ಶುಕ್ರವಾರ, ಆಗಸ್ಟ್ 12, 2022
22 °C

IND vs NZ WTC Final: ಫೈನಲ್‌ ಆರಂಭಕ್ಕೆ ಮಳೆಯ ಅಡ್ಡಗಾಲು

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಸೌತಾಂಪ್ಟನ್ (ಪಿಟಿಐ): ಕ್ರಿಕೆಟ್‌ ಇತಿಹಾಸದ ಮೊಟ್ಟಮೊದಲ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ ಪಂದ್ಯದ ಮೊದಲ ದಿನವು ಮಳೆಗೆ ಆಹುತಿಯಾಯಿತು. 

ಏಜಿಸ್ ಬೌಲ್ ಕ್ರೀಡಾಂಗಣದಲ್ಲಿ ಶುಕ್ರವಾರ ಸುರಿದ ಮಳೆಯಿಂದಾಗಿ ಟಾಸ್ ಮಾಡಲು ಕೂಡ ಅವಕಾಶವಾಗಲಿಲ್ಲ. ಸಂಜೆ ಮಳೆ ನಿಂತ ನಂತರ ಹೊರಾಂಗಣವು ಒದ್ದೆಯಾದ ಕಾರಣ ಆಟವನ್ನು ಆರಂಭಿಸಲಿಲ್ಲ. ರಾತ್ರಿ 7.30ರ (ಭಾರತೀಯ ಕಾಲಮಾನ) ಸುಮಾರಿಗೆ ಅಂಗಣ ಪರಿಶೀಲಿಸಿದ ಅಂಪೈರ್‌ ಮೈಕೆಲ್ ಗೌ ಮತ್ತು ರಿಚರ್ಡ್ ಇಲಿಂಗ್‌ವರ್ಥ್ ಅವರು ಆಟ ಆರಂಭಿಸದಿರಲು ನಿರ್ಧರಿಸಿದರು.

ಆದರೆ ಈ ಪಂದ್ಯಕ್ಕೆ ಒಂದು ಕಾಯ್ದಿಟ್ಟ ದಿನ ಇರುವುದರಿಂದ ಶನಿವಾರದಿಂದ ಪಂದ್ಯವನ್ನು ಆರಂಭಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: 

UPDATE - Unfortunately, play on Day 1 has been called off due to rains. 10.30 AM local time start tomorrow.#WTC21

ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಯ  ನಿಯಮದ ಪ್ರಕಾರ ಪಂದ್ಯದ ಆರನೇ ದಿನವನ್ನು ಕಾಯ್ದಿರಿಸಲಾಗಿದೆ.  ಸೌತಾಂಪ್ಟನ್‌ನಲ್ಲಿ ಮಳೆಯಾಗುವ ಬಗ್ಗೆ ಮೊದಲೇ ಹವಾಮಾನ ಮುನ್ಸೂಚನೆ ಇದ್ದ ಕಾರಣ, ಕಾಯ್ದಿಟ್ಟ ದಿನವನ್ನು ನಿಗದಿಪಡಿಸಲಾಗಿತ್ತು.

ಗುರುವಾರ ರಾತ್ರಿಯಿಂದಲೇ ಮಳೆ ಆರಂಭವಾಗಿತ್ತು. ಶುಕ್ರವಾರದ ಮಧ್ಯಾಹ್ನದವರೆಗೂ ಸುರಿಯಿತು. ಮೈದಾನದಲ್ಲಿ ಉತ್ತಮ ಒಳಚರಂಡಿ ವ್ಯವಸ್ಥೆ ಇದ್ದರೂ ಹೊರಾಂಗಣವು ಸಂಜೆಯವರೆಗೂ ಒಣಗಲಿಲ್ಲ.

ಇದನ್ನೂ ಓದಿ: 

 

ಫೈನಲ್ ಪಂದ್ಯಕ್ಕೆ ಸೌತಾಂಪ್ಟನ್ ಕ್ರೀಡಾಂಗಣವನ್ನು ಆಯ್ಕೆ ಮಾಡುವಾಗ ಐಸಿಸಿ ಮತ್ತು ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಮಂಡಳಿ (ಇಸಿಬಿ) ಗಳು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಸಹಮತ ಪಡೆದಿದ್ದವು ಎಂಬ ಚರ್ಚೆಗಳು ಈಗ ನಡೆಯುತ್ತಿವೆ. ಇಲ್ಲಿಯ ಏಜಿಸ್ ಬೌಲ್ ಕ್ರೀಡಾಂಗಣ ಮತ್ತು ಆಟಗಾರರ ಹೋಟೆಲ್ ಒಂದಕ್ಕೊಂದು ಹೊಂದಿಕೊಂಡಿವೆ. ಬಯೋಬಬಲ್ ವ್ಯವಸ್ಥೆಯನ್ನು ಜಾರಿಗೊಳಿಸಲು ಅತ್ಯಂತ ಸೂಕ್ತ ತಾಣ ಎಂಬ ಕಾರಣಕ್ಕೆ ಇಲ್ಲಿ ಪಂದ್ಯವನ್ನು ಆಯೋಜಿಸಲಾಗಿದೆ.

ಇಂಗ್ಲೆಂಡ್‌ನಲ್ಲಿ ಹವಾಮಾನವು ಯಾವಾಗಲೂ ಅನಿರೀಕ್ಷಿತವಾಗಿರುತ್ತದೆ. ಇಲ್ಲಿ ಬಹಳಷ್ಟು ಪಂದ್ಯಗಳು ನಡೆದ ಸಂದರ್ಭದಲ್ಲಿ ಮಳೆ ಬಂದಿರುವ ಉದಾಹರಣೆಗಳು ಇವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು