ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SL: ಜಡೇಜ ಭರ್ಜರಿ ಶತಕ, ಅಶ್ವಿನ್ ಫಿಫ್ಟಿ; ಭೋಜನ ವಿರಾಮಕ್ಕೆ ಭಾರತ 468/7

Last Updated 5 ಮಾರ್ಚ್ 2022, 6:25 IST
ಅಕ್ಷರ ಗಾತ್ರ

ಮೊಹಾಲಿ: ಪ್ರವಾಸಿ ಶ್ರೀಲಂಕಾ ವಿರುದ್ಧ ಇಲ್ಲಿನ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲೂ ಭಾರತೀಯ ಬ್ಯಾಟರ್‌ಗಳು ಭರ್ಜರಿ ಆಟವನ್ನು ಪ್ರದರ್ಶಿಸಿದ್ದಾರೆ.

ಆಲ್‌ರೌಂಡರ್ ರವೀಂದ್ರ ಜಡೇಜ ಅಮೋಘ ಶತಕ (102*) ಹಾಗೂ ರವಿಚಂದ್ರನ್ ಅಶ್ವಿನ್ ಆಕರ್ಷಕ ಅರ್ಧಶತಕದ (61) ನೆರವಿನಿಂದ ಭಾರತ ತಂಡವು ಎರಡನೇ ದಿನದಾಟದ ಊಟದ ವಿರಾಮದ ಹೊತ್ತಿಗೆ 112 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 468 ರನ್ ಪೇರಿಸಿದೆ.

ಊಟದ ವಿರಾಮಕ್ಕೆ ಕೆಲವೇ ಹೊತ್ತು ಇರುವಾಗ ಭಾರತಕ್ಕೆ ಅಶ್ವಿನ್ ವಿಕೆಟ್ ನಷ್ಟವಾಯಿತು. 82 ಎಸೆತಗಳನ್ನು ಎದುರಿಸಿದ ಅಶ್ವಿನ್ ಎಂಟು ಬೌಂಡರಿಗಳ ನೆರವಿನಿಂದ 61 ರನ್ ಗಳಿಸಿದರು.

ಅಲ್ಲದೆ ಜಡೇಜ ಅವರೊಂದಿಗೆ ಏಳನೇ ವಿಕೆಟ್‌ಗೆ 130 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.

ಇನ್ನೊಂದೆಡೆ ಮನಮೋಹಕ ಇನ್ನಿಂಗ್ಸ್ ಕಟ್ಟಿದ ಜಡೇಜ, ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡನೇ ಶತಕ ದಾಖಲಿಸಿದರು. 166 ಎಸೆತಗಳನ್ನು ಎದುರಿಸಿದ ಜಡೇಜ 10 ಬೌಂಡರಿ ನೆರವಿನಿಂದ 102 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಅವರಿಗೆ ಜಯಂತ್ ಯಾದವ್ (2*) ಸಾಥ್ ನೀಡುತ್ತಿದ್ದಾರೆ.

ಈ ಮೊದಲು ರಿಷಬ್ ಪಂತ್ (96), ಹನುಮ ವಿಹಾರಿ (58) ಹಾಗೂ ವಿರಾಟ್ ಕೊಹ್ಲಿ (45) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು ಮೊದಲ ದಿನದಾಟದಲ್ಲಿ ಆರು ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT