ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜಿಲೆಂಡ್‌ಗೆ ಎದುರಾದ ‘ಸೂಪರ್’ ಸೋಲುಗಳಿವು

ಅಕ್ಷರ ಗಾತ್ರ
ADVERTISEMENT
""
""
""

ವೆಲ್ಲಿಂಗ್ಟನ್‌:ಭಾರತ ವಿರುದ್ಧತವರಿನಲ್ಲಿ ನಡೆಯುತ್ತಿರುವ ಐದು ಪಂದ್ಯಗಳ ಚುಟುಕು ಕ್ರಿಕೆಟ್‌ ಸರಣಿಯನ್ನು 4–0 ಅಂತರದಿಂದ ಸೋತಿರುವ ನ್ಯೂಜಿಲೆಂಡ್‌ ತಂಡ ಎರಡು ಪಂದಗಳನ್ನು ಸೂಪರ್‌ ಓವರ್‌ನಲ್ಲಿ ಕಳೆದುಕೊಂಡಿದೆ. ಈ ತಂಡ ಇದುವರೆಗೆ ಎಂಟು ಬಾರಿ ಸೂಪರ್‌ ಓವರ್‌ನಲ್ಲಿ ಸೆಣಸಿದ್ದು, ಕೇವಲ ಒಂದೇಒಂದರಲ್ಲಷ್ಟೇ ಗೆಲುವು ಸಾಧಿಸಿದೆ.

ನ್ಯೂಜಿಲೆಂಡ್ ಆಡಿದ ಎಲ್ಲ ಸೂಪರ್‌ ಓವರ್‌ ಪಂದ್ಯಗಳ ವಿವರ ಇಲ್ಲಿದೆ.

**

ಡಿಸೆಂಬರ್‌ 26, 2008:ವಿಂಡೀಸ್‌ ವಿರುದ್ಧ ಟಿ20 ಪಂದ್ಯದಲ್ಲಿ ಸೋಲು
ಆಕ್ಲೆಂಡ್‌ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್‌, ರಾಸ್ ಟೇಲರ್‌ (63) ಅರ್ಧಶತಕದ ನೆರವಿನಿಂದನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 155 ರನ್‌ ಗಳಿಸಿತ್ತು.

ಈ ಮೊತ್ತ ಬೆನ್ನಟ್ಟಿದ್ದ ವೆಸ್ಟ್‌ ಇಂಡೀಸ್‌, ಕ್ರಿಸ್‌ ಗೇಲ್‌ (67) ಅರ್ಧಶತಕದ ಹೊರತಾಗಿಯೂ ಇಷ್ಟೇ ರನ್‌ ಗಳಿಸಿತ್ತು.ಹೀಗಾಗಿ ಸೂಪರ್ ಓವರ್‌ ನಡೆದಿತ್ತು.

ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್‌ ಕ್ರಿಸ್‌ ಗೇಲ್‌ ಮತ್ತುಕ್ಸೇವಿಯರ್‌ ಮಾರ್ಷಲ್‌ ಕ್ರೀಸ್‌ಗಿಳಿಸಿತ್ತು.ಡೆನಿಯಲ್‌ ವೆಟೋರಿ ಎಸೆದ ಓವರ್‌ನ ಆರೂ ಎಸೆತಗಳನ್ನು ಆಡಿದ ಗೇಲ್‌ಮೂರು ಸಿಕ್ಸರ್‌ಹಾಗೂ 1ಬೌಂಡರಿ ಸಹಿತ 25 ರನ್ ಚಚ್ಚಿದ್ದರು.

ಬಳಿಕ ಸುಲೇಮಾನ್‌ ಬೆನ್‌ ಎಸೆದ ಓವರ್‌ನನಾಲ್ಕು ಎಸೆತಗಳಲ್ಲೇ 2 ವಿಕೆಟ್‌ ಕಳೆದುಕೊಂಡಕಿವೀಸ್‌, 15 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ವೆಸ್ಟ್‌ ಇಂಡೀಸ್‌ ಬ್ಯಾಟಿಂಗ್‌: 25 ರನ್‌
ಬೌಲರ್:ಡೆನಿಯಲ್‌ ವೆಟೋರಿ

1ನೇ ಎಸೆತ:ಕ್ರಿಸ್‌ ಗೇಲ್‌, 6
2ನೇ ಎಸೆತ:ಕ್ರಿಸ್‌ ಗೇಲ್‌,1 + ಕ್ಸೇವಿಯರ್‌ ಮಾರ್ಷಲ್‌ರನೌಟ್‌
3ನೇ ಎಸೆತ: ಕ್ರಿಸ್‌ ಗೇಲ್‌, 6
4ನೇ ಎಸೆತ: ಕ್ರಿಸ್‌ ಗೇಲ್‌, 6
5ನೇ ಎಸೆತ: ಕ್ರಿಸ್‌ ಗೇಲ್‌, 4
6ನೇ ಎಸೆತ: ಕ್ರಿಸ್‌ ಗೇಲ್‌, 2

ನ್ಯೂಜಿಲೆಂಡ್‌ ಬ್ಯಾಟಿಂಗ್‌: 2 ವಿಕೆಟ್‌ಗೆ 15 ರನ್‌
ಬೌಲರ್: ಸುಲೇಮಾನ್‌ ಬೆನ್‌

1ನೇ ಎಸೆತ: ಜೇಕಬ್‌ ಓರಮ್‌, 6
1ನೇ ಎಸೆತ:ಜೇಕಬ್‌ ಓರಮ್‌, 2
3ನೇ ಎಸೆತ: ಜೇಕಬ್‌ ಓರಮ್‌, ಔಟ್‌
4ನೇ ಎಸೆತ: ರಾಸ್‌ ಟೇಲರ್‌, ನೋಬಾಲ್‌ +6
4ನೇ ಎಸೆತ: ರಾಸ್‌ ಟೇಲರ್‌, ಔಟ್‌

**

ಫೆಬ್ರುವರಿ 28, 2010: ಆಸ್ಟ್ರೇಲಿಯಾ ವಿರುದ್ಧಟಿ20 ಪಂದ್ಯದಲ್ಲಿ ಗೆಲುವು
ನ್ಯೂಜಿಲೆಂಡ್‌ನ ಕ್ರೈಸ್ಟ್‌ ಚರ್ಚ್‌ನಲ್ಲಿ ನಡೆದ ಪಂದ್ಯದಲ್ಲಿ ಬ್ರೆಂಡಮ್‌ ಮೆಕಲಮ್‌ (116)ಶತಕ ಸಿಡಿಸಿದ್ದರು. ಅವರ ಬ್ಯಾಟಿಂಗ್ ಬಲದಿಂದ ಕಿವೀಸ್‌ ಬಳಗ 20 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 214 ರನ್‌ ಕಲೆಹಾಕಿತ್ತು. ಈ ಮೊತ್ತ ಬೆನ್ನಟ್ಟಿದ್ದ ಆಸ್ಟ್ರೇಲಿಯಾ, ಮೈಕಲ್‌ ಕ್ಲಾರ್ಕ್‌ (67), ಕೆಮರೂನ್‌ ವೈಟ್‌ (64) ಅರ್ಧಶತಕಗಳ ನೆರವಿನಿಂದ 214 ರನ್‌ ಗಳಿಸಿ ಪಂದ್ಯ ಟೈ ಮಾಡಿಕೊಂಡಿತ್ತು.

ಹೀಗಾಗಿ ನಡೆದ ಸೂಪರ್‌ ಓವರ್‌ನಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ಒಂದು ವಿಕೆಟ್‌ ಕಳೆದುಕೊಂಡು6 ರನ್‌ ಗಳಿಸಿತ್ತು. ಕಿವೀಸ್‌ ಪರಟಿಮ್‌ ಸೌಥಿ ಬೌಲಿಂಗ್ ಮಾಡಿದ್ದರು. ಈ ಮೊತ್ತವನ್ನು ಮೂರೇ ಎಸೆತಗಳಲ್ಲಿ ಗಳಿಸಿತು.

ಆಸ್ಟ್ರೇಲಿಯಾ ಬ್ಯಾಟಿಂಗ್‌: 1 ವಿಕೆಟ್‌ಗೆ 6 ರನ್‌
ಬೌಲರ್: ಟಿಮ್‌ ಸೌಥಿ

1ನೇ ಎಸೆತ:ಕೆಮರೂನ್‌ ವೈಟ್‌, 2
2ನೇ ಎಸೆತ:ಕೆಮರೂನ್‌ ವೈಟ್‌, 1
3ನೇ ಎಸೆತ: ಡೇವಿಡ್ ವಾರ್ನರ್‌, 0
4ನೇ ಎಸೆತ:ಡೇವಿಡ್ ವಾರ್ನರ್‌,ಔಟ್‌
5ನೇ ಎಸೆತ:ಕೆಮರೂನ್‌ ವೈಟ್‌, 1
6ನೇ ಎಸೆತ:ಬ್ರಾಡ್ ಹಡ್ಡಿನ್‌, 2

ನ್ಯೂಜಿಲೆಂಡ್‌ ಬ್ಯಾಟಿಂಗ್‌: 9 ರನ್‌
ಬೌಲರ್: ಶಾನ್‌ ಟೈಟ್‌

1ನೇಎಸೆತ: ಬ್ರೆಂಡನ್‌ ಮೆಕಲಮ್‌, 1
2ನೇ ಎಸೆತ:ಮಾರ್ಟಿನ್‌ ಗಪ್ಟಿಲ್‌, ವೈಡ್‌
2ನೇ ಎಸೆತ:ಮಾರ್ಟಿನ್‌ ಗಪ್ಟಿಲ್‌, 1
3ನೇ ಎಸೆತ:ಬ್ರೆಂಡನ್‌ ಮೆಕಲಮ್‌, ವೈಡ್‌ +1
3ನೇ ಎಸೆತ:ಮಾರ್ಟಿನ್‌ ಗಪ್ಟಿಲ್‌, 4

**

ಸೆಪ್ಟೆಂಬರ್‌ 27, 2012: ಶ್ರೀಲಂಕಾ ವಿರುದ್ಧಟಿ20 ಪಂದ್ಯದಲ್ಲಿ ಸೋಲು
ಶ್ರೀಲಂಕಾದ ಪಲ್ಲಿಕಲೆಯಲ್ಲಿ ನಡೆದವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್‌ 7 ವಿಕೆಟ್‌ಗೆ 174 ರನ್‌ ಗಳಿಸಿತ್ತು.ಲಂಕಾ ಪಡೆಯೂ ಇಷ್ಟೇ ರನ್‌ ಗಳಿಸಿದ್ದರಿಂದ ಪಂದ್ಯ ಟೈ ಆಗಿತ್ತು.

ನಂತರ ನಡೆದ ಸೂಪರ್‌ ಓವರ್‌ನಲ್ಲಿ ಲಂಕಾ 1 ವಿಕೆಟ್‌ ಕಳೆದುಕೊಂಡು 13 ರನ್‌ ಪೇರಿಸಿತು. ಇದಕ್ಕುತ್ತರವಾಗಿನ್ಯೂಜಿಲೆಂಡ್‌ ಒಂದು ವಿಕೆಟ್‌ ಕಳೆದುಕೊಂಡು 7 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಶ್ರೀಲಂಕಾ ಬ್ಯಾಟಿಂಗ್‌: 1 ವಿಕೆಟ್‌ಗೆ 13ರನ್‌
ಬೌಲರ್: ಟಿಮ್‌ ಸೌಥಿ

1ನೇ ಎಸೆತ: ಮಹೇಲಜಯವರ್ಧನೆ, 2
2ನೇ ಎಸೆತ: ಮಹೇಲಜಯವರ್ಧನೆ, 1
3ನೇ ಎಸೆತ: ತಿಸಾರ ಪೆರೇರಾ, ವೈಡ್‌ +1
3ನೇ ಎಸೆತ:ತಿಸಾರ ಪೆರೇರಾ, 2
4ನೇ ಎಸೆತ: ತಿಸಾರ ಪೆರೇರಾ, ವೈಡ್‌+ 1
4ನೇಎಸೆತ:ಮಹೇಲಜಯವರ್ಧನೆ, 1 + ರನೌಟ್‌
5ನೇ ಎಸೆತ:ತಿಲಕರತ್ನೆ ದಿಲ್ಶಾನ್‌, ಲೆಗ್‌ಬೈಸ್‌1
6ನೇ ಎಸೆತ:ತಿಸಾರ ಪೆರೇರಾ, 3

ನ್ಯೂಜಿಲೆಂಡ್‌ ಬ್ಯಾಟಿಂಗ್‌: 9 ರನ್‌
ಬೌಲರ್: ಲಸಿತ್‌ಮಾಲಿಂಗ

1ನೇ ಎಸೆತ: ಮಾರ್ಟಿನ್‌ ಗಪ್ಟಿಲ್‌, 2
2ನೇ ಎಸೆತ:ಮಾರ್ಟಿನ್‌ ಗಪ್ಟಿಲ್‌, 1
3ನೇ ಎಸೆತ:ಬ್ರೆಂಡನ್‌ ಮೆಕಲಮ್‌, ಬೈಸ್ 2
4ನೇಎಸೆತ:ಬ್ರೆಂಡನ್‌ ಮೆಕಲಮ್‌,1
5ನೇ ಎಸೆತ:ಮಾರ್ಟಿನ್‌ ಗಪ್ಟಿಲ್‌, ಔಟ್‌
6ನೇಎಸೆತ:ಬ್ರೆಂಡನ್‌ ಮೆಕಲಮ್‌, 1

**

ಅಕ್ಟೋಬರ್‌ 01, 2012:ವಿಂಡೀಸ್‌ ವಿರುದ್ಧ ಟಿ20 ಪಂದ್ಯದಲ್ಲಿ ಸೋಲು
ಶ್ರೀಲಂಕಾದ ಪಲ್ಲಿಕಲೆಯಲ್ಲಿ ನಡೆದ ಚುಟುಕು ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್‌ ಇಂಡೀಸ್‌ ತಂಡ 19.3 ಓವರ್‌ಗಳಲ್ಲಿ 139 ರನ್‌ ಗಳಿಸಿ ಆಲೌಟ್‌ ಆಗಿತ್ತು. ನ್ಯೂಜಿಲೆಂಡ್‌ನಿಗದಿತ 20 ಓವರ್‌ಗಳಲ್ಲಿ7 ವಿಕೆಟ್‌ ಕಳೆದುಕೊಂಡು 139 ರನ್‌ ಗಳಿಸಿತ್ತು.

ಹೀಗಾಗಿ ಸೂಪರ್‌ ಓವರ್‌ಗೆ ಹೋದ ಪಂದ್ಯದಲ್ಲಿ ಕಿವೀಸ್‌ ಸೋಲು ಕಂಡಿತ್ತು.

ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್‌ ಬೀಸಿದ ಕಿವೀಸ್‌17 ರನ್‌ ಗಳಿಸಿತ್ತು. ವಿಂಡೀಸ್‌ ಕೇವಲ 5 ಎಸೆತಗಳಲ್ಲೇ 19 ರನ್‌ ಗಳಿಸಿತು.

ನ್ಯೂಜಿಲೆಂಡ್‌ ಬ್ಯಾಟಿಂಗ್‌: 17ರನ್‌
ಬೌಲರ್: ಮರ್ಲಾನ್‌ ಸ್ಯಾಮುಯಲ್ಸ್‌

1ನೇ ಎಸೆತ: ರಾಸ್ ಟೇಲರ್‌,ವೈಡ್‌
1ನೇ ಎಸೆತ: ರಾಸ್ ಟೇಲರ್‌, 2
2ನೇ ಎಸೆತ:ರಾಸ್ ಟೇಲರ್‌, 1
3ನೇ ಎಸೆತ: ಬ್ರೆಂಡನ್‌ ಮೆಕಲಮ್‌, 1
4ನೇ ಎಸೆತ:ರಾಸ್ ಟೇಲರ್‌, 4
5ನೇ ಎಸೆತ: ರಾಸ್‌ ಟೇಲರ್‌, 6
6ನೇ ಎಸೆತ: ರಾಸ್‌ ಟೇಲರ್‌, 2

ವೆಸ್ಟ್‌ ಇಂಡೀಸ್‌ ಬ್ಯಾಟಿಂಗ್‌: 19 ರನ್‌
ಬೌಲರ್:ಟಿಮ್‌ ಸೌಥಿ

1ನೇ ಎಸೆತ:ಕ್ರಿಸ್‌ ಗೇಲ್‌,ನೋಬಾಲ್‌
1ನೇ ಎಸೆತ:ಕ್ರಿಸ್‌ ಗೇಲ್‌, 1
2ನೇ ಎಸೆತ:ಮರ್ಲಾನ್‌ ಸ್ಯಾಮುಯೆಲ್ಸ್‌, 2
3ನೇ ಎಸೆತ:ಮರ್ಲಾನ್‌ ಸ್ಯಾಮುಯೆಲ್ಸ್‌, 1
4ನೇ ಎಸೆತ: ಕ್ರಿಸ್‌ ಗೇಲ್‌,ವೈಡ್‌
4ನೇ ಎಸೆತ: ಕ್ರಿಸ್‌ ಗೇಲ್‌, 1
5ನೇ ಎಸೆತ: ಮರ್ಲಾನ್‌ ಸ್ಯಾಮುಯೆಲ್ಸ್‌, 6

**

ಜುಲೈ 14, 2019:ಇಂಗ್ಲೆಂಡ್‌ ವಿರುದ್ಧಏಕದಿನ ವಿಶ್ವಕಪ್‌ಪಂದ್ಯ
ಇಂಗ್ಲೆಂಡ್‌ನ ಲಾರ್ಡ್‌ನಲ್ಲಿ ಈ ಪಂದ್ಯ ನಡೆದಿತ್ತು. ಕ್ರಿಕೆಟ್‌ ಜಗತ್ತನ್ನೇ ತನ್ನತ್ತ ಸೆಳೆದುಕೊಂಡಿದ್ದ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕಿವೀಸ್‌ ಪಡೆ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 241 ರನ್‌ ಗಳಿಸಿತ್ತು. ಈ ಮೊತ್ತದೆದುರು ಅಮೋಘ ಆಟವಾಡಿದ್ದ ಬೆನ್‌ ಸ್ಟೋಕ್ಸ್‌ (84) ತಮ್ಮ ತಂಡದ ಮೊತ್ತವನ್ನು ಕಿವೀಸ್‌ ಮೊತ್ತಕ್ಕೆ ಸಮವಾಗಿಸಿದ್ದರು.

ಹೀಗಾಗಿ ಸೂಪರ್ ಓವರ್ ನಡೆದಿತ್ತು. ಕಿವೀಸ್‌ ಪರಟ್ರೆಂಟ್‌ ಬೌಲ್ಟ್‌ ಎಸೆದ ಓವರ್‌ನಲ್ಲಿ ಇಂಗ್ಲೆಂಡ್‌ 15 ರನ್‌ ಗಳಿಸಿತ್ತು. ಬಳಿಕ ಕಿವೀಸ್‌ ಕೂಡ ಇಷ್ಟೇ ರನ್‌ ಗಳಿಸಿತಾದರೂ ಪಂದ್ಯದಲ್ಲಿ ದಾಖಲಾದ ಬೌಂಡರಿ ಮತ್ತು ಸಿಕ್ಸರ್‌ ಆಧಾರದಲ್ಲಿ ಇಂಗ್ಲೆಂಡ್‌ಗೆ ಗೆಲುವು ನೀಡಲಾಯಿತು. ಈ ನಿರ್ಧಾರವನ್ನು ಅಭಿಮಾನಿಗಳೂ ವ್ಯಾಪಕವಾಗಿ ಟೀಕಿಸಿದರಾದರೂ, ಇಂಗ್ಲೆಂಡ್‌ ಚಾಂಪಿಯನ್‌ ಎನಿಸಿಕೊಂಡಿತು.

ವಿಶ್ವಕಪ್‌ ಸೋಲಿನ ಬಳಿಕ ನ್ಯೂಜಿಲೆಂಡ್‌ ತಂಡ

ಇಂಗ್ಲೆಂಡ್‌ ಬ್ಯಾಟಿಂಗ್‌: 15ರನ್‌
ಬೌಲರ್:ಜೋಫ್ರಾ ಆರ್ಚರ್

1ನೇ ಎಸೆತ:ಬೆನ್ ಸ್ಟೋಕ್ಸ್‌, 3
2ನೇ ಎಸೆತ:ಜಾಸ್‌ ಬಟ್ಲರ್‌, 1
3ನೇ ಎಸೆತ:ಬೆನ್ ಸ್ಟೋಕ್ಸ್‌, 4
4ನೇ ಎಸೆತ:ಬೆನ್ ಸ್ಟೋಕ್ಸ್‌, 1
5ನೇ ಎಸೆತ: ಜಾಸ್‌ ಬಟ್ಲರ್‌, 2
6ನೇ ಎಸೆತ:ಜಾಸ್‌ ಬಟ್ಲರ್‌, 4​​

ನ್ಯೂಜಿಲೆಂಡ್‌ ಬ್ಯಾಟಿಂಗ್‌: 15 ರನ್‌
ಬೌಲರ್: ಟ್ರೆಂಟ್‌ ಬೌಲ್ಟ್‌

1ನೇ ಎಸೆತ: ಜಿಮ್ಮಿ ನೀಶಮ್‌,ವೈಡ್‌
1ನೇ ಎಸೆತ:ಜಿಮ್ಮಿ ನೀಶಮ್‌,2
2ನೇ ಎಸೆತ:ಜಿಮ್ಮಿ ನೀಶಮ್‌,6
3ನೇ ಎಸೆತ: ಜಿಮ್ಮಿ ನೀಶಮ್‌, 2
4ನೇ ಎಸೆತ:ಜಿಮ್ಮಿ ನೀಶಮ್‌, 2
5ನೇ ಎಸೆತ: ಜಿಮ್ಮಿ ನೀಶಮ್‌, 1
6ನೇ ಎಸೆತ: ಮಾರ್ಟಿನ್‌ ಗಪ್ಟಿಲ್‌, 1 + ರನೌಟ್‌

**

ನವೆಂಬರ್ 10, 2019:ಇಂಗ್ಲೆಂಡ್‌ ವಿರುದ್ಧಟಿ20 ಪಂದ್ಯದಲ್ಲಿ ಸೋಲು
ಕೆಲವೇ ತಿಂಗಳ ಹಿಂದಷ್ಟೇ ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ ರೂಚಕ ‘ಟೈ’ ಕಂಡಿದ್ದ ನ್ಯೂಜಿಲೆಂಡ್‌ ಮತ್ತು ಇಂಗ್ಲೆಂಡ್‌ ತಂಡಗಳುಮತ್ತೊಮ್ಮೆ ಅಂತಹದೇ ಕ್ಷಣಕ್ಕೆ ಸಾಕ್ಷಿಯಾದವು.

ಕಿವೀಸ್‌ನ ಆಕ್ಲೆಂಡ್‌ನಲ್ಲಿ ನಡೆದ ಪಂದ್ಯವನ್ನು ಮಳೆಯಿಂದಾಗಿ 11 ಓವರ್‌ಗಳಿಗೆ ಇಳಿಸಲಾಗಿತ್ತು.ಮೊದಲು ಬ್ಯಾಟಿಂಗ್ ಮಾಡಿದ್ದ ಆತಿಥೇಯರು ನಿಗದಿತ 146ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿದ್ದರು. ಈ ಮೊತ್ತದೆದುರು ಡಿಟ್ಟ ಆಟವಾಡಿದ್ದಇಂಗ್ಲೆಂಡ್‌ ಮೊತ್ತ ಸಮ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಹೀಗಾಗಿ ನಡೆದ ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್‌ ಬೀಸಿದ ಇಂಗ್ಲೆಂಡ್‌ 17 ರನ್‌ ಗಳಿಸಿತು. ಇದಕ್ಕುತ್ತರವಾಗಿಕಿವೀಸ್‌ ಕೇವಲ ಎಂಟು ರನ್‌ ಗಳಿಸಿತು.

ಇಂಗ್ಲೆಂಡ್‌ ಬ್ಯಾಟಿಂಗ್‌: 17 ರನ್‌
ಬೌಲರ್: ಟಿಮ್‌ ಸೌಥಿ

1ನೇ ಎಸೆತ: ಜಾನಿ ಬೈರ್ಸ್ಟ್ರೋವ್‌, 1
2ನೇ ಎಸೆತ:ಇಯಾನ್‌ ಮಾರ್ಗನ್‌, 6
3ನೇ ಎಸೆತ:ಇಯಾನ್‌ ಮಾರ್ಗನ್‌, 1
4ನೇ ಎಸೆತ:ಜಾನಿ ಬೈರ್ಸ್ಟ್ರೋವ್‌, 6
5ನೇ ಎಸೆತ: ಜಾನಿ ಬೈರ್ಸ್ಟ್ರೋವ್‌, 1
6ನೇ ಎಸೆತ:ಇಯಾನ್‌ ಮಾರ್ಗನ್‌, 2

ನ್ಯೂಜಿಲೆಂಡ್‌ ಬ್ಯಾಟಿಂಗ್‌: 8 ರನ್‌
ಬೌಲರ್: ಕ್ರಿಸ್‌ ಜೋರ್ಡನ್‌

1ನೇ ಎಸೆತ: ಟಿಮ್‌ ಸೀಫರ್ಟ್‌, 2
2ನೇಎಸೆತ:ಟಿಮ್‌ ಸೀಫರ್ಟ್‌,ವೈಡ್‌
2ನೇ ಎಸೆತ:ಟಿಮ್‌ ಸೀಫರ್ಟ್‌, 4
3ನೇ ಎಸೆತ: ಟಿಮ್‌ ಸೀಫರ್ಟ್‌, 0
4ನೇ ಎಸೆತ:ಟಿಮ್‌ ಸೀಫರ್ಟ್‌, ಔಟ್‌
5ನೇ ಎಸೆತ: ಮಾರ್ಟಿನ್‌ ಗಪ್ಟಿಲ್‌, 1
6ನೇ ಎಸೆತ: ಕಾಲಿನ್‌ ಡಿ ಗ್ರಾಂಡ್‌ಹೋಮ್‌, 0

**

ಜನವರಿ 29,2020:ಭಾರತ ವಿರುದ್ಧ ಟಿ20 ಪಂದ್ಯದಲ್ಲಿ ಸೋಲು
ಐದು ಪಂದ್ಯಗಳ ಸರಣಿ ಮೊದಲೆರಡು ಪಂದ್ಯಗಳನ್ನು ಭಾರತ ಗೆದ್ದುಕೊಂಡಿದ್ದರಿಂದ, ಸರಣಿ ಜಯದ ಆಸೆ ಜೀವಂತವಾಗಿರಿಸಿಕೊಳ್ಳಲು ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡ ನ್ಯೂಜಿಲೆಂಡ್‌ಗೆ ಇತ್ತು. ಹಾಗಾಗಿ ಉಭಯ ತಂಡಗಳು ಜಿದ್ದಿಗೆ ಬಿದ್ದಂತೆ ಸೆಣಸಿದವು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ರೋಹಿತ್ ಶರ್ಮಾ ಅರ್ಧಶತಕದ ಬಲದಿಂದ 179 ರನ್‌ ಗಳಿಸಿತ್ತು. ಈ ಮೊತ್ತ ಬೆನ್ನಟ್ಟಿದ ಕಿವೀಸ್‌ಗೆ ನಾಯಕ ಕೇನ್‌ ವಿಲಿಯಮ್ಸನ್‌ ಬಲ ತುಂಬಿದ್ದರು.

ಮೊಹಮದ್ ಶಮಿ ಎಸೆದ ಕೊನೆಯ ಓವರ್‌ನಲ್ಲಿ ನ್ಯೂಜಿಲೆಂಡ್‌ ಗೆಲುವಿಗೆ 9 ರನ್‌ ಬೇಕಿತ್ತು. ವಿಲಿಯಮ್ಸನ್‌ ಮತ್ತು ಅನುಭವಿ ರಾಸ್‌ ಟೇಲರ್ (17) ಕ್ರೀಸ್‌ನಲ್ಲಿದ್ದರು. ಮೊದಲ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ ಟೇಲರ್‌ ಎರಡನೇ ಎಸೆತದಲ್ಲಿ 1 ರನ್‌ ಗಳಿಸಿದರು. ಕೊನೆಯ ನಾಲ್ಕು ಎಸೆತಗಳಲ್ಲಿ ಕೇವಲ ಎರಡು ರನ್‌ ಬೇಕಿದ್ದರಿಂದ, ಕಿವೀಸ್‌ ಪಡೆಗೆ ಗೆಲುವು ನಿಶ್ಚಿತ ಎನ್ನಲಾಗಿತ್ತು.

ಆದರೆ,95 ರನ್ ಗಳಿಸಿ ಶತಕದ ಸನಿಹವಿದ್ದ ವಿಲಿಯಮ್ಸನ್‌ ಮೂರನೇ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು. ನಾಲ್ಕನೇ ಎಸೆತದಲ್ಲಿ ರನ್‌ ಕದಿಯಲು ವಿಫಲವಾದ ಟಿಮ್ ಸೀಫರ್ಟ್‌ ನಂತರ ಒಂದು ರನ್‌ ಗಳಿಸಿದರು.ಕೊನೆ ಎಸೆತದಲ್ಲಿ ಟೇಲರ್‌ ವಿಕೆಟ್‌ ಒಪ್ಪಿಸಿದ್ದರಿಂದ ಟೈ ಆಯಿತು.

ಮೂರನೇ ಟಿ20 ಪಂದ್ಯದ ವೇಳೆ ಗಾಯಗೊಂಡ ಕೇನ್‌ ವಿಲಿಯಮ್ಸನ್‌

ಫಲಿತಾಂಶಕ್ಕಾಗಿ ಸೂಪರ್‌ ಓವರ್‌ಗೆ ಸಾಗಿದ ಪಂದ್ಯದಲ್ಲಿ ಭಾರತ ಪರ ಜಸ್‌ಪ್ರೀತ್‌ ಬೂಮ್ರಾ ಬೌಲಿಂಗ್ ಮಾಡಿದರು.ಈ ಓವರ್‌ನಲ್ಲಿ 4 ಎಸೆತ ಎದುರಿಸಿದ ಕೇನ್‌ ವಿಲಿಯಮ್ಸನ್‌ 11 ರನ್‌ ಗಳಿಸಿದರೆ, ಉಳಿದೆರಡು ಎಸೆತಗಳಲ್ಲಿ ಮಾರ್ಟಿನ್‌ ಗಪ್ಟಿಲ್‌ 5 ರನ್‌ ಬಾರಿಸಿದರು. ಹೀಗಾಗಿನ್ಯೂಜಿಲೆಂಡ್‌ 17 ರನ್‌ ಗಳಿಸಿಕೊಂಡಿತು.

ಈ ಗುರಿಯನ್ನು ಕಾಪಾಡಿಕೊಳ್ಳಲು ನ್ಯೂಜಿಲೆಂಡ್‌ ಪರ ಟಿಮ್‌ ಸೌಥಿ ಬೌಲಿಂಗ್ ಮಾಡಿದರು.ನಾಲ್ಕು ಎಸೆತಗಳನ್ನು ಎದುರಿಸಿದ ರೋಹಿತ್‌ ಶರ್ಮಾ 2 ಸಿಕ್ಸರ್ ಸಹಿತ 15 ರನ್‌ ಚಚ್ಚಿದರು. ಎರಡು ಎಸೆತಗಳನ್ನು ಆಡಿದ ಕೆ.ಎಲ್‌. ರಾಹುಲ್‌ 5 ರನ್‌ಗಳಿಸಿದರು.

ನ್ಯೂಜಿಲೆಂಡ್‌ ಬ್ಯಾಟಿಂಗ್‌: 17 ರನ್‌
ಬೌಲರ್: ಜಸ್‌ಪ್ರೀತ್ ಬೂಮ್ರಾ

1ನೇ ಎಸೆತ:ಕೇನ್‌ ವಿಲಿಯಮ್ಸನ್‌, 1
2ನೇ ಎಸೆತ:ಮಾರ್ಟಿನ್‌ಗಪ್ಟಿಲ್‌, 1
3ನೇ ಎಸೆತ:ಕೇನ್‌ ವಿಲಿಯಮ್ಸನ್‌, 6
4ನೇ ಎಸೆತ:ಕೇನ್‌ ವಿಲಿಯಮ್ಸನ್‌, 4
5ನೇ ಎಸೆತ:ಕೇನ್‌ ವಿಲಿಯಮ್ಸನ್‌, ಬೈಸ್‌1
6ನೇ ಎಸೆತ: ಮಾರ್ಟಿನ್‌ಗಪ್ಟಿಲ್‌, 4

ಭಾರತ ಬ್ಯಾಟಿಂಗ್‌: 20ರನ್‌
ಬೌಲರ್: ಟಿಮ್‌ ಸೌಥಿ

1ನೇ ಎಸೆತ:ರೋಹಿತ್‌ ಶರ್ಮಾ,2
2ನೇ ಎಸೆತ:
ರೋಹಿತ್‌ ಶರ್ಮಾ, 1
3ನೇ ಎಸೆತ: ಕೆ.ಎಲ್.ರಾಹುಲ್‌, 4
4ನೇ ಎಸೆತ:ಕೆ.ಎಲ್.ರಾಹುಲ್‌, 1
5ನೇ ಎಸೆತ:ರೋಹಿತ್‌ ಶರ್ಮಾ, 6
6ನೇ ಎಸೆತ:ರೋಹಿತ್‌ ಶರ್ಮಾ, 6

**

ಜನವರಿ 31,2020:ಭಾರತ ವಿರುದ್ಧ ಟಿ20 ಪಂದ್ಯದಲ್ಲಿ ಸೋಲು
ಐದು ಪಂದ್ಯಗಳ ಸರಣಿ ನಾಲ್ಕನೇ ಪಂದ್ಯವೂ ಸೂಪರ್ ಓವರ್‌ನಲ್ಲಿ ಅಂತ್ಯವಾಯಿತು. ವೆಲ್ಲಿಂಗ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ನಡುವೆಯೂ 165 ರನ್‌ ಕಲೆಹಾಕಿತ್ತು. ಕನ್ನಡಿಗ ಮನೀಷ್ ಪಾಂಡೆ 50 ರನ್‌ ಗಳಿಸಿ ತಂಡಕ್ಕೆ ನೆರವಾಗಿದ್ದರು.

ಈ ಮೊತ್ತದೆರು ಕಿವೀಸ್‌ ಪಡೆಯ ಕಾಲಿನ್‌ ಮುನ್ರೊ (64) ಮತ್ತು ಟಿಮ್‌ ಸಿಫರ್ಟ್‌(57) ಅರ್ಧಶತಕ ಗಳಿಸಿ ಮಿಂಚಿದ್ದರು. ಅವರ ಆಟದ ಹೊರತಾಗಿಯೂ ಪಂದ್ಯ ಟೈ ಆಯಿತು. ಕೊನೆಯ ಓವರ್‌ನಲ್ಲಿ ಆತಿಥೇಯರಿಗೆ ಕೇವಲ 7 ರನ್‌ ಬೇಕಿತ್ತು. ವೇಗಿ ಶಾರ್ದೂಲ್‌ ಠಾಕೂರ್‌ ಆ ಮೊತ್ತವನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾದರು.ಕೊನೆಯ ಓವರ್‌ನಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡದ್ದು ಕಿವೀಸ್‌ಗೆ ಮುಳುವಾಯಿತು.

ಟಿ20 ಸರಣಿಯ 4ನೇ ಪಂದ್ಯದಲ್ಲಿ ಟಿಪ್‌ ಸೀಫರ್ಟ್‌ ರನೌಟ್‌ ಆದದ್ದು

ಹೀಗಾಗಿ ಸೂಪರ್‌ ಓವರ್ ನಡೆಯಿತು.ಬೂಮ್ರಾ ಎಸೆದ ಈ ಓವರ್‌ನಲ್ಲಿ ಕಿವೀಸ್‌ 13ರನ್‌ ಗಳಿಸಿತು. ಈ ಮೊತ್ತವನ್ನು ಭಾರತ ಐದೇ ಎಸೆತಗಳಲ್ಲಿ ಮುಟ್ಟಿ ಗೆಲುವಿನ ನಗೆ ಬೀರಿತು.

ನ್ಯೂಜಿಲೆಂಡ್‌ ಬ್ಯಾಟಿಂಗ್‌: 1ವಿಕೆಟ್‌ಗೆ 13 ರನ್‌
ಬೌಲರ್: ಜಸ್‌ಪ್ರೀತ್ ಬೂಮ್ರಾ

1ನೇ ಎಸೆತ:ಟಿಮ್‌ ಸೀಫರ್ಟ್‌, 2
2ನೇ ಎಸೆತ:ಟಿಮ್‌ ಸೀಫರ್ಟ್‌, 4
3ನೇ ಎಸೆತ:ಟಿಮ್‌ ಸೀಫರ್ಟ್‌, 2
4ನೇ ಎಸೆತ:ಟಿಮ್‌ ಸೀಫರ್ಟ್‌, ಔಟ್‌
5ನೇ ಎಸೆತ:ಕಾಲಿನ್‌ ಮುನ್ರೊ, 4
6ನೇ ಎಸೆತ: ಕಾಲಿನ್‌ ಮುನ್ರೊ, 1

ಭಾರತ ಬ್ಯಾಟಿಂಗ್‌: 1 ವಿಕೆಟ್‌ಗೆ 16ರನ್‌
ಬೌಲರ್: ಟಿಮ್‌ ಸೌಥಿ

1ನೇ ಎಸೆತ:ಕೆ.ಎಲ್‌. ರಾಹುಲ್‌, 6
2ನೇ ಎಸೆತ:ಕೆ.ಎಲ್‌. ರಾಹುಲ್‌, 4
3ನೇ ಎಸೆತ: ಕೆ.ಎಲ್.ರಾಹುಲ್‌, ಔಟ್‌
4ನೇ ಎಸೆತ:ವಿರಾಟ್‌ ಕೊಹ್ಲಿ, 2
5ನೇ ಎಸೆತ:ವಿರಾಟ್‌ ಕೊಹ್ಲಿ, 4

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT