ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕದಿನ ಸರಣಿ | ಮೊದಲೆರಡು ಪಂದ್ಯಗಳಿಗೆ ವಿಲಿಯಮ್ಸನ್ ಅಲಭ್ಯ: ಲಾಥಮ್‌ಗೆ ನಾಯಕತ್ವ

ಮೂರು ಪಂದ್ಯಗಳ ಏಕದಿನ ಸರಣಿ ನಾಳೆಯಿಂದ
Last Updated 4 ಫೆಬ್ರುವರಿ 2020, 11:36 IST
ಅಕ್ಷರ ಗಾತ್ರ

ವೆಲ್ಲಿಂಗ್ಟನ್:ಭಾರತ ವಿರುದ್ಧದ ಟಿ20 ಸರಣಿಯ ವೇಳೆ ಗಾಯಗೊಂಡಿದ್ದ ನ್ಯೂಜಿಲೆಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಏಕದಿನ ಸರಣಿಯ ಮೊದಲೆರಡು ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಅವರ ಬದಲು ವಿಕೆಟ್‌ ಕೀಪರ್‌ ಟಾಮ್‌ ಲಾಥಮ್‌ ತಂಡ ಮುನ್ನಡೆಸಲಿದ್ದಾರೆ.

ಮೂರನೇ ಪಂದ್ಯದಲ್ಲಿಫೀಲ್ಡಿಂಗ್‌ ಮಾಡುತ್ತಿದ್ದಾಗ ವಿಲಿಯಮ್ಸನ್‌ಗೆ ಭುಜದ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರು ನಾಲ್ಕು ಮತ್ತು ಐದನೇ ಪಂದ್ಯದಿಂದಲೂ ಹೊರಗುಳಿದಿದ್ದರು.

ಈ ಬಗ್ಗೆ ಮಾತನಾಡಿರುವ ತಂಡದ ಫಿಸಿಯೊ ವಿಜಯ್‌ ವಲ್ಲಭ್‌, ‘ಯಾವುದೇ ಗಂಭೀರ ಸಮಸ್ಯೆ ಇಲ್ಲ ಎಂಬುದು ಎಕ್ಸ್‌–ರೇ ಬಳಿಕತಿಳಿದು ಬಂದಿದೆ. ಆದರೂ ಕೆಲದಿನ ವಿಶ್ರಾಂತಿ ತೆಗೆದುಕೊಳ್ಳುವ ಅಗತ್ಯವಿದೆ.ಫಿಟ್‌ನೆಸ್‌ ತರಬೇತಿಯನ್ನು ಮುಂದುವರಿಸಲಿದ್ದಾರೆ. ಮುಂದಿನ ಮಂಗಳವಾರ ನಡೆಯಲಿರುವ ಮೂರನೇ ಪಂದ್ಯಕ್ಕಾಗಿ ಶುಕ್ರವಾರದಿಂದ ಬ್ಯಾಟಿಂಗ್‌ ಅಭ್ಯಾಸ ಆರಂಭಿಸಲಿದ್ದಾರೆ’ ಎಂದು ತಿಳಿಸಿದ್ದಾರೆ.

ಕೇನ್ ವಿಲಿಯಮ್ಸ್‌ನ ಅಲಭ್ಯತೆಯಿಂದಾಗಿ ಮಾರ್ಕ್‌ಚಾಪ್‌ಮನ್‌ ತಂಡ ಕೂಡಿಕೊಳ್ಳಲಿದ್ದಾರೆ. ಮಾರ್ಕ್‌ 2015ರಲ್ಲಿಹಾಂಗ್‌ಕಾಂಗ್‌ ಪರ ಆಡುವ ಮೂಲಕಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಯುಎಇ ವಿರುದ್ಧ ಆಡಿದ ತಮ್ಮ ಮೊದಲ ಪಂದ್ಯದಲ್ಲಿ124 ರನ್‌ ಗಳಿಸಿ ಮಿಂಚಿದ್ದರು.ಆದರೆ, ಆದರೆ ಕಳೆದ ವರ್ಷ ಇಂಗ್ಲೆಂಡ್‌ ವಿರುದ್ಧದ ಇಂಗ್ಲೆಂಡ್‌ ವಿರುದ್ಧ ಮೂರು ಪಂದ್ಯಗಳಿಂದ ಕೇವಲ 9 ರನ್‌ ಗಳಿಸಲಷ್ಟೇ ಶಕ್ತವಾಗಿದ್ದರು.

ಏಕದಿನ ಸರಣಿಯ ಮೊದಲ ಪಂದ್ಯವುನಾಳೆಯಿಂದಹ್ಯಾಮಿಲ್ಟನ್‌ನಲ್ಲಿ ಆರಂಭವಾಗಲಿದೆ.ಎರಡನೇ ಪಂದ್ಯ ಫೆಬ್ರುವರಿ 8ರಂದು ಆಕ್ಲೆಂಡ್‌ನಲ್ಲಿ ಮತ್ತು ಮೂರನೇ ಪಂದ್ಯ ಮೌಂಟ್‌ ಮಾಂಗನೂಯಿಯಲ್ಲಿ ನಡೆಯಲಿದೆ.ಟೆಸ್ಟ್ ಪಂದ್ಯಗಳು ಫೆ.21 ಹಾಗೂ ಫೆ.29ರಿಂದ ಆರಂಭವಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT