಪರ ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದ ದೀಪಕ್ ಹೂಡಾ 2.5 ಓವರ್‌ಗಳಲ್ಲಿ ಕೇವಲ 10 ರನ್ ತೆತ್ತು ನಾಲ್ಕು ವಿಕೆಟ್ ಕಬಳಿಸಿ ಮಿಂಚಿದರು.
A well deserved Player of the Match award for @surya_14kumar as #TeamIndia win by 65 runs in the 2nd T20I 👏👏
Scorecard - https://t.co/OvmynDiyd8 #NZvIND pic.twitter.com/TuYSRsIIgQ
— BCCI (@BCCI) November 20, 2022
ಈಗ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಬಳಗ 1-0 ಅಂತರದ ಮುನ್ನಡೆ ಸಾಧಿಸಿದೆ. ಟಿ20 ಸರಣಿಯ ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಕೊನೆಯ ಪಂದ್ಯ ನೇಪಿಯರ್‌ನಲ್ಲಿ ಮಂಗಳವಾರ ನಡೆಯಲಿದೆ.
ಈ ಮೊದಲು ಕೇವಲ 49 ಎಸೆತಗಳಲ್ಲಿ ಶತಕ ಗಳಿಸಿದ ಸೂರ್ಯಕುಮಾರ್ ಯಾದವ್ ನೆರವಿನಿಂದ ಟೀಮ್ ಇಂಡಿಯಾ ಆರು ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು.
ಭಾರತದ ಆರಂಭ ಉತ್ತಮವಾಗಿರಲಿಲ್ಲ. ರಿಷಭ್ ಪಂತ್ 13 ಎಸೆತಗಳಲ್ಲಿ 6 ರನ್ ಗಳಿಸಿ ಔಟ್ ಆದರು. ಇಶಾನ್ ಕಿಶನ್ 36 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು.
ಈ ನಡುವೆ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಬಳಿಕ ಪಂದ್ಯ ಪುನರಾರಂಭಗೊಂಡಾಗ ಸೂರ್ಯಕುಮಾರ್ ಅಬ್ಬರಿಸಿದರು.
ಕಿವೀಸ್ ಬೌಲರ್‌ಗಳನ್ನು ದಂಡಿಸಿದ ಸೂರ್ಯಕುಮಾರ್ 51 ಎಸೆತಗಳಲ್ಲಿ 111 ರನ್ ಗಳಿಸಿ ಔಟಾಗದೆ ಉಳಿದರು. ಅವರ ಇನ್ನಿಂಗ್ಸ್‌ನಲ್ಲಿ ಏಳು ಸಿಕ್ಸರ್ ಹಾಗೂ 11 ಬೌಂಡರಿಗಳು ಸೇರಿದ್ದವು.
ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಶ್ರೇಯಸ್ ಅಯ್ಯರ್ ತಲಾ 13 ರನ್ ಗಳಿಸಿದರು. ದೀಪಕ್ ಹೂಡಾ ಹಾಗೂ ವಾಷಿಂಗ್ಟನ್ ಸುಂದರ್ ಅವರಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.
ನ್ಯೂಜಿಲೆಂಡ್ ಪರ ಟಿಮ್ ಸೌಥಿ ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದರು.
A convincing victory for #TeamIndia as they beat New Zealand by 65 runs with 7 deliveries to spare.
India lead the series 1-0.
Scorecard - https://t.co/mIKkpD4WmZ #NZvIND pic.twitter.com/BQXGGGgbx5
— BCCI (@BCCI) November 20, 2022
ಸ್ಕೋರ್ ಕಾರ್ಡ್
ಭಾರತ 6ಕ್ಕೆ 191 (20 ಓವರ್)
ಇಶಾನ್ ಸಿ ಸೌಥಿ ಬಿ ಸೋಧಿ 36 (31ಎ, 4X5, 6X1), ರಿಷಭ್ ಸಿ ಸೌಥಿ ಬಿ ಫರ್ಗ್ಯುಸನ್ 6 (13ಎ, 4X1), ಸೂರ್ಯಕುಮಾರ್ ಔಟಾಗದೆ 111 (51ಎ, 4X11, 6X7), ಶ್ರೇಯಸ್ ಹಿಟ್ವಿಕೆಟ್ ಬಿ ಫರ್ಗ್ಯುಸನ್ 13 (9ಎ, 4X1, 6X1), ಹಾರ್ದಿಕ್ ಸಿ ನೀಶಾಮ್ ಬಿ ಸೌಥಿ 13 (13ಎ), ಹೂಡಾ ಸಿ ಫರ್ಗ್ಯುಸನ್ ಬಿ ಸೌಥಿ 0 (1ಎ), ಸುಂದರ್ ಸಿ ನೀಶಾಮ್ ಬಿ ಸೌಥಿ 0 (1ಎ), ಭುವನೇಶ್ವರ್ ಔಟಾಗದೆ 1 (1ಎ)
ಇತರೆ 11 (ಲೆಗ್ಬೈ 2, ವೈಡ್ 9)ವಿಕೆಟ್ ಪತನ: 1-36 (ರಿಷಭ್ ಪಂತ್, 5.1), 2-69 (ಇಶಾನ್ ಕಿಶನ್, 9.1), 3-108 (ಶ್ರೇಯಸ್ ಅಯ್ಯರ್, 12.4), 4-190 (ಹಾರ್ದಿಕ್ ಪಾಂಡ್ಯ, 19.3), 5-190 (ದೀಪಕ್ ಹೂಡಾ, 19.4), 6-190 (ವಾಷಿಂಗ್ಟನ್ ಸುಂದರ್, 19.5)
ಬೌಲಿಂಗ್: ಟಿಮ್ ಸೌಥಿ 4–0–34–3, ಆ್ಯಡಂ ಮಿಲ್ನೆ 4–0–35–0, ಲಾಕಿ ಫರ್ಗ್ಯುಸನ್ 4–0–49–2, ಜೇಮ್ಸ್ ನೀಶಾಮ್ 1–0–9–0, ಇಶ್ ಸೋಧಿ 4–0–35–1, ಮಿಚೆಲ್ ಸ್ಯಾಂಟ್ನರ್ 3–0–27–0
ನ್ಯೂಜಿಲೆಂಡ್ 126 (18.5 ಓವರ್)
ಫಿನ್ ಸಿ ಅರ್ಷದೀಪ್ ಬಿ ಭುವನೇಶ್ವರ್ 0 (2ಎ), ಡೆವೊನ್ ಸಿ ಆರ್ಷದೀಪ್ ಬಿ ಸುಂದರ್ 25 (22ಎ, 4X3), ಕೇನ್ ಬಿ ಸಿರಾಜ್ 61 (52ಎ, 4X4, 6X2), ಫಿಲಿಪ್ಸ್ ಬಿ ಯಜುವೇಂದ್ರ 12 (6ಎ, 4X1, 6X1), ಡೆರಿಲ್ ಸಿ ಶ್ರೇಯಸ್ ಬಿ ಹೂಡಾ 10 (11ಎ), ನೀಶಾಮ್ ಸಿ ಇಶಾನ್ ಬಿ ಯಜುವೇಂದ್ರ 0 (3ಎ), ಸ್ಯಾಂಟ್ನರ್ ಸಿ ಮತ್ತು ಬಿ ಸಿರಾಜ್ 2 (7ಎ), ಆ್ಯಡಂ ಸಿ ಆರ್ಷದೀಪ್ ಬಿ ಹೂಡಾ 6 (5ಎ, 6X1), ಸೋಧಿ ಸ್ಪಂಪ್ಡ್ ರಿಷಭ್ ಬಿ ಹೂಡಾ 0 (1ಎ), ಸೌಥಿ ಸಿ ಪಂತ್ ಬಿ ಹೂಡಾ 0 (1ಎ), ಫರ್ಗ್ಯುಸನ್ ಔಟಾಗದೆ 1 (1ಎ)
ಇತರೆ 8 (ಲೆಗ್ಬೈ 1, ವೈಡ್ 7)
ವಿಕೆಟ್ ಪತನ: 1-0 (ಫಿನ್ ಅಲೆನ್, 0.2), 2-56 (ಡೆವೊನ್ ಕಾನ್ವೆ, 8.1), 3-69 (ಗ್ಲೆನ್ ಫಿಲಿಪ್ಸ್, 9.3), 4-88 (ಡೆರಿಲ್ ಮಿಚೆಲ್, 12.5), 5-89 (ಜೇಮ್ಸ್ ನೀಶಾಮ್, 13.3), 6-99 (ಮಿಚೆಲ್ ಸ್ಯಾಂಟ್ನರ್, 15.5), 7-124 (ಕೇನ್ ವಿಲಿಯಮ್ಸನ್, 17.5), 8-125 (ಇಶ್ ಸೋಧಿ, 18.2), 9-125 (ಟಿಮ್ ಸೋಧಿ, 18.3), 10-126 (ಆ್ಯಡಂ ಮಿಲ್ನೆ, 18.5)
ಬೌಲಿಂಗ್: ಭುವನೇಶ್ವರ್ ಕುಮಾರ್ 3–0–12–1, ಆರ್ಷದೀಪ್ ಸಿಂಗ್ 3–0–29–0, ಮೊಹಮ್ಮದ್ ಸಿರಾಜ್ 4–1–24–2, ವಾಷಿಂಗ್ಟನ್ ಸುಂದರ್ 2–0–24–1, ಯಜುವೇಂದ್ರ ಚಾಹಲ್ 4–0–26–2, ದೀಪಕ್ ಹೂಡಾ 2.5–0–10–4
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.